ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

iPhone 16 | ಆ್ಯಪಲ್ ಫೋನ್‌ಗಳ ಮಾರಾಟ: ಮೊಬೈಲ್ ಮಳಿಗೆಗಳ ಮುಂದೆ ಗ್ರಾಹಕರ ಸಾಲು

Published : 20 ಸೆಪ್ಟೆಂಬರ್ 2024, 5:08 IST
Last Updated : 20 ಸೆಪ್ಟೆಂಬರ್ 2024, 5:08 IST
ಫಾಲೋ ಮಾಡಿ
Comments

ನವದೆಹಲಿ: ಇತ್ತೀಚೆಗೆ ಬಿಡುಗಡೆಯಾದ ಆ್ಯಪಲ್ ಕಂಪನಿಯ ಐಫೋನ್‌ನ 16ನೇ ಸರಣಿಯ ವಿವಿಧ ಸ್ಮಾರ್ಟ್‌ಫೋನ್‌ಗಳ ಮಾರಾಟ ಭಾರತದಲ್ಲಿ ಶುಕ್ರವಾರದಿಂದ  (ಸೆ.20) ಆರಂಭವಾಗಿದೆ.

ಇಲ್ಲಿನ ಸಾಕೇತ್‌ ಮಾಲ್‌ನಲ್ಲಿರುವ ಆ್ಯಪಲ್‌ ಸ್ಟೋರ್‌ನಲ್ಲಿ ಮಾರಾಟ ನಡೆಯುತ್ತಿದೆ. ಸ್ಟೋರ್‌ ಹೊರಗೆ ಗ್ರಾಹಕರು ಸಾಲಿನಲ್ಲಿ ನಿಂತು ಫೋನ್‌ಗಳನ್ನು ಖರೀದಿ ಮಾಡುತ್ತಿದ್ದಾರೆ.

ದೆಹಲಿ, ಮುಂಬೈನ ಆ್ಯಪಲ್‌ ಸ್ಟೋರ್‌ಗಳು ಹಾಗೂ ವಿವಿಧ ಮೊಬೈಲ್‌ ಮಳಿಗೆಗಳ ಮುಂದೆ ಗ್ರಾಹಕರ ಉದ್ದನೆಯ ಸಾಲುಗಳು ಕಂಡುಬಂದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದೇ ಮೊದಲ ಬಾರಿಗೆ ಐಫೋನ್‌ಗಳು ಭಾರತದಲ್ಲಿ ಸಿದ್ಧವಾಗುತ್ತಿದೆ. ಆದರೆ ಭಾರತದಲ್ಲಿ ತಯಾರಾದ ಫೋನ್‌ಗಳು ಸದ್ಯಕ್ಕೆ ಮಾರಾಟವಾಗುತ್ತಿಲ್ಲ ಎಂದು ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.

‘ಇದೇ ಮೊದಲ ಬಾರಿಗೆ ಹಿಂದಿನ ಆವೃತ್ತಿಯ ದುಬಾರಿ ಮಾದರಿಯ ಫೋನ್‌ನ ಬೆಲೆಗಿಂತ ಅಗ್ಗದ ಬೆಲೆಗೆ 16 ಸರಣಿಯ ಐಫೋನ್‌ ಪ್ರೊ ಸರಣಿ ಮಾರಾಟವಾಗುತ್ತಿರುವುದು ವಿಶೇಷವಾಗಿದೆ. ಐಫೋನ್ 16 ಪ್ರೊ ಬೆಲೆ ₹1.19 ಲಕ್ಷ ಹಾಗೂ ಐಫೋನ್‌ 16 ಪ್ರೊ ಮ್ಯಾಕ್ಸ್‌ ಬೆಲೆ ₹1.44ಲಕ್ಷದಿಂದ ಲಭ್ಯ’ ಎಂದು ಕಂಪನಿ ಹೇಳಿದೆ.

ವರ್ಷದ ಹಿಂದೆ ಬಿಡುಗಡೆಯಾದ ಐಫೋನ್ 15 ಪ್ರೊ ಹಾಗೂ ಐಫೋನ್ 15 ಪ್ರೊ ಮ್ಯಾಕ್ಸ್‌ ಬೆಲೆಯು ಕ್ರಮವಾಗಿ ₹1.34 ಲಕ್ಷ ಹಾಗೂ ₹1.59 ಲಕ್ಷ ಇತ್ತು. 

ಐಫೋನ್ 16 ಪ್ರೊ ಹಾಗೂ ಐಫೋನ್ 16 ಪ್ರೊ ಮ್ಯಾಕ್ಸ್‌ ಫೋನ್‌ಗಳು 128ಜಿಬಿ, 256ಜಿಬಿ, 512ಜಿಬಿ ಹಾಗೂ 1 ಟಿಬಿ ಸೃತಿಕೋಶ ಸಾಮರ್ಥ್ಯದೊಂದಿಗೆ ಲಭ್ಯ. ಈವರೆಗಿನ ಐಫೋನ್‌ಗಳಲ್ಲೇ ಅತಿ ದೊಡ್ಡ ಡಿಸ್‌ಪ್ಲೇ 6.3 ಇಂಚು ಹಾಗೂ 6.9 ಇಂಚಿನ ಪರದೆಯುಳ್ಳ ಫೋನ್‌ಗಳು ಇವಾಗಿವೆ.

‘ಭಾರತದಲ್ಲಿ ತಯಾರಾದ ಐಫೋನ್‌ 16 ಹಾಗೂ ಐಫೋನ್‌ 16 ಪ್ಲಸ್‌ ಫೋನ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಐಫೋನ್‌ 16ರ ಬೆಲೆ ₹79,900ರಿಂದ ಆರಂಭವಾದರೆ, 16 ಪ್ಲಸ್‌ ಫೋನ್‌ ಬೆಲೆ ₹89,900ರಿಂದ ಲಭ್ಯ. ಈ ಫೋನ್‌ಗಳು 128ಜಿಬಿ, 256ಜಿಬಿ, 512ಜಿಬಿ ಸ್ಮೃತಿಕೋಶದ ಸಾಮರ್ಥ್ಯದೊಂದಿಗೆ ಲಭ್ಯ’ ಎಂದು ಕಂಪನಿ ಹೇಳಿದೆ. 

ಹೊಸ ಐಫೋನ್ 16 ಪ್ರೊ ಸರಣಿಯ ಫೋನ್‌ಗಳಲ್ಲಿ ಎ18 ಪ್ರೊ ಚಿಪ್‌ ಹಾಗೂ 6 ಕೋರ್ ಜಿಪಿಯು ಚಿಪ್‌ಸೆಟ್ ಇದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಕೃತಕ ಬುದ್ಧಿಮತ್ತೆಯನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ. ಎ18 ಚಿಪ್‌ಸೆಟ್‌ ಹಿಂದಿನ 15 ಸರಣಿಯ ಫೋನ್‌ಗಳಿಗಿಂತ ಶೇ 20ರಷ್ಟು ವೇಗ ಹೊಂದಿದೆ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT