ಬೆಂಗಳೂರು: ಪ್ಯಾಕೇಜ್ಡ್ ಆಹಾರ ಮತ್ತು ತಿನಿಸುಗಳನ್ನು ತಯಾರಿಸುವ ಎಂಟಿಆರ್ ಫುಡ್ಸ್, ಈಗ ಗೊಜ್ಜು ಮ್ಯಾಜಿಕ್ ಮಸಾಲಾ ಉತ್ಪನ್ನವನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ.

‘ಒಂದು ಮಸಾಲೆ, ಹಲವು ಗೊಜ್ಜು’ ತತ್ವದಡಿ ವೈವಿಧ್ಯಮಯ ಗೊಜ್ಜು ತಯಾರಿಸಲು ಈ ಮಸಾಲೆ ಬಳಸಬಹುದು.

‘ಗುಣಮಟ್ಟ ಮತ್ತು ರುಚಿಕರ ಪ್ಯಾಕೇಜ್ಡ್ ಆಹಾರ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇರುವ ಎಂಟಿಆರ್, ಈಗ ಗ್ರಾಹಕರ ಬಹುದಿನಗಳ ಬೇಡಿಕೆಯನ್ನು ‘ಗೊಜ್ಜು ಮ್ಯಾಜಿಕ್ ಮಸಾಲಾ’ ಮೂಲಕ ಈಡೇರಿಸಿದೆ. ಟೊಮೆಟೊ, ಹಾಗಲಕಾಯಿ, ಪೈನಾಪಲ್ ಮತ್ತು ಬೆಂಡೆಕಾಯಿ – ಹೀಗೆ ನಾಲ್ಕು ಬಗೆಯ ಗೊಜ್ಜು ಪರಿಚಯಿಸಲಾಗಿದೆ ಎಂದು ಕಂಪನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ (ಸಿಎಂಒ) ಸುನಯ್ ಭಾಸಿನ್ ಅವರು ತಿಳಿಸಿದ್ದಾರೆ.

20 ಮತ್ತು 60 ಗ್ರಾಂಗಳಲ್ಲಿ ಕ್ರಮವಾಗಿ ₹ 10 ಮತ್ತು ₹ 30ರ ದರದಲ್ಲಿ ಈ ಗೊಜ್ಜು ದೊರೆಯಲಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.