ನವದೆಹಲಿ: ದೇಶದ ಐ.ಟಿ. ಉದ್ಯಮದಲ್ಲಿ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಸರಿಸುಮಾರು 60 ಸಾವಿರ ಮಂದಿ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಂಡಿದ್ದಾರೆ ಎಂದು ನೇಮಕಾತಿ ಏಜೆನ್ಸಿಗಳ ಒಕ್ಕೂಟವಾದ ಇಂಡಿಯನ್ ಸ್ಟಾಫಿಂಗ್ ಫೆಡರೇಷನ್ (ಐಎಸ್ಎಫ್) ಹೇಳಿದೆ.

ಈ ಒಕ್ಕೂಟವು 120ಕ್ಕೂ ಹೆಚ್ಚಿನ ಏಜೆನ್ಸಿಗಳನ್ನು ಒಳಗೊಂಡಿದೆ. ಕಂಪನಿಗಳು ಗುತ್ತಿಗೆ ಏಜೆನ್ಸಿಗಳ ಮೂಲಕ ನೇಮಕ ಮಾಡಿಕೊಳ್ಳುವ ನೌಕರರ ಪ್ರಮಾಣವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 7.7ರಷ್ಟು ಕಡಿಮೆ ಆಗಿದೆ. ‘ಐ.ಟಿ. ವಲಯದಲ್ಲಿ ತಾತ್ಕಾಲಿಕ ಉದ್ಯೋಗಿಗಳ ನೇಮಕಾತಿಯು ಕಡಿಮೆ ಆಗಿರುವುದು ಜಾಗತಿಕ ಮಟ್ಟದಲ್ಲಿ ಐ.ಟಿ. ವಲಯದಲ್ಲಿ ನೇಮಕಾತಿಗಳು ಕಡಿಮೆ ಆಗುತ್ತಿರುವುದನ್ನು ಪ್ರತಿಫಲಿಸುತ್ತಿದೆ’ ಎಂದು ಒಕ್ಕೂಟದ ಅಧ್ಯಕ್ಷ ಲೋಹಿತ್ ಭಾಟಿಯಾ ಹೇಳಿದ್ದಾರೆ.

ಆದರೆ, ಮಾರುಕಟ್ಟೆಯಲ್ಲಿ ಬೇಡಿಕೆ ಚೆನ್ನಾಗಿ ಇರುವ ಕಾರಣ ತಯಾರಿಕೆ, ಸರಕು ಸಾಗಣೆ ಮತ್ತು ರಿಟೇಲ್ ವಲಯಗಳಲ್ಲಿ ನೇಮಕಾತಿಗಳು ಕಡಿಮೆ ಆಗಿಲ್ಲ ಎಂದು ಅವರು ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕ ತೀವ್ರವಾಗಿದ್ದ ಹೊತ್ತಿನಲ್ಲಿ ಐ.ಟಿ. ಸೇವಾ ವಲಯವು ಇತರ ಉದ್ದಿಮೆಗಳಿಗೆ ಆನ್‌ಲೈನ್ ಮೂಲಕ ಉತ್ಪನ್ನಗಳ ಮಾರಾಟ, ಮನೆಯಿಂದಲೇ ಕೆಲಸ ಮಾಡುವುದನ್ನು ಸಾಧ್ಯವಾಗಿಸಲು ನೆರವಾಯಿತು. ಆದರೆ, ಸಾಂಕ್ರಾಮಿಕದ ಪ್ರಭಾವ ಕಡಿಮೆ ಆದ ನಂತರದಲ್ಲಿ ನೌಕರರು ಕಚೇರಿಗಳಿಂದ ಕೆಲಸ ಮಾಡಲು ಆರಂಭಿಸಿದ್ದಾರೆ. ಐ.ಟಿ. ಸೇವೆಗಳಿಗೆ ಬೇಡಿಕೆ ಕಡಿಮೆಯಾಗುವಲ್ಲಿ ಇದೂ ಒಂದು ಕಾರಣವಾಗಿದೆ.

ಹಣದುಬ್ಬರ ಏರಿಕೆ, ಪೂರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಮತ್ತು ರಷ್ಯಾ–ಉಕ್ರೇನ್ ಯುದ್ಧದ ಪರಿಣಾಮಗಳಿಂದಾಗಿ ಭಾರತದ ಐ.ಟಿ. ಸೇವಾ ವಲಯವು ಸಾಂಕ್ರಾಮಿಕದ ಅವಧಿಯಲ್ಲಿ ಕಂಡಿದ್ದ ತೀವ್ರಗತಿಯ ಬೆಳವಣಿಗೆಯು ಕೊನೆಗೊಳ್ಳಲಿದೆ ಎಂದು ಜೆ.ಪಿ. ಮಾರ್ಗನ್ ಸಂಸ್ಥೆ
ಅಂದಾಜಿಸಿದೆ.

ಸಾಫ್ಟ್‌ವೇರ್ ಉದ್ಯಮದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳುವ ಪ್ರವೃತ್ತಿಯು ಮುಂದಿನ ಕೆಲವು ತ್ರೈಮಾಸಿಕಗಳಲ್ಲಿಯೂ ಕಡಿಮೆ ಮಟ್ಟದಲ್ಲಿರಬಹುದು ಎಂದು ಭಾಟಿಯಾ ಅವರು ಅಂದಾಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.