ಬೆಂಗಳೂರು: ಕಳೆದ ವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೊ ದರ ಮತ್ತು ರಿವರ್ಸ್ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಅದರ ಬೆನ್ನೆಲ್ಲೇ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಮತ್ತು ಎಚ್ಡಿಎಫ್ಸಿ ಬ್ಯಾಂಕ್ ನಿಶ್ಚಿತ ಠೇವಣಿಯ (ಎಫ್ಡಿ) ಮೇಲಿನ ಬಡ್ಡಿ ದರದಲ್ಲಿ ಹೆಚ್ಚಳ ಪ್ರಕಟಿಸಿವೆ.

ಎಚ್ಡಿಎಫ್ಸಿಯ ಪರಿಷ್ಕೃತ ಬಡ್ಡಿ ದರವು ಫೆಬ್ರುವರಿ 14ರಿಂದ ಹಾಗೂ ಎಸ್ಬಿಐನ ಪರಿಷ್ಕೃತ ಬಡ್ಡಿ ದರವು ಫೆಬ್ರುವರಿ 15ರಿಂದಲೇ ಅನ್ವಯವಾಗುತ್ತದೆ. ಎರಡು ವರ್ಷಕ್ಕೂ ಹೆಚ್ಚಿನ ಅವಧಿಯ ಠೇವಣಿಗೆ 10ರಿಂದ 15 ಅಂಶಗಳಷ್ಟು (ಬೇಸಿಸ್ ಪಾಯಿಂಟ್ಸ್) ಹೆಚ್ಚಿಸಿರುವುದಾಗಿ ಎಸ್ಬಿಐ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.

2 ವರ್ಷದಿಂದ 3 ವರ್ಷದೊಳಗೆ ಎಫ್ಡಿ ಬಡ್ಡಿ ದರವನ್ನು 10 ಅಂಶ ಹೆಚ್ಚಿಸಿದ್ದು, ಶೇ 5.20ಕ್ಕೆ ಏರಿಕೆಯಾಗಿದೆ. 3 ವರ್ಷದಿಂದ 5 ವರ್ಷದೊಳಿಗೆ ಎಫ್ಡಿ ಮೇಲಿನ ಬಡ್ಡಿ ದರವನ್ನು 15 ಅಂಶಗಳಷ್ಟು ಹೆಚ್ಚಿಸಿದ್ದು, ಶೇ 5.45ಕ್ಕೆ ಏರಿಕೆಯಾಗಿದೆ. 5ರಿಂದ 10 ವರ್ಷದ ವರೆಗಿನ ಎಫ್ಡಿಯ ಬಡ್ಡಿ ದರ ಶೇ 5.50ರಷ್ಟಾಗಿದೆ. ಪರಿಷ್ಕೃತ ದರಗಳು ₹2 ಕೋಟಿಗೂ ಕಡಿಮೆ ಮೊತ್ತದ ಠೇವಣಿಗಳಿಗೆ ಅನ್ವಯವಾಗಲಿದೆ.

2 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪ್ರಸ್ತುತ 2 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿಗೆ ಶೇ 5.1 ಬಡ್ಡಿ ನಿಗದಿಯಾಗಿದೆ. ಹಿರಿಯ ನಾಗರಿಕರು ಇರಿಸಿರುವ ಠೇವಣಿಯ ಮೇಲೆ ಶೇ 5.6ರಷ್ಟು ಬಡ್ಡಿ ನೀಡಲಾಗುತ್ತಿದೆ.

* ಎಸ್ಬಿಐ: ಎಫ್ಡಿ ಮೇಲಿನ ಪರಿಷ್ಕೃತ ಬಡ್ಡಿ ದರ (ಶೇಕಡ)

7-45 ದಿನಗಳು: 2.9%

46-179 ದಿನಗಳು: 3.9%

180-210 ದಿನಗಳು, 211 ದಿನಗಳಿಂದ 1 ವರ್ಷದೊಳಗೆ: 4.4%

1 ವರ್ಷದಿಂದ 2 ವರ್ಷದೊಳಗೆ: 5.1%

2 ವರ್ಷದಿಂದ 3 ವರ್ಷದೊಳಗೆ: 5.2%

3 ವರ್ಷದಿಂದ 5 ವರ್ಷದೊಳಗೆ: 5.45%

5 ವರ್ಷದಿಂದ 10 ವರ್ಷದೊಳಗೆ: 5.5%

* ಎಚ್ಡಿಎಫ್ಸಿ: ಎಫ್ಡಿ ಮೇಲಿನ ಪರಿಷ್ಕೃತ ಬಡ್ಡಿ ದರ (ಶೇಕಡ)

7-14 ದಿನಗಳು, 15-29 ದಿನಗಳು: 2.5%

30-45 ದಿನಗಳು, 46-60 ದಿನಗಳು, 61-90 ದಿನಗಳು: 3%

91 ದಿನಗಳಿಂದ 6 ತಿಂಗಳು: 3.5%

6 ತಿಂಗಳು 1 ದಿನದಿಂದ 9 ತಿಂಗಳು: 4.4%

9 ತಿಂಗಳು 1 ದಿನದಿಂದ 1 ವರ್ಷದೊಳಗೆ: 4.4%

1 ವರ್ಷದಿಂದ 2 ವರ್ಷದೊಳಗೆ: 5%

2 ವರ್ಷದಿಂದ 3 ವರ್ಷದೊಳಗೆ: 5.2%

3 ವರ್ಷದಿಂದ 5 ವರ್ಷದೊಳಗೆ: 5.45%

5 ವರ್ಷದಿಂದ 10 ವರ್ಷದೊಳಗೆ: 5.6%

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.