ನವದೆಹಲಿ: ಪ್ರಸಕ್ತ ಹಿಂಗಾರು ಹಂಗಾಮು ಅವಧಿಯಲ್ಲಿ ನವೆಂಬರ್ 17ರವರೆಗೆ ಗೋಧಿ ಬಿತ್ತನೆಯು ಶೇ 5ರಷ್ಟು ಇಳಿಕೆ ಕಂಡಿದ್ದು 86.02 ಲಕ್ಷ ಹೆಕ್ಷೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 91.02 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಧಿ ಬಿತ್ತನೆ ಕಾರ್ಯ ನಡೆದಿತ್ತು.

ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ಗುಜರಾತ್ನಲ್ಲಿ ಕಡಿಮೆ ಪ್ರದೇಶದಲ್ಲಿ ಗೋಧಿ ಬಿತ್ತನೆ ಆಗಿದೆ ಎಂದು ಹೇಳಿದೆ. ಭತ್ತ ಬಿತ್ತನೆ ಪ್ರದೇಶವೂ 8.05 ಲಕ್ಷ ಹೆಕ್ಟೇರ್ನಿಂದ 7.65 ಲಕ್ಷ ಹೆಕ್ಟೇರ್ಗೆ ಇಳಿಕೆ ಕಂಡಿದೆ. ಬೇಳೆಕಾಳು ಬಿತ್ತನೆ 69.37 ಲಕ್ಷ ಹೆಕ್ಟೇರ್ನಿಂದ 65.16 ಲಕ್ಷ ಹೆಕ್ಟೇರ್ಗೆ ಇಳಿಕೆ ಆಗಿದೆ.

ಹಿಂಗಾರು ಅವಧಿಯಲ್ಲಿ ಆಹಾರ ಧಾನ್ಯಗಳ ಒಟ್ಟು ಬಿತ್ತನೆಯು 257.56 ಲಕ್ಷ ಹೆಕ್ಟೇರ್ನಿಂದ 248.59 ಲಕ್ಷ ಹೆಕ್ಟೇರ್ಗೆ ಇಳಿಕೆ ಆಗಿದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.