ಸಾನಂದ (ಗುಜರಾತ್): ಟಾಟಾ ಹಾಗೂ ಟರ್ಕಿಯ ಕೋಚ್ ಸಂಸ್ಥೆಗಳ ಸಹಭಾಗಿತ್ವದ, ಗೃಹೋಪಯೋಗಿ ವಸ್ತುಗಳ ತಯಾರಿಕಾ ಸಂಸ್ಥೆ 'ವೋಲ್ಟ್ ಬೆಕ್'ನ ದೇಶದ ಮೊದಲ ಘಟಕವನ್ನು ಗುರುವಾರ ಇಲ್ಲಿ ಉದ್ಘಾಟಿಸಲಾಯಿತು.

60 ಎಕರೆ ವಿಸ್ತೀರ್ಣದಲ್ಲಿ ₹ 1 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಘಟಕವನ್ನು ವೋಲ್ಟಾಸ್ನ ಅಧ್ಯಕ್ಷ ನೊಯೆಲ್ ಎನ್. ಟಾಟಾ ಹಾಗೂ ಟರ್ಕಿಯ ಕೋಚ್ ಸಮೂಹದ ಸಿಇಒ ಲೆವೆಂಟ್ ಕಕಿರೊಗ್ಲು ಉದ್ಘಾಟಿಸಿದರು.

'ಭಾರತದಲ್ಲಿ ಮೂಲಸೌಲಭ್ಯಗಳ ವಿಸ್ತರಣೆ ತೀವ್ರ ಗತಿಯಲ್ಲಿ ನಡೆಯುತ್ತಿದೆ. ವಿದ್ಯುತ್ ಸೌಲಭ್ಯವೂ ಎಲ್ಲಾ ಮೂಲೆಗಳಿಗೆ ತಲುಪುತ್ತಿದೆ. ಇದರಿಂದಾಗಿ ಗೃಹಬಳಕೆ ವಸ್ತುಗಳ ಬೇಡಿಕೆಯೂ ಹೆಚ್ಚುತ್ತಿದೆ. ಅದರ ಲಾಭವನ್ನು ಸಂಸ್ಥೆ ಪಡೆಯಲಿದೆ' ಎಂದು ನೊಯೆಲ್ ಟಾಟಾ ಹೇಳಿದರು.

'ಅತಿ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತದ ಆರ್ಥಿಕತೆಯು ಪ್ರಮುಖ ಕಂಪನಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ. 2024 ವೇಳೆಗೆ ₹ 350 ಲಕ್ಷ ಕೋಟಿ ಮೊತ್ತದ ಆರ್ಥಿಕತೆಯ ಗುರಿ ಹಾಗೂ 'ಭಾರತದಲ್ಲೇ ತಯಾರಿಸಿ' ಅಭಿಯಾನವು ಈ ಮಾರುಕಟ್ಟೆಯನ್ನು ಇನ್ನಷ್ಟು ಆಕರ್ಷಕವಾಗಿಸಿವೆ' ಎಂದು ಲೆವೆಂಟ್ ನುಡಿದರು.

‘ಈ ಘಟಕದಲ್ಲಿ ಸದ್ಯಕ್ಕೆ ಫ್ರಿಡ್ಜ್ಗಳನ್ನು ತಯಾರಿಸಲಾಗುತ್ತಿದ್ದು ಮುಂದಿನ ಹಂತಗಳಲ್ಲಿ ವಾಷಿಂಗ್ ಮಷಿನ್, ಮೈಕ್ರೊವೇವ್ ಒವನ್ ಮುಂತಾದವುಗಳ ತಯಾರಿಕೆ ಆರಂಭವಾಗಲಿದೆ. 2025ರ ವೇಳೆಗೆ ಫ್ರಿಡ್ಜ್ ತಯಾರಿಕೆ ಪ್ರಮಾಣವು 25 ಲಕ್ಷಕ್ಕೆ ಏರಲಿದೆ’ ಎಂದು ವೋಲ್ಟಾಸ್ನ ಸಿಇಒ ಪ್ರದೀಪ್ ಬಕ್ಷಿ ತಿಳಿಸಿದರು.

‘ಗೃಹಬಳಕೆ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಶೇ 10ರಷ್ಟು ಪಾಲು ಪಡೆದು ಐದು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಮುಂಚೂಣಿಯ ಕಂಪನಿ ಎನಿಸಬೇಕು ಎಂಬುದು ನಮ್ಮ ಗುರಿಯಾಗಿದೆ’ ಎಂದರು.

(ಕಂಪನಿಯ ಆಹ್ವಾನದ ಮೇರೆಗೆ ವರದಿಗಾರ ಸಾನಂದ್ಗೆ ಭೇಟಿ ನೀಡಿದ್ದರು)

-ಗೃಹಬಳಕೆ ಉತ್ಪನ್ನ ತಯಾರಿಕೆಯಲ್ಲಿ ದೇಶದಲ್ಲೇ ಅತಿ ದೊಡ್ಡ ಘಟಕ

-15 ಸೆಕೆಂಡ್ಗೆ ಒಂದು ಫ್ರಿಡ್ಜ್ ತಯಾರಿಕೆ

-ಅತ್ಯಾಧುನಿಕ ಮತ್ತು ಪೇಟೆಂಟ್ ಹೊಂದಿದ ತಂತ್ರಜ್ಞಾನ ಬಳಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.