ಮುಂಬೈ: 2023–24ನೇ ಹಣಕಾಸು ವರ್ಷದಲ್ಲಿ ಹೂಡಿಕೆದಾರರು ₹27,031 ಕೋಟಿ ಮೌಲ್ಯದ ಚಿನ್ನದ ಬಾಂಡ್‌ಗಳನ್ನು ಖರೀದಿಸಿದ್ದಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಕಳೆದ ಹಣಕಾಸು ವರ್ಷದಲ್ಲಿ 44.34 ಟನ್ ಚಿನ್ನವನ್ನು ಬಾಂಡ್‌ಗಳ ಮೂಲಕ ಖರೀದಿಸಿದ್ದಾರೆ. 2022–23ರ ಇದೇ ಅವಧಿಯಲ್ಲಿ 12.26 ಟನ್ ಖರೀದಿಸಿದ್ದು, ಇದರ ಮೌಲ್ಯ ₹6,551 ಕೋಟಿ ಆಗಿತ್ತು. ಇದಕ್ಕೆ ಹೋಲಿಸಿದರೆ ಚಿನ್ನದ ಖರೀದಿ ಪ್ರಮಾಣದಲ್ಲಿ ನಾಲ್ಕು ಪಟ್ಟು ಏರಿಕೆಯಾಗಿದೆ.

‘ಹೆಚ್ಚಿನ ಆದಾಯ ಮತ್ತು ತೆರಿಗೆ ಪ್ರಯೋಜನ ಪಡೆಯುವ ಉದ್ದೇಶದಿಂದಾಗಿ ಖರೀದಿ ಪ್ರಮಾಣದಲ್ಲಿ ಏರಿಕೆಯಾಗಿದೆ’ ಎಂದು ಆರ್‌ಬಿಐ ತಿಳಿಸಿದೆ.

2015ರ ನವೆಂಬರ್‌ನಲ್ಲಿ ಚಿನ್ನದ ಬಾಂಡ್ ಖರೀದಿ ಯೋಜನೆ ಆರಂಭಿಸಲಾಯಿತು. ಇಲ್ಲಿಯವರೆಗೆ 67 ಕಂತುಗಳಲ್ಲಿ ₹72,274 ಕೋಟಿ ಮೌಲ್ಯದ ಚಿನ್ನ ಖರೀದಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.