ಇವಿಗಳ ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆ ಗಣನೀಯ ಪ್ರಮಾಣದಲ್ಲಿ ಸುಧಾರಿಸಿದೆ. ಅವುಗಳ ಬಗೆಗೆ ಜನರ ವಿಶ್ವಾಸ ಹೆಚ್ಚಾಗಿದೆ. ಇವಿಗಳಿಂದಾಗುವ ಉಳಿತಾಯವೂ, ಅವುಗಳ ಖರೀದಿಯಲ್ಲಿ ಆಗಿರುವ ಏರಿಕೆಗೆ ಪ್ರಮುಖ ಕಾರಣ. ಆದರೆ, ಅದೇ ಮಟ್ಟದಲ್ಲಿ ಚಾರ್ಜಿಂಗ್ ಘಟಕಗಳು ಸ್ಥಾಪನೆಯಾಗುತ್ತಿಲ್ಲ. ಬಸ್ಸು, ಲಾರಿ ಮತ್ತು ಕಾರುಗಳಿಗೆ ಸಾರ್ವಜನಿಕ ಚಾರ್ಜಿಂಗ್ ಘಟಕಗಳ ಅವಶ್ಯಕತೆ ಇದೆ. ಜತೆಗೆ ದ್ವಿಚಕ್ರ ವಾಹನಗಳಿಗಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ಚಾರ್ಜಿಂಗ್ ಘಟಕ ಆರಂಭಿಸುವುದನ್ನು ಉತ್ತೇಜಿಸಬೇಕು.
–ಪವನ್ ಮುಳುಕುಟ್ಲ, ವರ್ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ ನಿರ್ದೇಶಕ