ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಡಿಮ್ಯಾಟ್ ಖಾತೆಯಲ್ಲಿ ಹೂಡಿಕೆದಾರರು ಇರಿಸಿಕೊಂಡ ಷೇರುಗಳನ್ನು ಮಾರಾಟ ಮಾಡಿದ ಬಳಿಕ ಬರುವ ಲಾಭಕ್ಕೆ ವಿಧಿಸುವ ದೀರ್ಘಾವಧಿ ಬಂಡವಾಳ ವೃದ್ಧಿ ತೆರಿಗೆಯನ್ನು (ಎಲ್ಟಿಸಿಜಿ) ಶೇ 10ರಿಂದ ಶೇ 12.5ಕ್ಕೆ ಏರಿಕೆ ಮಾಡಲಾಗಿದೆ.

ಕರೆನ್ಸಿ ಮತ್ತು ಚಿನ್ನ ಮಾರಾಟಕ್ಕೂ ಈ ತೆರಿಗೆ ಅನ್ವಯಿಸಲಿದೆ. ಅಲ್ಲದೆ, ತೆರಿಗೆ ವಿನಾಯಿತಿ ಪಡೆಯುವ ಮೊತ್ತವನ್ನು ₹1 ಲಕ್ಷದಿಂದ ₹1.25 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಅಲ್ಪಕಾಲದ ಬಂಡವಾಳ ವೃದ್ಧಿ ತೆರಿಗೆಯನ್ನು ಶೇ 15ರಿಂದ ಶೇ 20ಕ್ಕೆ ಏರಿಕೆ ಮಾಡಲಾಗಿದೆ. ಷೇರು ವಹಿವಾಟು ತೆರಿಗೆಯನ್ನು (ಎಸ್ಟಿಟಿ) ಶೇ 0.01ರಿಂದ ಶೇ 0.02ಕ್ಕೆ ಹೆಚ್ಚಿಸಲಾಗಿದೆ.

‘ಬಜೆಟ್ನಲ್ಲಿ ಪ್ರಸ್ತಾಪಿಸಲಾದ ಬಂಡವಾಳ ವೃದ್ಧಿ ತೆರಿಗೆಯಿಂದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ₹15,000 ಕೋಟಿ ಸಂಗ್ರಹವಾಗಲಿದೆ’ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

ಎನ್ಪಿಎಸ್ ವಾತ್ಸಲ್ಯ:

ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಮಕ್ಕಳಿಗೆ ಹೊಸದಾಗಿ ಎನ್ಪಿಎಸ್ ವಾತ್ಸಲ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಪೋಷಕರು ತಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಬಹುದಾಗಿದೆ. ಆ ಮಗುವಿಗೆ 18 ವರ್ಷ ತುಂಬಿದ ಬಳಿಕ ಸಾಮಾನ್ಯ ರಾಷ್ಟ್ರೀಯ ಪಿಂಚಣಿಯಾಗಿ ಈ ಯೋಜನೆಯು ಪರಿವರ್ತನೆಯಾಗಲಿದೆ.

ಎನ್ಪಿಎಸ್ನಡಿ ತೆರಿಗೆ ವಿನಾಯಿತಿ ಹೆಚ್ಚಳ: ಖಾಸಗಿ ವಲಯದಲ್ಲಿ ಉದ್ಯೋಗದಾತರು ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ನೀಡುವ ಮೂಲ ವೇತನದ ಶೇ 10ರಷ್ಟು ಮೊತ್ತಕ್ಕೆ ಈ ಮೊದಲು ತೆರಿಗೆ ವಿನಾಯಿತಿ ಲಭಿಸುತ್ತಿತ್ತು. ಸದ್ಯ ಇದನ್ನು ಶೇ 14ರಷ್ಟಕ್ಕೆ ಹೆಚ್ಚಿಸಲಾಗಿದೆ. ಸದ್ಯ ಸರ್ಕಾರಿ ನೌಕರರಿಗೆ ಶೇ 14ರಷ್ಟಕ್ಕೆ ತೆರಿಗೆ ವಿನಾಯಿತಿ ಲಭಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.