ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಶೀಘ್ರದಲ್ಲೇ ₹20 ಮುಖಬೆಲೆಯ ಹೊಸ ನೋಟು ಬಿಡುಗಡೆ ಮಾಡಲು ಸಜ್ಜಾಗಿದೆ.

₹1000 ಮತ್ತು ₹500 ಮುಖಬೆಲೆಯ ನೋಟುಗಳನ್ನು ರದ್ಧುಗೊಂಡ ಬಳಿಕ ಆರ್ಬಿಐ, ವಿಶಿಷ್ಟ ಭದ್ರತಾ ಗುರುತು ಲಕ್ಷಣಗಳನ್ನು ಒಳಗೊಂಡ ಬಣ್ಣ ಬಣ್ಣದ ನೋಟುಗಳನ್ನು ಬಿಡುಗಡೆ ಮಾಡಿದೆ. ಹೊಸದಾಗಿ ₹200 ಮತ್ತು ₹2000 ನೋಟುಗಳನ್ನು ಚಲಾವಣೆಗೆ ತಂದಿದೆ. ₹10, ₹50, ₹100 ಹಾಗೂ ₹500 ಮುಖಬೆಲೆಯ ನೋಟುಗಳು ಬದಲಾದ ರೂಪದಲ್ಲಿ ಈಗಾಗಲೇ ದೈನಂದಿನ ವ್ಯವಹಾರಗಳಲ್ಲಿ ಬಳಕೆಯಲ್ಲಿವೆ.

2016ರ ನವೆಂಬರ್ನಿಂದ ಮಹಾತ್ಮಾ ಗಾಂಧಿ ಭಾವಚಿತ್ರವನ್ನು ಒಳಗೊಂಡ ಹೊಸ ಸರಣಿಯ ನೋಟುಗಳನ್ನು ಬಿಡುಗಡೆ ಮಾಡಲಾಗಿದೆ. ಈ ನೋಟುಗಳ ಅಳತೆ ಮತ್ತು ವಿನ್ಯಾಸ ಹಳೆಯ ನೋಟುಗಳಿಗಿಂತ ಭಿನ್ನವಾಗಿವೆ.

ಆರ್ಬಿಐ ಮಾಹಿತಿ ಪ್ರಕಾರ, 2016ರ ಮಾರ್ಚ್ 31ರ ವೇಳೆಗೆ ₹20 ಮುಖಬೆಲೆಯ 492 ಕೋಟಿ ನೋಟುಗಳು ಚಲಾವಣೆಯಲ್ಲಿದ್ದವು. ನೋಟುಗಳ ಸಂಖ್ಯೆ 2018ರ ಮಾರ್ಚ್ ವೇಳೆಗೆ 1 ಸಾವಿರ ಕೋಟಿ ಮುಟ್ಟಿತ್ತು. ಸದ್ಯ ಬಳಕೆಯಲ್ಲಿರುವ ಒಟ್ಟಾರೆ ಕರೆನ್ಸಿ ನೋಟುಗಳಲ್ಲಿ ₹20ರ ನೋಟುಗಳ ಪ್ರಮಾಣ ಶೇ 9.8.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.