ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಗಟು ಹಣದುಬ್ಬರ 4 ತಿಂಗಳ ಕನಿಷ್ಠ

Published : 17 ಸೆಪ್ಟೆಂಬರ್ 2024, 13:58 IST
Last Updated : 17 ಸೆಪ್ಟೆಂಬರ್ 2024, 13:58 IST
ಫಾಲೋ ಮಾಡಿ
Comments

ನವದೆಹಲಿ: ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಆಗಸ್ಟ್‌ ತಿಂಗಳಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟವಾದ ಶೇ 1.31ಕ್ಕೆ ದಾಖಲಾಗಿದೆ.

ಜುಲೈನಲ್ಲಿ ಶೇ 2.04ರಷ್ಟು ಇಳಿಕೆಯಾಗಿತ್ತು. 2023ರ ಆಗಸ್ಟ್‌ನಲ್ಲಿ (–) ಶೇ 0.46 ದಾಖಲಾಗಿತ್ತು.

ತರಕಾರಿ ಮತ್ತು ಇಂಧನ ಬೆಲೆಯಲ್ಲಿನ ಇಳಿಕೆಯಿಂದಾಗಿ ಸಗಟು ಹಣದುಬ್ಬರ ದರವು ಕುಸಿದಿದೆ. ಆದರೆ, ಈರುಳ್ಳಿ ಮತ್ತು ಆಲೂಗೆಡ್ಡೆ ದರದಲ್ಲಿ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ, ಮಂಗಳವಾರ ಬಿಡುಗಡೆ ಮಾಡಿದ ಅಂಕಿ–ಅಂಶಗಳು ತಿಳಿಸಿವೆ.

ಆಹಾರ ಪದಾರ್ಥಗಳು, ಸಂಸ್ಕರಿಸಿದ ಆಹಾರ ಉತ್ಪನ್ನಗಳು, ಜವಳಿ ಉತ್ಪನ್ನಗಳ ತಯಾರಿಕೆ ವೆಚ್ಚ ಮತ್ತು ಯಂತ್ರಗಳು ಹಾಗೂ ಉಪಕರಣಗಳ ಬೆಲೆಯಲ್ಲಿ  ಏರಿಕೆಯಾಗಿದೆ. 

ಆಹಾರ ಹಣದುಬ್ಬರವು ಜುಲೈನಲ್ಲಿ ಶೇ 3.45ರಷ್ಟಿತ್ತು. ಆಗಸ್ಟ್‌ನಲ್ಲಿ ಶೇ 3.11ಕ್ಕೆ ಇಳಿದಿದೆ. ಆಲೂಗೆಡ್ಡೆ ಮತ್ತು ಈರುಳ್ಳಿ ದರವು ಕ್ರಮವಾಗಿ ಶೇ 77.96 ಮತ್ತು ಶೇ 65.75ರಷ್ಟು ಏರಿಕೆಯಾಗಿದೆ.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT