ಮುಂಬೈ : ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ ಆನ್ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ವೇದಿಕೆ ಮೂಲಕ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬುಧವಾರ ನಿರ್ಬಂಧ ಹೇರಿದೆ. ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಅನುಸರಿಸುವಂತೆ ಪದೇ ಪದೇ ಸೂಚಿಸಿದರೂ ಅದನ್ನು ಪಾಲಿಸದಿರುವುದು ಆರ್ಬಿಐನ ಈಗಿನ ಕ್ರಮಕ್ಕೆ ಕಾರಣ. ಕ್ರೆಡಿಟ್ ಕಾರ್ಡನ್ನು ಕೂಡ ಹೊಸದಾಗಿ ನೀಡುವಂತಿಲ್ಲ ಎಂದು ಆರ್ಬಿಐ ಹೇಳಿದೆ. ಇವೆಲ್ಲವೂ ತಕ್ಷಣದಿಂದಲೇ ಜಾರಿಗೆ ಬರಲಿವೆ.

ಬ್ಯಾಂಕ್ನ ಮಾಹಿತಿ ತಂತ್ರಜ್ಞಾನ ಅಪಾಯ ನಿರ್ವಹಣೆಯಲ್ಲಿ ಗಂಭೀರ ದೋಷಗಳಿವೆ ಎಂದು ಆರ್ಬಿಐ ಹೇಳಿದೆ. 2022 ಮತ್ತು 2023ರಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ನ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಆರ್ಬಿಐ ಪರಿಶೀಲನೆಗೆ ಒಳಪಡಿಸಿತ್ತು. ಈ ಸಂದರ್ಭದಲ್ಲಿ ಹಲವು ದೋಷಗಳು ಪತ್ತೆಯಾಗಿದ್ದವು. ಈ ದೋಷಗಳನ್ನು ಸಮಗ್ರವಾಗಿ ಮತ್ತು ಸಕಾಲದಲ್ಲಿ ಸರಿಪಡಿಸಲು ಬ್ಯಾಂಕ್ ವಿಫಲವಾಗಿತ್ತು.

ಈಗ ಅಸ್ತಿತ್ವದಲ್ಲಿರುವ ಆನ್ಲೈನ್ ಗ್ರಾಹಕರಿಗೆ ಈ ಕ್ರಮವು ಅನ್ವಯಿಸುವುದಿಲ್ಲ. ಈಗಾಗಲೇ, ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಸೇವೆಯನ್ನು ಮುಂದುವರಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ.

2020ರ ಡಿಸೆಂಬರ್ನಲ್ಲಿ ಎಚ್ಡಿಎಫ್ಸಿ ಬ್ಯಾಂಕ್ನ ಡಿಜಿಟಲ್ ಪೇಮೆಂಟ್ ಸೇವೆಯಲ್ಲಿಯೂ ಇದೇ ಮಾದರಿಯ ಸಮಸ್ಯೆ ತಲೆದೋರಿತ್ತು. ಆಗ ಅದರ ವಿರುದ್ಧವೂ ನಿರ್ಬಂಧ ಹೇರಲಾಗಿತ್ತು.

ಲೋಪ ಏನು?:

ಬ್ಯಾಂಕ್ನ ಐ.ಟಿ ತಪಶೀಲು ನಿರ್ವಹಣೆ, ಬಳಕೆದಾರರ ದತ್ತಾಂಶ ನಿರ್ವಹಣೆ, ಕಾರ್ಯಾಚರಣೆಯ ಅಪಾಯದ ಮೇಲ್ವಿಚಾರಣೆ, ದತ್ತಾಂಶ ಭದ್ರತೆ, ದತ್ತಾಂಶ ಸೋರಿಕೆ ತಡೆಯ ಕಾರ್ಯತಂತ್ರಕ್ಕೆ ಸಂಬಂಧಿಸಿದ ಕ್ರಮಗಳು ಅಪಾಯದ ಸ್ಥಿತಿಯಲ್ಲಿವೆ ಎಂದು ಹೇಳಿದೆ.

ಈ ಎರಡು ವರ್ಷಗಳಿಗೆ ಸಂಬಂಧಿಸಿದಂತೆ ತಲೆದೋರಿರುವ ದೋಷಗಳ ಬಗ್ಗೆ ಬ್ಯಾಂಕ್ ಸಲ್ಲಿಸಿರುವ ವರದಿಯು ಸಮಪರ್ಕವಾಗಿಲ್ಲ. ಮುಂದಿನ ದಿನಗಳಲ್ಲಿ ಬ್ಯಾಂಕ್ನ ಡಿಜಿಟಲ್ ಬ್ಯಾಂಕಿಂಗ್ ಮತ್ತು ಪೇಮೆಂಟ್ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ ತಲೆದೋರದಂತೆ ಮುಂಜಾಗ್ರತೆ ವಹಿಸಬೇಕಿದೆ. ಹಾಗಾಗಿ, ಗ್ರಾಹಕರ ಹಿತದೃಷ್ಟಿಯಿಂದ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 35ಎ ಅನ್ವಯ ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ವ್ಯವಸ್ಥೆಯನ್ನು ಬಲಪಡಿಸುವುದಕ್ಕೆ ಸಂಬಂಧಿಸಿದಂತೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಆರ್ಬಿಐ ಸೂಚಿಸಿರುವ ನಿಯಮಾವಳಿಗಳ ಅನ್ವಯ ದೋಷಗಳನ್ನು ಸರಿಪಡಿಸಿಕೊಳ್ಳಲು ಬದ್ಧವಾಗಿದೆ
-ಕೋಟಕ್ ಮಹೀಂದ್ರ ಬ್ಯಾಂಕ್

ಸ್ಥಗಿತಗೊಂಡಿದ್ದ ಡಿಜಿಟಲ್ ಸೇವೆ

ಕೋಟಕ್ ಬ್ಯಾಂಕ್ನ ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯ ಮತ್ತು ಅಪಾಯ ನಿರ್ವಹಣಾ ಚೌಕಟ್ಟು ಸದೃಢವಾಗಿಲ್ಲ ಎಂದು ಆರ್ಬಿಐ ಹೇಳಿದೆ. ಹಾಗಾಗಿ ಕೋರ್ ಬ್ಯಾಂಕಿಂಗ್ ಸಲ್ಯೂಷನ್ಸ್ (ಸಿಬಿಎಸ್) ಆನ್ಲೈನ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ಸೇವೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಹಲವು ಬಾರಿ ವ್ಯತ್ಯಯವಾಗಿದೆ. ಏಪ್ರಿಲ್ 15ರಂದು ಈ ಸೇವೆಯು ಸ್ಥಗಿತಗೊಂಡಿತ್ತು. ಇದರಿಂದ ಗ್ರಾಹಕರು ತೀವ್ರ ತೊಂದರೆಗೆ ಸಿಲುಕಿದ್ದರು ಎಂದು ಹೇಳಿದೆ. ಬ್ಯಾಂಕ್ ತನ್ನ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಕಾರ್ಯಾಚರಣೆಯ ಚೇತರಿಕೆಗೆ ಒತ್ತು ನೀಡುವಲ್ಲಿ ವಿಫಲವಾಗಿದೆ ಎಂದು ತಿಳಿಸಿದೆ.

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.