ಉದ್ಯೋಗ, ಪ್ರವಾಸ, ಅನ್ಯ ಕಾರ್ಯ ಮತ್ತಿತರ ಉದ್ದೇಶಗಳಿಗೆ ಸೀಮಿತ ಅವಧಿಗೆ ಭೇಟಿ ನೀಡಲು ಇಲ್ಲವೆ ತಾತ್ಕಾಲಿಕವಾಗಿ ನೆಲೆಸಲು ಮಹಾನಗರಗಳಿಗೆ ಬರುವವರ ಓಡಾಟಕ್ಕೆ ಬಾಡಿಗೆಗೆ ಸಿಗುವ ಬೈಕ್, ಕಾರ್ಗಳು ತುಂಬ ಪ್ರಯೋಜನಕ್ಕೆ ಬರುತ್ತವೆ. ಸರಳ ಮತ್ತು ಸುಲಭ ರೀತಿಯಲ್ಲಿ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡುವ ನವೋದ್ಯಮ ಸ್ಥಾಪಿಸಿರುವ ನಗರದ ಯುವಕರು ಗುಣಮಟ್ಟದ ಸೇವೆ ಒದಗಿಸಿ ಅದನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ‘ರಾಯಲ್ ಬ್ರದರ್ಸ್’ (royalbrothers) ಹೆಸರಿನ ಈ ಸ್ಟಾರ್ಟ್ಅಪ್ ಬಳಕೆದಾರರಲ್ಲಿ ಜನಪ್ರಿಯಗೊಂಡಿದೆ.

ಆರ್ವಿ ಕಾಲೇಜ್ನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಸ್ನೇಹಿತರು ಪುದುಚೇರಿಗೆ ಪ್ರವಾಸಕ್ಕೆ ತೆರಳಿದಾಗ ಅಲ್ಲಿ ಎರಡು ದಿನಗಳವರೆಗೆ ಬಾಡಿಗೆಗೆ ಕಾರ್ ಪಡೆದು ಬಳಸಿದ್ದರು. ಬಾಡಿಗೆ ಉದ್ದೇಶಕ್ಕೆ ವಾಹನಗಳನ್ನು ಪಕ್ಕಾ ವೃತ್ತಿಪರತೆಯಿಂದ ಒದಗಿಸುವ ನವೋದ್ಯಮಕ್ಕೆ ಕೈಹಾಕಿದರೆ ಯಶಸ್ವಿಯಾಗಬಹುದು ಎನ್ನುವ ಚಿಂತನೆ ಆವಾಗಲೇ ಅವರಲ್ಲಿ ಮೊಳಕೆ ಒಡೆದಿತ್ತು. ವರ್ಷದ ನಂತರ ಕಾಲೇಜ್ನಿಂದ ಹೊರ ಬಿದ್ದವರು ತಮ್ಮ ಕನಸು ನನಸಾಗಿಸಲು ಮುಂದಡಿ ಇಟ್ಟಿದ್ದರು. ಕೇಂದ್ರ ಸರ್ಕಾರವು 1997ರಲ್ಲಿ ರೂಪಿಸಿದ್ದ ಬಾಡಿಗೆ ವಾಹನಗಳ ಯೋಜನೆ (rent a motorcycle scheme) ಇವರ ಕನಸಿಗೆ ನೀರೆರೆಯಿತು. ಆರ್ಟಿಒ ಅಧಿಕಾರಿಯೊಬ್ಬರನ್ನು ಭೇಟಿಯಾಗಿ ತಮ್ಮ ಕನಸುಗಳನ್ನು ಹಂಚಿಕೊಂಡರು. ಇವರ ಕನಸಿಗೆ ನೀರೆರೆಯಲು ಅವರು ಅಗತ್ಯ ಸಹಕಾರ ನೀಡಿದರು.

ದೊಡ್ಡ ವಾಹನಗಳಿಗೆ ಮಾತ್ರ ಸೀಮಿತವಾಗಿದ್ದ ಪರ್ಮಿಟ್ ದ್ವಿಚಕ್ರ ವಾಹನಕ್ಕೂ ದೊರೆಯುತ್ತಿದ್ದಂತೆ ಅನೇಕ ಷರತ್ತುಗಳನ್ನು ಪೂರೈಸಿ ‘ರಾಯಲ್ ಬ್ರದರ್ಸ್’ ಹೆಸರಿನಲ್ಲಿ ಬೈಕ್ಗಳನ್ನು ಬಾಡಿಗೆಗೆ ನೀಡುವ ನವೋದ್ಯಮವನ್ನು 2015 ಜುಲೈನಲ್ಲಿ ಆರಂಭಿಸಿದರು. ರಾಜ್ಯದ ಪ್ರಮುಖ ನಗರಗಳಾದ ಮೈಸೂರು, ಕುಶಾಲನಗರ, ಮಡಿಕೇರಿ, ಮಂಗಳೂರು, ಮಣಿಪಾಲ್, ಬೆಳಗಾವಿ, ದಾವಣಗೆರೆ ಮತ್ತು ಹುಬ್ಬಳ್ಳಿ–ಧಾರವಾಡಗಳಲ್ಲಿ ಸೇವೆ ಒದಗಿಸುತ್ತಿದೆ. ಕೇರಳ, ಆಂಧ್ರಪ್ರದೇಶ, ಗುಜರಾತ್ ಸೇರಿದಂತೆ ದೇಶದ 14 ರಾಜ್ಯಗಳಲ್ಲೂ ವಹಿವಾಟು ವಿಸ್ತರಿಸಿದೆ.

‘ನಗರದಲ್ಲಿ ಕಾರ್ಯನಿರ್ವ ಹಿಸುತ್ತಿರುವ ಬೌನ್ಸ್ನ ಸೇವೆ ಮೈಕ್ರೊ ಮೊಬಿಲಿಟಿಯದು. ಸವಾರರು ತಮಗೆ ಬೇಕಾದಾಗೆಲ್ಲ ಸೀಮಿತ ದೂರಕ್ಕೆ ಬೈಕ್ ಬಾಡಿಗೆ ಪಡೆದುಕೊಂಡು ಗಮ್ಯ ಸ್ಥಾನದಲ್ಲಿ ಬೈಕ್ ನಿಲ್ಲಿಸಿ ಹೋಗುವ ವ್ಯವಸ್ಥೆ ಅಲ್ಲಿದೆ. ರಾಯಲ್ಸ್ ಬ್ರದರ್ಸ್ನ ವಹಿವಾಟು ಮ್ಯಾಕ್ರೊ ಮೊಬಿಲಿಟಿನದು. ಅಂದರೆ ಗಂಟೆ, ದಿನ, ವಾರ ಮತ್ತು ತಿಂಗಳವರೆಗೆ ಬೈಕ್ಗಳನ್ನು ಬಾಡಿಗೆಗೆ ಪಡೆಯುವ ಸೌಲಭ್ಯ ಇಲ್ಲಿದೆ. ಮುಂಚಿತವಾಗಿಯೇ ಹಣ ಪಾವತಿಸಿ ಗಂಟೆಗಳ ಲೆಕ್ಕದಲ್ಲಿ ಬೈಕ್ ಬಾಡಿಗೆಗೆ ಪಡೆದು ಕಂಪನಿಯ ನಿರ್ದಿಷ್ಟ ತಾಣದಲ್ಲಿ ಮರಳಿಸುವ ವ್ಯವಸ್ಥೆ ಇಲ್ಲಿದೆ' ಎಂದು ಕಂಪನಿಯ ಸಹ ಸ್ಥಾಪಕ ಮತ್ತು ಸಿಇಒ ಆಗಿರುವ ಅಭಿಷೇಕ್ ಚಂದ್ರಶೇಖರ್ ಹೇಳುತ್ತಾರೆ.

ಅಂತರ್ಜಾಲ ತಾಣದಲ್ಲಿ ಹೆಸರು ನೋಂದಾಯಿಸುತ್ತಿದ್ದಂತೆ ಬಳಕೆದಾರರ ಮೊಬೈಲ್ಗೆ ‘ಒಟಿಪಿ’ ಬರುತ್ತದೆ. ಅದರ ಮೂಲಕ ಗ್ರಾಹಕರ ಗುರುತು ದೃಢೀಕರಿಸಿಕೊಳ್ಳಲಾಗುವುದು. ಜಿಪಿಎಸ್ ಅಳವಡಿಸಿದ ಬೈಕ್ಗಳನ್ನು ಬಾಡಿಗೆಗೆ ನೀಡಲಾಗುವುದು. ಆಧಾರ್ ಆಧರಿಸಿ ಮೊಬೈಲ್ ಸಿಮ್ ಕೊಡುವ ವ್ಯವಸ್ಥೆ ಇರುವುದರಿಂದ ಬಾಡಿಗೆದಾರರು ವಂಚನೆ ಎಸಗಿ ಪಾರಾಗುವುದು ಅಷ್ಟು ಸುಲಭವಲ್ಲ. ಬೆಂಗಳೂರಿನಲ್ಲಿ 14 ಸ್ಥಳಗಳಲ್ಲಿ ಬೈಕ್ಗಳನ್ನು ಬಾಡಿಗೆಗೆ ಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ.

ಕಂಪನಿ ಬಳಿ ಸದ್ಯಕ್ಕೆ ಎರಡು ಸಾವಿರ ಸಂಖ್ಯೆಯಲ್ಲಿ ಹೋಂಡಾ ಆ್ಯಕ್ಟಿವಾ, ರಾಯಲ್ ಎನ್ಫೀಲ್ಡ್ ಬೈಕ್ಗಳಿವೆ. ಒಂದು ದಿನಕ್ಕೆ (24 ಗಂಟೆ) ₹ 400 ಬಾಡಿಗೆ ನಿಗದಿಪಡಿಸಲಾಗಿದೆ. ದುಬಾರಿ ಬೆಲೆಯ (₹ 6 ಲಕ್ಷ) 1000 ಸಿಸಿ ಸಾಮರ್ಥ್ಯದ ಹ್ಯಾರ್ಲೆ ಡೇವಿಡ್ಸನ್ ಬೈಕ್ ಕೂಡ ಇಲ್ಲಿ ದಿನಕ್ಕೆ ₹ 6,000 ದರದಲ್ಲಿ ಲಭ್ಯ ಇರಲಿದೆ. ಬಳಕೆದಾರನೇ ಪೆಟ್ರೋಲ್ ಹಾಕಿಸಿಕೊಳ್ಳಬೇಕು ಎನ್ನುವ ನಿಬಂಧನೆ ಇದೆ.

ಆರಂಭದಲ್ಲಿ ₹ 2 ಕೋಟಿ ಸ್ವಂತ ದುಡ್ಡು ಹಾಕಿ ಕಟ್ಟಿ ಬೆಳೆಸಿರುವ ಈ ಮೂವರೂ ಸಾಹಸಿ ನವೋದ್ಯಮಿಗಳು ವಹಿವಾಟಿನ ಸುಸ್ಥಿರ ಬೆಳವಣಿಗೆಗೆ ಶ್ರದ್ಧೆಯಿಂದ ಪರಿಶ್ರಮ ಪಡುತ್ತಿದ್ದಾರೆ. ಪ್ರತಿಯೊಂದು ವಾಹನ ವಾಣಿಜ್ಯ ವಿಮೆಗೆ ಒಳಪಟ್ಟಿರುತ್ತದೆ. ಥರ್ಡ್ ಪಾರ್ಟಿ ವಿಮೆ ಸೌಲಭ್ಯ ಇರುತ್ತದೆ. 1 ಹೆಲ್ಮೇಟ್ ಉಚಿತ. ಹೆಚ್ಚುವರಿ ಹೆಲ್ಮೇಟ್ಗೆ ಪ್ರತಿ ದಿನಕ್ಕೆ ₹ 50 ಬಾಡಿಗೆ ನಿಗದಿಪಡಿಸಲಾಗಿದೆ.

ಸಹ ಸ್ಥಾಪಕರಾದ ಆಕಾಶ್ ಎಸ್. ಅವರು ತಂತ್ರಜ್ಞಾನ ಮತ್ತು ಕುಲದೀಪ್ ಪುರೋಹಿತ್ ಅವರು– ವಹಿವಾಟು ವಿಸ್ತರಣೆಯ ಹೊಣೆ ನಿರ್ವಹಿಸುತ್ತಿದ್ದಾರೆ. ಈ ನವೋದ್ಯಮದ ಯಶಸ್ಸು ಕಂಡು ಇತರರು ಹಣ ಹೂಡಿಕೆ ಮಾಡಲು ಮುಂದೆ ಬರುತ್ತಿದ್ದಾರೆ. ಅತ್ಯುತ್ತಮ ಸೇವೆ ನೀಡಿ ಗ್ರಾಹಕರ ಮನ ಗೆದ್ದು ವಿಶ್ವಾಸಾರ್ಹ ಬ್ರ್ಯಾಂಡ್ ಅಭಿವೃದ್ಧಿಪಡಿಸುತ್ತ ವಹಿವಾಟನ್ನು ವಿಸ್ತರಿಸುತ್ತಿದ್ದಾರೆ.

ಬಳಕೆದಾರರರು ₹ 200 ಹೆಚ್ಚುವರಿಯಾಗಿ ಪಾವತಿಸಿದರೆ ಮನೆ ಬಾಗಿಲಿಗೆ ಬೈಕ್ ತಲುಪಿಸುವ ಸೇವೆ ಒದಗಿಸಲಾಗುತ್ತಿದೆ. ನಾಲ್ಕೈದು ದಿನಗಳ ಬಾಡಿಗೆ ಪಡೆದವರಿಗೆ ಈ ಸೇವೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಅಂಗವಿಕಲರ ಬಳಕೆಗಾಗಿ ಬೈಕ್ಗೆ ಅಕ್ಕಪಕ್ಕ ಎರಡು ಚಕ್ರ ಜೋಡಿಸಿ ಬಾಡಿಗೆ ನೀಡುವುದನ್ನೂ ಜಾರಿಗೆ ತರಲಾಗಿದೆ. ವಿದ್ಯುತ್ ಚಾಲಿತ ಬೈಕ್ಗಳನ್ನೂ ಬಾಡಿಗೆಗೆ ನೀಡುವುದನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.

ಒಂದು ನಗರದಿಂದ ಇನ್ನೊಂದು ನಗರಕ್ಕೂ ಬೈಕ್ಗಳನ್ನ ಬಾಡಿಗೆಗೆ ಕೊಂಡೊಯ್ಯಬಹುದು. ಸವಾರರಿಗೆ ಮಾರ್ಗಮಧ್ಯೆ ತೊಂದರೆಯಾದ ಸಂದರ್ಭದಲ್ಲಿ ಟಿವಿಎಸ್ ರೋಡ್ಸೈಡ್ ಅಸಿಸ್ಟಂಟ್ ಸಹಭಾಗಿತ್ವದಲ್ಲಿ ತುರ್ತಾಗಿ ನೆರವು ಕಲ್ಪಿಸಲಾಗುವುದು. ವಾಹನ ಬಾಡಿಗೆ ನೀಡುವಾಗ ಮತ್ತು ಸವಾರರು ಮರಳಿಸುವಾಗ ಚೆಕ್ ಲಿಸ್ಟ್ ಪರಿಶೀಲಿಸಲಾಗುವುದು. ಛಾಯಾಚಿತ್ರ ಹೋಲಿಕೆ (Image Processing) ಮಾಡಲಾಗುವುದು.

www.royalbrothers.com ಅಂತರ್ಜಾಲ ತಾಣದಲ್ಲಿ ಹೆಸರು ನೋಂದಾಯಿಸಿ ಬೈಕ್ ಬಾಡಿಗೆ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.