ನವದೆಹಲಿ: ಫೋನ್ಪೆ ಕಂಪನಿಯು ಆ್ಯಪ್ಗಳ್ನು ಅಭಿವೃದ್ಧಿಪಡಿಸುವ ವೇದಿಕೆ ‘ಇಂಡಸ್ ಆ್ಯಪ್ಸ್ಟೋರ್’ ಆರಂಭಿಸಿರುವುದಾಗಿ ಶನಿವಾರ ಹೇಳಿದೆ. ಆಂಡ್ರಾಯ್ಡ್ ಆ್ಯಪ್ ಅಭಿವೃದ್ಧಿಪಡಿಸುವವರು (ಡೆವಲಪರ್) ತಮ್ಮ ಅಪ್ಲಿಕೇಷನ್ಗಳನ್ನು ಈ ವೇದಿಕೆಗೆ ಸೇರಿಸುವಂತೆ ಆಹ್ವಾನವನ್ನೂ ನೀಡಿದೆ.

ಆ್ಯಪ್ ಅಭಿವೃದ್ಧಿಪಡಿಸುವವರು www.indusappstore.comನಲ್ಲಿ ನೋಂದಣಿ ಆಗಿ ತಮ್ಮ ಆ್ಯಪ್ಗಳನ್ನು ಅಪ್ಲೋಡ್ ಮಾಡುವಂತೆ ಫೋನ್ಪೇ ಆಹ್ವಾನಿಸಿದೆ. ಈ ವೇದಿಕೆಯಲ್ಲಿ ಮೊದಲ ಒಂದು ವರ್ಷದವರೆಗೆ ಆ್ಯಪ್ಗಳನ್ನು ಉಚಿತವಾಗಿ ಅಪ್ಲೋಡ್ ಮಾಡಬಹುದು. ಆ ಬಳಿಕ ಕನಿಷ್ಠ ವಾರ್ಷಿಕ ಶುಲ್ಕ ಅನ್ವಯಿಸಲಿದೆ ಎಂದು ಹೇಳಿದೆ.

ಈ ಆ್ಯಪ್ಸ್ಟೋರ್ ಶೀಘ್ರವೇ ಬಿಡುಗಡೆ ಆಗಲಿದ್ದು, ಭಾರತದ ಬಳಕೆದಾರರನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಲಾಗಿದೆ. 12 ಸ್ಥಳೀಯ ಭಾಷೆಗಳಿಗೆ ಇದು ಬೆಂಬಲಿಸಲಿದೆ ಎಂದು ಇಂಡಸ್ ಆ್ಯಪ್ಸ್ಟೋರ್ನ ಸಹ ಸ್ಥಾಪಕ ಆಕಾಶ್ ಡೊಂಗ್ರೆ ತಿಳಿಸಿದ್ದಾರೆ.

ಆ್ಯಪ್ಸ್ಟೋರ್ನಲ್ಲಿ ‘ಲಾಂಚ್ ಪ್ಯಾಡ್’ ಸಹ ಇರಲಿದ್ದು, ಹೊಸದಾಗಿ ಆ್ಯಪ್ ಅಭಿವೃದ್ಧಿಪಡಿಸುವವರು ತಮ್ಮ ಆ್ಯಪ್ಗಳನ್ನು ಸೇರಿಸಲು ಮತ್ತು ಬಳಕೆದಾರರಿಗೆ ಸುಲಭವಾಗಿ ಕಾಣುವಂತೆ ಮಾಡಲು ಇದು ಅನುಕೂಲ ಆಗಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.