ಮುಂಬೈ: ‘ಪ್ರಸ್ತುತ ಭಾರತ ಮತ್ತು ಕೆನಡಾ ನಡುವೆ ತಲೆದೋರಿರುವ ಬಿಕ್ಕಟ್ಟು ಕೆನಡಾದಲ್ಲಿರುವ ಬ್ಯಾಂಕ್ನ ಶಾಖೆಗಳ ಕಾರ್ಯಾಚರಣೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ’ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಅಧ್ಯಕ್ಷ ಸಿ.ಎಸ್. ಸೆಟ್ಟಿ ತಿಳಿಸಿದ್ದಾರೆ.

1982ರಿಂದ ಕೆನಡಾದಲ್ಲಿ ಎಸ್ಬಿಐ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನು ಅಲ್ಲಿನವರು ಸ್ಥಳೀಯ ಬ್ಯಾಂಕ್ನಂತೆಯೇ ಭಾವಿಸಿದ್ದಾರೆ. ತೊಂದರೆಯಾಗಿರುವ ಬಗ್ಗೆ ಯಾವುದೇ ಗ್ರಾಹಕರಿಂದ ದೂರು ಸಲ್ಲಿಕೆಯಾಗಿಲ್ಲ. ಬ್ಯಾಂಕಿಂಗ್ ವ್ಯವಹಾರವು ಸುಸೂತ್ರವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಟೊರೊಂಟೊ, ಬ್ರಾಂಪ್ಟನ್ ಹಾಗೂ ವ್ಯಾಂಕೋವರ್ ಸೇರಿ ಎಂಟು ಕಡೆ ಬ್ಯಾಂಕ್ನ ಶಾಖೆಗಳಿವೆ.

‘ಬ್ಯಾಂಕ್ನ ಬಡ್ಡಿ ವರಮಾನ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ಇದಕ್ಕೆ ಪೂರಕವಾಗಿ ಎಲ್ಲಾ ದಿಕ್ಕಿನಲ್ಲೂ ಕಾರ್ಯ ನಿರ್ವಹಿಸಲಾಗುತ್ತಿದೆ’ ಎಂದು ಸೆಟ್ಟಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.