ನವದೆಹಲಿ: ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ಪೂರೈಕೆ ಮಾಡುವ ದೇಶಗಳ ಸಾಲಿನಲ್ಲಿ ಸೌದಿ ಅರೇಬಿಯಾವು ಆಗಸ್ಟ್ನಲ್ಲಿ ಮತ್ತೆ ಎರಡನೇ ಸ್ಥಾನಕ್ಕೆ ಏರಿದೆ. ಇದರಿಂದಾಗಿ ರಷ್ಯಾ ಮೂರನೇ ಸ್ಥಾನಕ್ಕೆ ಇಳಿಕೆಯಾಗಿದೆ.

ಉದ್ಯಮ ಮತ್ತು ವರ್ತಕರ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಇರಾನ್ ಮೊದಲ ಸ್ಥಾನವನ್ನೇ ಕಾಯ್ದುಕೊಂಡಿದೆ. ಮೇ ತಿಂಗಳಿನಲ್ಲಿ ರಷ್ಯಾ ದೇಶವು ಸೌದಿ ಅರೇಬಿಯಾವನ್ನು ಹಿಂದಕ್ಕಿ ಎರಡನೇ ಸ್ಥಾನ ಪಡೆದುಕೊಂಡಿತ್ತು.

ಭಾರತವು ಆಗಸ್ಟ್ನಲ್ಲಿ ಸೌದಿ ಅರೇಬಿಯಾದಿಂದ ದಿನಕ್ಕೆ 8.63 ಲಕ್ಷ ಬ್ಯಾರಲ್ ಕಚ್ಚಾ ತೈಲ ಆಮದು ಮಾಡಿಕೊಂಡಿದೆ. ಜುಲೈಗೆ ಹೋಲಿಸಿದರೆ ಶೇ 4.8ರಷ್ಟು ಹೆಚ್ಚು ಆಮದಾಗಿದೆ. ರಷ್ಯಾದಿಂದ ದಿನಕ್ಕೆ 8.55 ಲಕ್ಷ ಬ್ಯಾರಲ್ ಕಚ್ಚಾ ತೈಲ ಆಮದಾಗಿದೆ. ಜುಲೈಗೆ ಹೋಲಿಸಿದರೆ ಶೇ 2.4ರಷ್ಟು ಇಳಿಕೆ ಆಗಿದೆ. ಮೂರು ತಿಂಗಳ ಬಳಿಕ ಸೌದಿ ಅರೇಬಿಯಾ ಎರಡನೇ ಸ್ಥಾನಕ್ಕೆ ಬಂದಿದೆ.

ಆದರೆ, ಒಪೆಕ್ನಿಂದ ಭಾರತವು ಆಮದು ಮಾಡಿಕೊಂಡಿರುವ ತೈಲದ ಪ್ರಮಾಣವು ಶೇ 59.8ರಷ್ಟು ಇಳಿಕೆ ಕಂಡಿದ್ದು, 16 ವರ್ಷಗಳ ಕನಿಷ್ಠ ಮಟ್ಟವಾಗಿದೆ.

ಜೂನ್ನಲ್ಲಿ ಭಾರತವು ರಷ್ಯಾದಿಂದ ದಾಖಲೆ ಪ್ರಮಾಣದಲ್ಲಿ ತೈಲ ಖರೀದಿಸಿತ್ತು. ಆ ಬಳಿಕ ರಷ್ಯಾ ದೇಶವು ರಿಯಾಯಿತಿ ಪ್ರಮಾಣವನ್ನು ಕಡಿಮೆ ಮಾಡಿರುವುದರಿಂದ ತಿಂಗಳಿನಿಂದ ತಿಂಗಳಿಗೆ ತೈಲ ಆಮದು ಇಳಿಮುಖವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.