ಕೋಲ್ಕತ್ತ: ಬಡ್ಡಿದರ ಹೆಚ್ಚಳ ವಿಚಾರದಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಅನ್ನು ಅನುಸರಿಸುವ ವಿಚಾರದಲ್ಲಿ ಆರ್‌ಬಿಐ ಆಲೋಚಿಸುವ ಅಗತ್ಯ ಇದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಕಾಂತಿ ಘೋಷ್ ಹೇಳಿದ್ದಾರೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್ ಅಲ್ಪಾವಧಿಗೆ ಬಡ್ಡಿದರ ಹೆಚ್ಚಳ ಮಾಡುವುದನ್ನು ನಿಲ್ಲಿಸುವಂತೆ ಕಂಡುಬರುತ್ತಿಲ್ಲ. ಹೀಗಾಗಿ ಅದರಿಂದ ಪ್ರತ್ಯೇಕಗೊಳ್ಳುವ ಕುರಿತು ಆರ್‌ಬಿಐಗೆ ಆಲೋಚಿಸುವಂತೆ ಮಾಡಲಿದೆ ಎಂದು ಭಾರತ್ ಛೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಬಡ್ಡಿದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಾವು ಫೆಡರಲ್ ರಿಸರ್ವ್‌ನ ನಿರ್ಧಾರಕ್ಕೆ ಸಮನಾಗಿ ನಡೆಯಲು ಸಾಧ್ಯವೇ? ಒಂದು ನಿರ್ದಿಷ್ಟ ಸಮಯದಲ್ಲಿ ವಿರಾಮ ನೀಡಬೇಕಾಗುತ್ತದೆ. ಬಡ್ಡಿದರದಲ್ಲಿ ಈಗಾಗಲೇ ಮಾಡಿರುವ ಹೆಚ್ಚಳವು ಆರ್ಥಿಕತೆಯ ಮೇಲೆ ಯಾವ ತರಹದ ಪರಿಣಾಮ ಬೀರಿದೆ ಎನ್ನುವುದನ್ನು ಯೋಚಿಸಬೇಕಿದೆ ಎಂದು ಹೇಳಿದ್ದಾರೆ.

ಈ ಬಡ್ಡಿ ದರ ಏರಿಕೆಗೆ ಒಂದು ಅಂತ್ಯವಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಬಡ್ಡಿದರವು ದತ್ತಾಂಶ ಅವಲಂಬಿತವಾಗಿರಬೇಕು, ಇಲ್ಲದಿದ್ದರೆ ಒಂದು ನಿರ್ದಿಷ್ಟ ಸಮದಯಲ್ಲಿ ಅದು ಭಾರತದ ಆರ್ಥಿಕ ಚೇತರಿಕೆಗೆ ಹಾನಿಯುಂಟುಮಾಡಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.