ನವದೆಹಲಿ: ಭಾರತದ ನವೋದ್ಯಮಗಳಲ್ಲಿ ಬಂಡವಾಳ ಹೂಡಿಕೆಯು ಈ ವರ್ಷದ ಜನವರಿ–ಜೂನ್ ಅವಧಿಯಲ್ಲಿ ಶೇಕಡ 36ರಷ್ಟು ಇಳಿಕೆ ಕಂಡಿದ್ದು, ₹31,160 ಕೋಟಿಗೆ ತಲುಪಿದೆ. ನಾಲ್ಕೂವರೆ ವರ್ಷಗಳಲ್ಲಿ ಆಗಿರುವ ಕನಿಷ್ಠ ಹೂಡಿಕೆ ಇದಾಗಿದೆ ಎಂದು ಪಿಡಬ್ಲ್ಯುಸಿ ಇಂಡಿಯಾ ವರದಿ ತಿಳಿಸಿದೆ.

ಫಿನ್‌ಟೆಕ್, ಎಸ್‌ಎಎಎಸ್ ಮತ್ತು ಡಿ2ಸಿ ಹೆಚ್ಚು ಬಂಡವಾಳ ಆಕರ್ಷಿಸಿದ ವಲಯಗಳಾಗಿವೆ. 2022ನೇ ಕ್ಯಾಲೆಂಡರ್ ವರ್ಷದ ಜನವರಿ–ಜೂನ್ ಅವಧಿಯಲ್ಲಿ ₹48,380 ಕೋಟಿ ಬಂಡವಾಳ ಹೂಡಿಕೆ ಆಗಿತ್ತು.

ದೇಶದ ಪ್ರಮುಖ ನವೋದ್ಯಮ ನಗರಗಳ ಪೈಕಿ ಬೆಂಗಳೂರು, ಎನ್‌ಸಿಆರ್ ಮತ್ತು ಮುಂಬೈ ಮುಂಚೂಣಿಯಲ್ಲಿ ಇವೆ. ಈ ವರ್ಷದ ಜನವರಿ–ಜೂನ್ ಅವಧಿಯಲ್ಲಿ ಆಗಿರುವ ಒಟ್ಟು ಹೂಡಿಕೆಯಲ್ಲಿ ಈ ನಗರಗಳ ಪಾಲು ಶೇ 83ರಷ್ಟು ಇದೆ ಎಂದು ವರದಿ ತಿಳಿಸಿದೆ.

ಚೆನ್ನೈ ಹೊರತುಪಡಿಸಿ ಉಳಿದ ಎಲ್ಲ ನಗರಗಳಲ್ಲಿ ನವೋದ್ಯಮಗಳ ಮೇಲಿನ ಹೂಡಿಕೆ ತಗ್ಗಿದೆ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.