ಬೆಂಗಳೂರು: ದೇಶದ ಕೌಟುಂಬಿಕ ಆರೋಗ್ಯ ಮತ್ತು ಕ್ಷೇಮ ವಲಯದಲ್ಲಿ ತನ್ನ ಹೆಜ್ಜೆಗುರುತನ್ನು ಮತ್ತಷ್ಟು ವಿಸ್ತರಿಸಲು ಬ್ಯೂರರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಮುಂದಾಗಿದೆ.

ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಪ್ರಕಟಿಸಿದ್ದು, ಕ್ರಿಕೆಟಿಗ ಸೌರವ್ ಗಂಗೂಲಿ ಅವರನ್ನು ತನ್ನ ಪ್ರಚಾರದ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ. ದೇಶದಲ್ಲಿಯೇ ಸಿದ್ಧಪಡಿಸಿರುವ ರಕ್ತದಲ್ಲಿನ ಗ್ಲೂಕೋಸ್ ಪರೀಕ್ಷಿಸುವ ಸಾಧನವನ್ನು ಬಿಡುಗಡೆ ಮಾಡುವುದಾಗಿ ಕಂಪನಿಯು ಘೋಷಿಸಿದೆ.

‘ಗ್ರಾಹಕರ ಆರೋಗ್ಯ ಮೇಲ್ವಿಚಾರಣೆಯ ಅಗತ್ಯತೆ ಪೂರೈಸುವುದಕ್ಕೆ ಒತ್ತು ನೀಡಲಾಗುವುದು’ ಎಂದು ಇತ್ತೀಚೆಗೆ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬ್ಯೂರರ್ ಇಂಡಿಯಾದ ನಿರ್ದೇಶಕ ಸ್ಟಾನ್ಲಿ ಜೋಸೆಫ್ ಹೇಳಿದರು.

‘ಬ್ಲಡ್ ಗ್ಲೂಕೋಸ್ ಮಾನಿಟರ್ ಸಾಧನವು ನಿಖರತೆ ಹಾಗೂ ಬಳಕೆದಾರ ಸ್ನೇಹಿಯಾಗಿದೆ. ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದೆ. ಈ ಸಾಧನವು ಭಾರತದಲ್ಲಿ ಮಧುಮೇಹದಿಂದ ಬಳಲುತ್ತಿರುವ ಲಕ್ಷಾಂತರ ರೋಗಿಗಳ ಜೀವನದಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ’ ಎಂದು ಹೇಳಿದರು.

ಬ್ಯೂರರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಲಿಲ್ ವಿ.ಎಸ್. ಮಾತನಾಡಿ, ‘ಭಾರತೀಯ ಗ್ರಾಹಕರೊಂದಿಗೆ ಹೆಚ್ಚು ಸಂಪರ್ಕ ಬೆಸೆಯಲು ಗಂಗೂಲಿ ಅವರೊಂದಿಗಿನ ಒಪ್ಪಂದವು ನೆರವಾಗಲಿದೆ’ ಎಂದು ತಿಳಿಸಿದರು.

ಸೌರವ್ ಗಂಗೂಲಿ ಮಾತನಾಡಿ, ‘ಸಾರ್ವಜನಿಕರಲ್ಲಿ ಆರೋಗ್ಯಕರ ಜೀವನ ಶೈಲಿ ಬಗ್ಗೆ ಪ್ರಚಾರ ನಡೆಸುತ್ತೇನೆ. ಬ್ಯೂರರ್ ಅಭಿಯಾನಕ್ಕೆ ಕೊಡುಗೆ ನೀಡಲು ನಾನು ಉತ್ಸುಕನಾಗಿದ್ದೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.