ನವದೆಹಲಿ: ಕಳೆದುಹೋದ ಅಥವಾ ಕಳ್ಳತನ ಆಗಿರುವ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡುವ ಅವಕಾಶವನ್ನು ಮಂಗಳವಾರದಿಂದ ದೇಶದಾದ್ಯಂತ ವಿಸ್ತರಿಸಲಾಗಿದೆ. ಈ ಸೌಲಭ್ಯ ಕಲ್ಪಿಸುವುದಕ್ಕಾಗಿ ದೂರಸಂಪರ್ಕ ಇಲಾಖೆಯು ‘ಸಂಚಾರ್ ಸಾಥಿ’ ಎಂಬ ಪೋರ್ಟಲ್ ಆರಂಭಿಸಿದೆ.

ಈ ಪೋರ್ಟಲ್ ಬಳಸಿ ಗ್ರಾಹಕರು ತಮ್ಮ ಮೊಬೈಲ್ ಫೋನ್ ಎಲ್ಲಿದೆ ಎಂಬುದನ್ನು ಪತ್ತೆ ಮಾಡಬಹುದು, ಅದನ್ನು ಬ್ಲಾಕ್ ಮಾಡಬಹುದು ಹಾಗೂ ಬಳಸಿದ ಫೋನ್ ಖರೀದಿಸುವ ಮೊದಲು ಅದರ ಅಸಲಿತನ ಪರೀಕ್ಷಿಸಬಹುದು ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ವಾಟ್ಸ್‌ಆ್ಯಪ್ ಕರೆಗಳ ಮೂಲಕ ನಡೆಯುತ್ತಿರುವ ವಂಚನೆಯ ಬಗ್ಗೆ ಪ್ರಶ್ನಿಸಿದಾಗ ವೈಷ್ಣವ್ ಅವರು, ‘ವಂಚನೆಯಲ್ಲಿ ತೊಡಗಿರುವ ಯಾವುದೇ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಲು ವಾಟ್ಸ್‌ಆ್ಯಪ್ ಕಂಪನಿ ಒಪ್ಪಿದೆ’ ಎಂದು ಉತ್ತರಿಸಿದ್ದಾರೆ. ವಂಚನೆಯಲ್ಲಿ ತೊಡಗಿದ ಕಾರಣಕ್ಕೆ 36 ಲಕ್ಷ ಮೊಬೈಲ್ ಸಂಪರ್ಕಗಳನ್ನು ಕಡಿತ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸಂಚಾರ್ ಸಾಥಿ ಪೋರ್ಟಲ್‌ನಲ್ಲಿ ಇರುವ ‘ನೋ ಯುವರ್ ಮೊಬೈಲ್’ ಸೌಲಭ್ಯವನ್ನು ಬಳಸಿ ಗ್ರಾಹಕರು ತಾವು ಖರೀದಿಸುವ ಸೆಕೆಂಡ್‌ಹ್ಯಾಂಡ್ ಫೋನ್, ಕಳ್ಳತನದ ಮೂಲಕ ತಮ್ಮ ಕೈಸೇರುತ್ತಿದೆಯೇ ಎಂಬುದನ್ನು ಪರೀಕ್ಷಿಸಬಹುದು ಎಂದಿದ್ದಾರೆ.

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.