ನವದೆಹಲಿ: ದೇಶದ ದೂರಸಂಪರ್ಕ ವಲಯದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಹಲವು ನಿರ್ಧಾರಗಳನ್ನ ಕೈಗೊಂಡಿದೆ. ಟೆಲಿಕಾಂ ಕಂಪನಿಗಳಿಗೆ ಬಾಕಿ ಮೊತ್ತ ಪಾವತಿಗೆ ನಾಲ್ಕು ವರ್ಷಗಳ ಗಡುವು, ಶೇಕಡ 100ರಷ್ಟು ವಿದೇಶ ಹೂಡಿಕೆಗೆ ಅವಕಾಶ ಸೇರಿದಂತೆ ಹಲವು ಕ್ರಮಗಳನ್ನು ಒಳಗೊಂಡ ಪರಿಹಾರ ಪ್ಯಾಕೇಜ್‌ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಸಚಿವ ಸಂಪುಟವು ಕೈಗೊಂಡಿರುವ ನಿರ್ಧಾರಗಳ ಕುರಿತು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ದೂರಸಂಪರ್ಕ ಕ್ಷೇತ್ರದ ಉತ್ತೇಜನಕ್ಕಾಗಿ ಒಂಭತ್ತು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಹೊಂದಾಣಿಕೆ ಮಾಡಿದ ಒಟ್ಟು ಆದಾಯ ಅಥವಾ ಎಜಿಆರ್‌ನ ವ್ಯಾಖ್ಯಾನವು ದೂರಸಂಪರ್ಕ ಕ್ಷೇತ್ರದಲ್ಲಿನ ತಲ್ಲಣಕ್ಕೆ ಪ್ರಮುಖ ಕಾರಣವಾಗಿದ್ದು, ಕಂಪನಿಗಳ ದೂರಸಂಪರ್ಕ ವಲಯ ಹೊರತಾದ ಆದಾಯವನ್ನು ಬಿಡುವ ಮೂಲಕ ತರ್ಕಬದ್ಧಗೊಳಿಸಲಾಗಿದೆ.

ದೂರಸಂಪರ್ಕ ವಲಯದಲ್ಲಿ ಸ್ವಯಂಚಾಲಿತ ಮಾರ್ಗದಲ್ಲಿ ಶೇಕಡ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಅವಕಾಶವನ್ನು ಸಚಿವ ಸಂಪುಟವು ಅನುಮೋದಿಸಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.

ಇದನ್ನೂ ಓದಿ–42.8 ಲಕ್ಷ ಗ್ರಾಹಕರನ್ನು ಕಳೆದುಕೊಂಡ ವಿಐಎಲ್

ಎಜಿಆರ್, ತರಂಗಾಂತರ ಬಳಕೆ ಶುಲ್ಕ ಹಾಗೂ ಬಾಕಿ ಮೊತ್ತದ ಮರು ಪಾವತಿಗೆ ನಾಲ್ಕು ವರ್ಷಗಳ ಗಡುವು ಕ್ರಮಗಳಿಗೆ ಸಮ್ಮತಿ ದೊರೆತಿದೆ. ಈ ಕ್ರಮಗಳು ದೂರಸಂಪರ್ಕ ವಲಯದಲ್ಲಿ ಹಣದ ಹರಿವಿನ ಮುಗ್ಗಟ್ಟು ಶಮಗೊಳಿಸುವ ನಿರೀಕ್ಷೆ ಇರುವುದಾಗಿ ತಿಳಿಸಿದರು.

ಸಚಿವ ಸಂಪುಟದ ನಿರ್ಧಾರ ಹೊರಬೀಳುತ್ತಿದ್ದಂತೆ ದೂರಸಂಪರ್ಕ ವಲಯದ ಕಂಪನಿಗಳ ಷೇರುಗಳ ಬೆಲೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.