ಅಮೆರಿಕದ ಮುಂದಿನ ಅಧ್ಯಕ್ಷ ಯಾರಾಗಬೇಕು ಎಂಬ ಪ್ರಶ್ನೆಗೆ, ಅಮೆರಿಕದ ಮತದಾರರು ನಾಳೆ (ನ. 5) ಉತ್ತರಿಸಲಿದ್ದಾರೆ. ಹಲವು ವಿಶೇಷಗಳಿಂದ ಕೂಡಿರುವ ಈ ಚುನಾವಣೆಯು ಮತ್ತೊಮ್ಮೆ ತೀವ್ರ ಪೈಪೋಟಿಯ ಹಣಾಹಣಿಯಾಗಿ ಹೊರಹೊಮ್ಮಿದೆ.

ಈ ಬಾರಿಯ ಅಮೆರಿಕದ ಅಧ್ಯಕ್ಷೀಯ ಚುನಾವಣೆಯು ಈ ಹಿಂದಿನ ಚುನಾವಣೆಗಳಿಗಿಂತ ಕೊಂಚ ಭಿನ್ನ. ಏಕೆಂದರೆ, ಒಂದು ಅವಧಿಗೆ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರು ಮರುಆಯ್ಕೆ ಬಯಸಿ ಸೋತು, ಮತ್ತೊಮ್ಮೆ ಅಧ್ಯಕ್ಷೀಯ ಚುನಾವಣೆಯ ಕಣದಲ್ಲಿದ್ದಾರೆ. ಹತ್ತಾರು ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಎದುರಿಸುತ್ತಿರುವ ಟ್ರಂಪ್, ಎರಡು ಬಾರಿ ಸಂಸತ್ತಿನಲ್ಲಿ ವಾಗ್ದಂಡನೆಗೆ ಕೂಡ ಗುರಿಯಾಗಿದ್ದರು. ಪ್ರಸಕ್ತ ಚುನಾವಣೆಯ ಅವಧಿಯಲ್ಲಿ ಟ್ರಂಪ್ ಅವರನ್ನು ಹತ್ಯೆಗೈಯ್ಯುವ ಎರಡು ಪ್ರಯತ್ನಗಳು ನಡೆದವು!

ಮತ್ತೊಂದೆಡೆ, ಉತ್ಸಾಹದಿಂದಲೇ ಪ್ರಚಾರ ಆರಂಭಿಸಿದ್ದ, ಹಾಲಿ ಅಧ್ಯಕ್ಷ ಜೋ ಬೈಡನ್ ಅವರು ಕಣದಿಂದ ಹಿಂದೆ ಸರಿಯಬೇಕಾಯಿತು. ಆಕಸ್ಮಿಕವಾಗಿ ಅಧ್ಯಕ್ಷೀಯ ಅಭ್ಯರ್ಥಿಯಾದ ಕಮಲಾ ಹ್ಯಾರಿಸ್ ಇದೀಗ ಕಣದಲ್ಲಿದ್ದಾರೆ. ವರ್ಣೀಯ ಸಮುದಾಯಕ್ಕೆ ಸೇರಿದ, ಏಷ್ಯನ್ ಅಮೆರಿಕನ್ ಸಮುದಾಯದ ಮಹಿಳೆಯೊಬ್ಬರು ಅಮೆರಿಕದ ಅತ್ಯುನ್ನತ ಹುದ್ದೆಗೆ ಸ್ಪರ್ಧಿಸಿರುವ ಕಾರಣದಿಂದಲೂ ಈ ಚುನಾವಣೆ ವಿಶೇಷವಾದದ್ದು.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು, ಅಮೆರಿಕದ ಅಧ್ಯಕ್ಷ ಯಾರಾದರೆ ತನಗೆ ಲಾಭ ಎಂಬ ಲೆಕ್ಕಾಚಾರದೊಂದಿಗೇ ಜಗತ್ತು ಗಮನಿಸುತ್ತದೆ. ಈಗಾಗಲೇ ಉಕ್ರೇನ್ ಯುದ್ಧ ಮತ್ತು ಇಸ್ರೇಲ್-ಹಮಾಸ್-ಇರಾನ್ ನಡುವಿನ ಸಂಘರ್ಷ ಜಗತ್ತಿನ ಇತರ ದೇಶಗಳ ಮೇಲೂ ಪರೋಕ್ಷ ಪರಿಣಾಮ ಬೀರಿದೆ. ಚೀನಾದ ಆಕ್ರಮಣಶೀಲ ನಡೆ ಏಷ್ಯಾದಲ್ಲಿ ಹೊಸ ಸಂಘರ್ಷಗಳನ್ನು ಹುಟ್ಟುಹಾಕಬಲ್ಲದು ಎಂಬ ಭೀತಿ ಇದೆ. ಐರೋಪ್ಯ ರಾಷ್ಟ್ರಗಳ ಮೇಲೆ ರಷ್ಯಾದ ಕರಾಳಛಾಯೆ ಇದೆ. ಜಾಗತಿಕ ಅರ್ಥವ್ಯವಸ್ಥೆ ಸದೃಢವಾಗಿಲ್ಲ. ಈ ಸಂದರ್ಭದಲ್ಲಿ ಜಾಗತಿಕ ರಾಜಕೀಯವನ್ನು ಮತ್ತು ಆರ್ಥಿಕತೆಯನ್ನು ನಿಯಂತ್ರಿಸುವ ಸಾಮರ್ಥ್ಯವಿರುವ ಅಮೆರಿಕದ ಚುಕ್ಕಾಣಿ ಯಾರ ಕೈಯಲ್ಲಿ ಇರುತ್ತದೆ ಎಂಬುದು ಮುಖ್ಯವಾಗುತ್ತದೆ.

ಭಾರತದ ದೃಷ್ಟಿಯಿಂದ ನೋಡುವುದಾದರೆ, ಅಮೆರಿಕ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧ ಬಲವಾಗಿದೆ. ಟ್ರಂಪ್ ಅಥವಾ ಕಮಲಾ ಶ್ವೇತಭವನ ಹೊಕ್ಕರೆ, ದ್ವಿಪಕ್ಷೀಯ ಸಂಬಂಧದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗುವುದಿಲ್ಲ. ಆದರೆ ಕೆಲವು ವಿಷಯಗಳಲ್ಲಿ ಕಮಲಾ ಅಥವಾ ಟ್ರಂಪ್ ಅವರ ಸಂಭಾವ್ಯ ಆಡಳಿತ ಭಿನ್ನವಾಗಿ ವರ್ತಿಸಬಹುದು.

ಈ ಹಿಂದೆ ಭಾರತದ ಉಕ್ಕು ಮತ್ತು ಅಲ್ಯೂಮಿನಿಯಂ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕವನ್ನು ಟ್ರಂಪ್ ಆಡಳಿತ ಹೇರಿತ್ತು. ಭಾರತ ತನ್ನ ಮಾರುಕಟ್ಟೆಗೆ ಅಮೆರಿಕಕ್ಕೆ ಸಮ ಪ್ರಮಾಣದ ಪ್ರವೇಶವನ್ನು ನೀಡಿಲ್ಲ, ಹಾಗಾಗಿ ಅದೇ ನಿಲುವನ್ನು ಅಮೆರಿಕ ತಳೆಯಲಿದೆ ಎಂದು ಅಮೆರಿಕದ ಮಾರುಕಟ್ಟೆಗೆ ಭಾರತದ ಉತ್ಪನ್ನಗಳ ಪ್ರವೇಶವನ್ನು ಟ್ರಂಪ್ ಕಡಿತಗೊಳಿಸಿದ್ದರು. ಭಾರತ ಇದೀಗ ಮುಕ್ತ ಮಾರುಕಟ್ಟೆ ಒಪ್ಪಂದಕ್ಕೆ ಅಮೆರಿಕದತ್ತ ನೋಡುತ್ತಿದೆ. ಸಾಮಾನ್ಯವಾಗಿ ಟ್ರಂಪ್, ಎಲ್ಲ ವಿಷಯಗಳಲ್ಲೂ ‘ಕೊಡು ಮತ್ತು ಕೊಳ್ಳುವಿಕೆ’ ಸಮಾನವಾಗಿ ಇರಬೇಕು ಎಂದು ಬಯಸುತ್ತಾರೆ. ಹಾಗಾಗಿ, ಒಂದೊಮ್ಮೆ ಅವರು ಅಧ್ಯಕ್ಷರಾದರೆ, ಮುಕ್ತ ಮಾರುಕಟ್ಟೆ ಒಪ್ಪಂದ ಏನೆಲ್ಲಾ ಷರತ್ತು ಗಳೊಂದಿಗೆ ಬರಬಹುದು ಎಂಬುದನ್ನು ಕಾದು ನೋಡಬೇಕು. ಆದರೆ ಈ ವಿಷಯವಾಗಿ ಕಮಲಾ ಅವರ ನಿಲುವಿನಲ್ಲಿ ಕೂಡ ಹೆಚ್ಚಿನ ವ್ಯತ್ಯಾಸಗಳಿಲ್ಲ.

ಉಕ್ರೇನ್ ಯುದ್ಧದ ವಿಷಯ ನೋಡುವುದಾದರೆ, ತಾನು ಅಧಿಕಾರಕ್ಕೆ ಬಂದರೆ ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸುವುದಾಗಿ ಟ್ರಂಪ್ ಹೇಳುತ್ತಿದ್ದಾರೆ. ಆದರೆ ಹೇಗೆ ಎಂದು ವಿವರಿಸುತ್ತಿಲ್ಲ. ಅವರು ತಮ್ಮದೇ ಶೈಲಿಯಲ್ಲಿ ಈ ಸಮಸ್ಯೆಯನ್ನು ಕೊನೆಗಾಣಿಸಲು ಪ್ರಯತ್ನಿಸಬಹುದು. ರಷ್ಯಾದೊಂದಿಗೆ ಯಾವುದೇ ಬಗೆಯ ಸಂಬಂಧ ಇರಿಸಿ ಕೊಳ್ಳಬಾರದು ಎಂಬ ಒತ್ತಡ ಭಾರತದ ಮೇಲೆ ಇಲ್ಲವಾಗಬಹುದು. ಕಮಲಾ ಅಧ್ಯಕ್ಷರಾದರೆ, ರಷ್ಯಾದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಭಾರತವನ್ನು ಶಾಂತಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಹುದು.

ಭಾರತ ಮತ್ತು ಅಮೆರಿಕ ಎರಡಕ್ಕೂ ಚೀನಾ ಬಹುಮುಖ್ಯವಾದ ವಿಷಯ. ಕಮಲಾ ಹ್ಯಾರಿಸ್ ಚೀನಾ ಕುರಿತು ಸ್ಪಷ್ಟ ನಿಲುವು ಹೊಂದಿದಂತೆ ಕಾಣುವುದಿಲ್ಲ. ಬೈಡನ್ ಆಡಳಿತದ ಚೀನಾ ಕುರಿತ ನೀತಿಯನ್ನೇ ಅವರು ಮುಂದುವರಿಸಬಹುದು. ಆದರೆ ಟ್ರಂಪ್, ಚೀನಾದ ಕುಟಿಲ ತಂತ್ರಗಳನ್ನು ಬಹಿರಂಗವಾಗಿ ಟೀಕಿಸುತ್ತಾ ಬಂದಿದ್ದಾರೆ. ಟ್ರಂಪ್ ಅವರ ಈ ಹಿಂದಿನ ಅವಧಿಯಲ್ಲಿ ಅಮೆರಿಕ ಮತ್ತು ಚೀನಾದ ನಡುವೆ ವಾಣಿಜ್ಯಿಕ ಸಮರ ತಾರಕಕ್ಕೇರಿತ್ತು. ಒಂದೊಮ್ಮೆ ಟ್ರಂಪ್ ಅವರು ಅಧ್ಯಕ್ಷ ರಾದರೆ, ಚೀನಾದ ಓಘ ಅಷ್ಟರಮಟ್ಟಿಗೆ ತಗ್ಗಬಹುದು. ಚೀನಾ ಕೇಂದ್ರಿತ ಪೂರೈಕೆ ಜಾಲವನ್ನು ತಪ್ಪಿಸಲು ಟ್ರಂಪ್ ಮುಂದಡಿಯಿಟ್ಟರೆ, ಹೆಚ್ಚಿನ ಹೂಡಿಕೆ ಭಾರತದತ್ತ ಬರಬಹುದು. ತೈವಾನ್ ಕುರಿತು ಚೀನಾ ಮೃದು ನಿಲುವು ತಳೆಯಬಹುದು.

ಈ ಚುನಾವಣೆಯಲ್ಲಿ ಆರ್ಥಿಕತೆಯ ವಿಷಯಕ್ಕಿಂತ ವಲಸೆಯ ವಿಷಯ ಹೆಚ್ಚು ಚರ್ಚೆಗೆ ಒಳಗಾಗಿದೆ.
ಅಮೆರಿಕದಲ್ಲಿರುವ ಅತಿದೊಡ್ಡ ವಲಸಿಗ ಸಮುದಾಯಗಳ ಪೈಕಿ ಭಾರತೀಯರು ಎರಡನೇ ಸ್ಥಾನದಲ್ಲಿದ್ದಾರೆ. ಸಾಮಾನ್ಯವಾಗಿ ಭಾರತೀಯ ಅಮೆರಿಕನ್ನರು ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸುತ್ತಾರೆ. ವಲಸಿಗರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿಷಯದಲ್ಲಿ ಡೆಮಾಕ್ರಟಿಕ್ ಪಕ್ಷ ಉದಾರ ನೀತಿ ಅನುಸರಿಸುತ್ತದೆ ಎಂಬುದು ಅದಕ್ಕೆ ಕಾರಣ. ಆದರೆ ಇತ್ತೀಚಿನ ವರ್ಷಗಳಲ್ಲಿ ರಿಪಬ್ಲಿಕನ್ ಪಕ್ಷವನ್ನು ಕೂಡ ಭಾರತೀಯ ಅಮೆರಿಕನ್ನರು ಬೆಂಬಲಿಸು ತ್ತಿದ್ದಾರೆ. ಹಾಗಾಗಿ, ನಿರ್ಣಾಯಕ ರಾಜ್ಯಗಳಲ್ಲಿ ಭಾರತೀಯ ಅಮೆರಿಕನ್ನರ ಮತ ಪಡೆಯಲು ಎರಡೂ ಪಕ್ಷಗಳು ಪ್ರಯತ್ನಿಸುತ್ತಿವೆ.

ಕಮಲಾ ಅವರ ತಾಯಿ ಭಾರತ ಮೂಲದವರು ಎಂಬ ಅಂಶ ಭಾರತೀಯ ಅಮೆರಿಕನ್ನರನ್ನು ಈ ಚುನಾವಣೆ
ಯಲ್ಲಿ ಕಮಲಾ ಅವರತ್ತ ಸೆಳೆಯಬಹುದು ಎಂಬುದು ಖರೆಯಾದರೂ, ಭಾರತದೊಂದಿಗೆ ಬೆಸೆದುಕೊಳ್ಳುವ, ಭಾರತಕ್ಕೆ ಅಗತ್ಯ ಸಹಕಾರ ನೀಡುವ ಕುರಿತು ಕಮಲಾ ಮಾತನಾಡಿದ್ದು ಕಡಿಮೆ. ಹೆಚ್ಚೆಂದರೆ ಅವರ ಅವಧಿಯಲ್ಲಿ ಭಾರತದ ಐ.ಟಿ. ಸೇವಾ ವಲಯಕ್ಕೆ ನಿರ್ಣಾಯಕವಾಗಿರುವ ಎಚ್1ಬಿ ವೀಸಾಗಳ ಸಂಖ್ಯೆ ಹೆಚ್ಚಬಹುದು.

ಟ್ರಂಪ್ ಅವರು ದೀಪಾವಳಿಗೆ ಶುಭ ಕೋರುವಾಗ, ಬಾಂಗ್ಲಾದೇಶ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿದ್ದಾರೆ. ಇಂತಹ ಮಾತನ್ನು ಕಮಲಾ ಅವರಿಂದ ಅಪೇಕ್ಷಿಸಲು ಸಾಧ್ಯವಿಲ್ಲ. ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ, ಕಮಲಾ ಅವರನ್ನು ಭಾರತ ಆಹ್ವಾನಿಸಿದರೂ, ಅವರು ಭಾರತಕ್ಕೆ ಭೇಟಿ ನೀಡಲಿಲ್ಲ!

ಸಾಮಾನ್ಯವಾಗಿ ಡೆಮಾಕ್ರಟಿಕ್ ಪಕ್ಷದ ಆಡಳಿತ ಇದ್ದಾಗ, ಮಾನವ ಹಕ್ಕುಗಳ ಉಲ್ಲಂಘನೆ, ಪ್ರಜಾಪ್ರಭುತ್ವ
ವ್ಯವಸ್ಥೆಗೆ ಧಕ್ಕೆ ಎಂಬ ವಿಷಯಗಳ ಕುರಿತು ಕೆಲವು ಸಂಸ್ಥೆಗಳು ರೂಪಿಸುವ ಭಾರತ ವಿರೋಧಿ ಆಖ್ಯಾನವನ್ನು ನೆಚ್ಚಿಕೊಂಡು, ಭಾರತದ ಆಂತರಿಕ ವಿಷಯಗಳ ಕುರಿತು ಅಮೆರಿಕ ಮಾತನಾಡುತ್ತದೆ. ಇದು ಒಬಾಮ ಮತ್ತು ಬೈಡನ್ ಅವಧಿಗಳಲ್ಲಿ ಆಗಿದೆ. ಜಗತ್ತಿನ ಉಸಾಬರಿ ತಮಗೆ ಬೇಡ ಎಂಬ ನಿಲುವು ಹೊಂದಿರುವ ಟ್ರಂಪ್ ಅವರ ಅವಧಿಯಲ್ಲಿ ಇಂತಹ ಅನವಶ್ಯಕ ಬುದ್ಧಿಮಾತು ಇಲ್ಲವಾಗಬಹುದು.

ಇಷ್ಟಲ್ಲದೆ, ರಕ್ಷಣಾ ವಲಯಕ್ಕೆ ಸಂಬಂಧಿಸಿದ ತಂತ್ರಜ್ಞಾನ ವಿನಿಮಯ, ಆಧುನಿಕ ಯುದ್ಧೋಪಕರಣಗಳ ಮಾರಾಟ, ಕ್ವಾಡ್ ಸಹಭಾಗಿತ್ವದ ವಿಷಯದಲ್ಲಿ ಟ್ರಂಪ್ ಅಥವಾ ಕಮಲಾ ಆಡಳಿತ ಭಿನ್ನವಾಗಿ ವರ್ತಿಸಲಾರದು. ಇದೀಗ ಭಾರತಕ್ಕೆ ಮುಖ್ಯವಾಗಿ ಅಮೆರಿಕದ ಬೆಂಬಲ ಬೇಕಿರುವುದು, ಭಾರತದ ವಿರುದ್ಧ ಕೆನಡಾ ಮಾಡುತ್ತಿರುವ ಆರೋಪದ ವಿಷಯದಲ್ಲಿ. ಈ ಕುರಿತು ಟ್ರಂಪ್ ಅಥವಾ ಕಮಲಾ ಬಹಿರಂಗವಾಗಿ ಏನೂ ಹೇಳಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಮುಂದಿನ ಅಧ್ಯಕ್ಷರ ನಡುವಿನ ಉತ್ತಮ ಬಾಂಧವ್ಯ ಈ ವಿಷಯದಲ್ಲಿ ಕೆಲಸಕ್ಕೆ ಬರಬಹುದು.

ಮೋದಿ ಅವರ ಜೊತೆ ಟ್ರಂಪ್ ಮತ್ತು ಕಮಲಾ ಅವರು ಈ ಹಿಂದೆ ಕಾಣಿಸಿಕೊಂಡ ರೀತಿಯನ್ನು ಗಮನಿಸಿದಾಗ, ಯಾರಿಂದ ಭಾರತಕ್ಕೆ ಎಷ್ಟು ಸ್ಪಂದನೆ ವ್ಯಕ್ತವಾಗಬಹುದು ಎಂಬುದನ್ನು ಊಹಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.