ಜೂರಿಕ್: ಕೊರೊನಾ ವೈರಸ್ನ ಹೊಸ ತಳಿ ಓಮೈಕ್ರಾನ್ ವ್ಯಾಪಿಸುತ್ತಿರುವ ಕಾರಣಗಳಿಂದಾಗಿ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ವಾರ್ಷಿಕ ಸಭೆಯನ್ನು 2022ರ ಮಧ್ಯದ ವರೆಗೂ ಮುಂದೂಡಲಾಗಿದೆ. ಸ್ವಿಡ್ಜರ್ಲೆಂಡ್ನ ದಾವೋಸ್ನಲ್ಲಿ 2022ರ ಜನವರಿಯಲ್ಲಿ ಡಬ್ಲ್ಯುಇಎಫ್ ವಾರ್ಷಿಕ ಸಭೆ ನಿಗದಿಯಾಗಿತ್ತು.

ಜಗತ್ತಿನ ಉದ್ಯಮಿಗಳು ಮತ್ತು ರಾಜಕೀಯ ಮುಖಂಡರು ಒಂದೆಡೆ ಸೇರಲು ಡಬ್ಲ್ಯುಇಎಫ್ ವಾರ್ಷಿಕ ಸಭೆಯು ವೇದಿಕೆಯಾಗಿದೆ. ಕೋವಿಡ್ ಕಾರಣಗಳಿಂದಾಗಿ ಸಭೆಯನ್ನು ಬೇಸಿಯ ಕಾಲದ ಆರಂಭದಲ್ಲಿ ನಡೆಸಲು ಉದ್ದೇಶಿಸಲಾಗಿದೆ.

'ಕೊರೊನಾ ವೈರಸ್ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಜಾಗತಿಕ ಮುಖಂಡರ ಪರಸ್ಪರ ಭೇಟಿಯು ಕಠಿಣವಾಗಲಿದೆ. ಸ್ವಿಡ್ಜರ್ಲೆಂಡ್ ಸರ್ಕಾರದ ಸಹಭಾಗಿತ್ವದೊಂದಿಗೆ ಪ್ರತಿ ಹಂತದಲ್ಲಿಯೂ ತಜ್ಞರ ಸಲಹೆಗಳನ್ನು ಪಡೆದು ಸಭೆಗೆ ಸಿದ್ಧತೆ ಮಾಡಲಾಗುತ್ತಿದೆ' ಎಂದು ಡಬ್ಲ್ಯುಇಎಫ್ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.

ಕಳೆದ ಐದು ದಶಕಗಳಿಂದ ವಿವಿಧ ಸರ್ಕಾರಗಳು, ಅಂತರರಾಷ್ಟ್ರೀಯ ಸಂಘಟನೆಗಳು, ಉದ್ಯಮಿಗಳು, ಶಿಕ್ಷಣ ತಜ್ಞರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನು ಒಂದೇ ವೇದಿಕೆಗೆ ತರುವ ಕೆಲಸವನ್ನು ದಾವೋಸ್ ಸಭೆಯು ಮಾಡುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.