ಮುಂಬೈ: ಎರಡು ದಿನಗಳಿಂದ ಇಳಿಕೆಯ ಹಾದಿಯಲ್ಲಿ ಸಾಗಿದ್ದ ದೇಶದ ಷೇರುಪೇಟೆ ಸಂವೇದಿ ಸೂಚ್ಯಂಗಳು ಮಂಗಳವಾರ ಚೇತರಿಕೆ ಕಂಡುಕೊಂಡವು. ಹೂಡಿಕೆದಾರರು ತುಸು ಎಚ್ಚರಿಕೆಯಿಂದ ಇಂಧನ, ಐ.ಟಿ. ಮತ್ತು ಹಣಕಾಸು ವಲಯದ ಷೇರುಗಳನ್ನು ಖರೀದಿಸಿದರು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 497 ಅಂಶ ಏರಿಕೆ ಆಗಿ, 56,319 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 156 ಅಂಶ ಜಿಗಿದು, 16,770 ಅಂಶಗಳಲ್ಲಿ ವಹಿವಾಟು ಮುಗಿಸಿತು.

‘ಓಮೈಕ್ರಾನ್ ಪರಿಣಾಮ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಹಿಂದಕ್ಕೆ ಪಡೆಯುತ್ತಿರುವುದಕ್ಕೆ ಸಂಬಂಧಿಸಿದ ಕಳವಳಗಳು ಇನ್ನೂ ತಿಳಿಯಾಗಿಲ್ಲ. ಹೀಗಿದ್ದರೂ ಹೂಡಿಕೆದಾರರು ತುಸು ಎಚ್ಚರಿಕೆಯಿಂದ, ಆಶಾಭಾವನೆಯಿಂದ ವಹಿವಾಟು ನಡೆಸುತ್ತಿದ್ದಾರೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ತಿಳಿಸಿದರು.

ಬಿಎಸ್‌ಇ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕೂಡ ಗರಿಷ್ಠ ಶೇಕಡ 1.43ರವರೆಗೆ ಏರಿಕೆ ಕಂಡಿವೆ. ಶಾಂಘೈ, ಹಾಂಗ್‌ಕಾಂಗ್, ಟೋಕಿಯೊ ಮತ್ತು ಸೋಲ್ ಷೇರುಪೇಟೆಗಳಲ್ಲಿಯೂ ಸಕಾರಾತ್ಮಕ ವಹಿವಾಟು ನಡೆದಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇಕಡ 0.07ರಷ್ಟು ಕಡಿಮೆ ಆಗಿದ್ದು ಬ್ಯಾರೆಲ್‌ಗೆ 71.47 ಅಮೆರಿಕನ್ ಡಾಲರ್‌ಗೆ ತಲುಪಿದೆ. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 31 ಪೈಸೆ ಏರಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.