ಮುಂಬೈ: ಜಾಗತಿಕ ವಾಣಿಜ್ಯ ಬಿಕ್ಕಟ್ಟು ಬಗೆಹರಿಯುವ ನಿರೀಕ್ಷೆ ಮತ್ತು ವಿದೇಶಿ ಬಂಡವಾಳ ಒಳಹರಿವು ಹೆಚ್ಚಾಗಿರುವುದರಿಂದ ಮಂಗಳವಾರ ಷೇರುಪೇಟೆಗಳ ವಹಿವಾಟು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 414 ಅಂಶಗಳ ಜಿಗಿತ ಕಂಡು ಹೊಸ ಎತ್ತರವಾದ 41,352 ಅಂಶಗಳಿಗೆ ತಲುಪಿತು. ದಿನದ ವಹಿವಾಟಿನಲ್ಲಿ 41,402 ಅಂಶಗಳ ಗರಿಷ್ಠ ಮಟ್ಟವನ್ನೂ ತಲುಪಿತ್ತು.

ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 1.22 ಲಕ್ಷ ಕೋಟಿ ಹೆಚ್ಚಾಗಿದ್ದು, ಮಾರುಕಟ್ಟೆ ಮೌಲ್ಯವು ₹ 153.05 ಲಕ್ಷ ಕೋಟಿಗಳಿಂದ ₹ 154.27 ಲಕ್ಷ ಕೋಟಿಗೆ ಏರಿಕೆಯಾಗಿದೆ.ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 111 ಅಂಶ ಹೆಚ್ಚಾಗಿ 12,165 ಅಂಶಗಳಿಗೆ ತಲುಪಿತು.ಲೋಹ, ದೂರಸಂಪರ್ಕ, ಹಣಕಾಸು ಮತ್ತು ಐಟಿ ವಲಯದ ಷೇರುಗಳು ಉತ್ತಮ ಗಳಿಕೆ ಕಂಡುಕೊಂಡವು.

ಗರಿಷ್ಠ ಗಳಿಕೆ: ಟಾಟಾ ಸ್ಟೀಲ್ ಕಂಪನಿ ಷೇರು ಶೇ 4.38ರಷ್ಟು ಗರಿಷ್ಠ ಏರಿಕೆ ಕಂಡಿತು. ಭಾರ್ತಿ ಏರ್ಟೆಲ್ (ಶೇ 4.37), ವೇದಾಂತ (ಶೇ 3.50), ಟಾಟಾ ಮೋಟರ್ಸ್ (ಶೇ 3.03) ಷೇರುಗಳು ಸಹ ಏರಿಕೆ ಕಂಡಿವೆ.

‘ಮಂದಗತಿಯ ಆರ್ಥಿಕ ಬೆಳವಣಿಗೆ ಆತಂಕ ಮೂಡಿಸಿದ್ದರೂ ಕೇಂದ್ರ ಸರ್ಕಾರದಿಂದ ಇನ್ನಷ್ಟು ಸುಧಾರಣಾ ಕ್ರಮಗಳು ಜಾರಿಯಾಗುವ ವಿಶ್ವಾಸದಿಂದ ಹೂಡಿಕೆ ಚಟುವಟಿಕೆ ಹೆಚ್ಚಾಗುತ್ತಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಅಭಿಪ್ರಾಯಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.