*ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಆಗುವ ರಕ್ತಸ್ರಾವ ನಷ್ಟವನ್ನು ಮರುಪೂರೈಸಲು ಕೊಡಬೇಕಾದ ಪೌಷ್ಟಿಕ ಆಹಾರ, ಹಣ್ಣುಗಳ ಬಗ್ಗೆ ಮಾಹಿತಿ ನೀಡಿ.

–ಸತೀಶ್, ದಾವಣಗೆರೆ

ನಿಮ್ಮ ಸ್ತ್ರೀಪರ ಕಾಳಜಿಗೆ ಅಭಿನಂದನೆಗಳು. ಹದಿವಯಸ್ಸಿನಲ್ಲಿ ತೂಕ, ಗಾತ್ರ, ಎತ್ತರ ಎಲ್ಲದರ ಬೆಳವಣಿಗೆ ಏರುಗತಿಯಲ್ಲಿರುತ್ತದೆ. ಇದಕ್ಕಾಗಿ ಹೆಚ್ಚುವರಿ ಶಕ್ತಿಯನ್ನು ಆಹಾರದಿಂದಲೇ ಒದಗಿಸಬೇಕು. ಇಂದು ಶೇ 50ರಷ್ಟು ಹದಿವಯಸ್ಸಿನ ಹೆಣ್ಣುಮಕ್ಕಳು ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ.

ಗ್ರಾಮೀಣ ಭಾಗದ ಹೆಣ್ಣುಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದರೆ, ನಗರ ಪ್ರದೇಶದ ಹೆಣ್ಣುಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಇದೆ. ಮಾಸಿಕ ಋತುಸ್ರಾವದಲ್ಲಿ ಸುಮಾರು 60ರಿಂದ 80 ಮೀ.ಲಿ ತನಕ ರಕ್ತ ನಷ್ಟಗೊಳ್ಳಬಹುದು. ಶೇಕಡ 10ರಷ್ಟು ಹೆಣ್ಣುಮಕ್ಕಳಲ್ಲಿ ಅಧಿಕ ರಕ್ತಸ್ರಾವದಿಂದ ರಕ್ತಹೀನತೆಯೂ ಉಂಟಾಗಬಹುದು.

ಪ್ರತಿಹೆಣ್ಣುಮಕ್ಕಳಲ್ಲೂ 12ವರ್ಷ ತುಂಬುವುದರೊಳಗೆ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟ ಪ್ರತಿಶತ 12ಮಿ.ಗ್ರಾಂ ಇರಬೇಕು. ಆದರೆ ನಮ್ಮ ದೇಶದಲ್ಲಿ ಶೇ 60ಕ್ಕೂ ಹೆಚ್ಚು ಹೆಣ್ಣುಮಕ್ಕಳಲ್ಲಿ ಹಿಮೋಗ್ಲೋಬಿನ್‌ಮಟ್ಟ 10ಕ್ಕಿಂತ ಕಡಿಮೆಇರುತ್ತದೆ. ಈ ಸ್ಥಿತಿಯನ್ನು ರಕ್ತಹೀನತೆ ಎನ್ನುತ್ತಾರೆ. ಇದನ್ನು ಸರಿಪಡಿಸಲು ಕಬ್ಬಿಣಾಂಶ ಹೆಚ್ಚುಳ್ಳ ಹಸಿರು ಸೊಪ್ಪು, ತರಕಾರಿಗಳು, ಬೆಲ್ಲ, ಖರ್ಜೂರ, ಅಂಜೂರದಹಣ್ಣು ಸೇವಿಸಬೇಕು. ಹಿಮೋಗ್ಲೋಬಿನ್‌ಮಟ್ಟ ಕಾಯ್ದುಕೊಳ್ಳಲು ಫೋಲಿಕ್‌ಆಮ್ಲದ ಅವಶ್ಯಕತೆಯು ಇದೆ. ಇದು ತಾಜಾಹಣ್ಣುಗಳಲ್ಲಿ (ಬಾಳೆಹಣ್ಣು, ಸೀತಾಫಲ, ಚಿಕ್ಕೂ ಇತ್ಯಾದಿ) ಬಸಳೆ, ಪಾಲಕ್ ಸೊಪ್ಪು ಇತ್ಯಾದಿಗಳಿಂದ ಅಧಿಕವಾಗಿ ಸಿಗುತ್ತದೆ. ಜಂಕ್‌ಫುಡ್, ಕೃತಕ ಪೇಯಗಳು, ಪಿಜ್ಜಾ, ಬರ್ಗರ್, ಸಿಹಿತಿಂಡಿ ಕುರಕಲು ತಿಂಡಿಗಳಿಂದ ದೂರವಿರಿಸಿ. ಇವುಗಳ ಸೇವನೆಯಿಂದ ಶರೀರಕ್ಕೆ ಬೇಕಾದ ಸತು(ಜಿಂಕ್) ಕ್ಯಾಲ್ಸಿಯಂನ ವಿಸರ್ಜನೆಯನ್ನ ಹೆಚ್ಚಿಸಿ ಪೌಷ್ಠಿಕಾಂಶಕೊರತೆಯನ್ನ ಉಂಟುಮಾಡುತ್ತದೆ.

ರಕ್ತಹೀನತೆ ಮತ್ತು ಅಪೌಷ್ಠಿಕತೆಯನ್ನು ಹೊಂದಿರುವ ಹುಡುಗಿಯರು ಗರ್ಭ ಧರಿಸಿದರೆ, ಹುಟ್ಟುವ ಮಕ್ಕಳಿಗೂ ರಕ್ತಹೀನತೆ ಸಮಸ್ಯೆ ಕಾಡಬಹುದು. ಕಬ್ಬಿಣದ ಪಾತ್ರೆಗಳಲ್ಲಿ ಆಹಾರ ತಯಾರಿಸುವುದು ಉತ್ತಮ. ಕ್ಯಾಲ್ಸಿಯಂಯುಕ್ತ ಅಯೋಡಿನ್‌ಅಂಶ ಹಾಗೂ ವಿಟಮಿನ್ ‘ಡಿ’ಯುಕ್ತ ಸಮುದ್ರ ಉತ್ಪನ್ನಗಳ ಬಳಕೆ, ಬಾದಾಮಿ, ವಾಲ್‌ನಟ್ ಇತ್ಯಾದಿ ಒಣಹಣ್ಣುಗಳ, ಬೀಜಗಳ ಬಳಕೆ ಒಳ್ಳೆಯದು. ಪಿರಿಡಾಕ್ಸಿನ್ ಎನ್ನುವ ‘ಡಿ’ ವಿಟಮಿನ್ ಕೊರತೆಯಿಂದ ಹರೆಯದ ಹೆಣ್ಣುಮಕ್ಕಳಲ್ಲಿ ಮುಟ್ಟಿನ ಮುನ್ನಾದಿನಗಳಲ್ಲಿ ಖಿನ್ನತೆ, ಭಾವನೆಗಳ ಏರಿಳಿತ ಸ್ತನಗಳಲ್ಲಿ ನೋವು ಇತ್ಯಾದಿ ಕಂಡುಬರಬಹುದು. ಮುಟ್ಟಿನ ಮುನ್ನಾದಿನಗಳಲ್ಲಿ ಅಥವಾ ಎಲ್ಲಾ ದಿನಗಳಲ್ಲೂ ಅಧಿಕ ಉಪ್ಪಿನಾಂಶ ಹಾಗೂ ಅತಿಯಾಗಿ ಕರಿದ, ಹುರಿದ ಆಹಾರಗಳನ್ನು ತ್ಯಜಿಸುವುದು ಅಥವಾ ಕಡಿಮೆ ಮಾಡಿ ಹೆಚ್ಚುನಾರಿಂನಾಂಶವುಳ್ಳ ಆಹಾರ, ಹಣ್ಣು ತರಕಾರಿಗಳ ಸೇವನೆಮಾಡುವುದು ಸೂಕ್ತ. ಮುಟ್ಟಿನ ಸಮಯದಲ್ಲಿ ಕೆಲವರಲ್ಲಿ ಕಿಬ್ಬೊಟ್ಟೆನೋವು, ಬೆನ್ನುನೋವು ಇತ್ಯಾದಿ ಉಂಟಾಗಬಹುದು. ಆ ಸಮಯದಲ್ಲಿ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಮತ್ತು ಹೆಚ್ಚು ದ್ರವಆಹಾರ ಸೂಕ್ತವಾದದ್ದು.

*ಬಿಳಿ ಮುಟ್ಟಿನ ಸಮಸ್ಯೆ ಇದೆ. ನನ್ನ ಗಂಡ ಜತೆ ಸೆಕ್ಸ್ ಮಾಡಿಲ್ಲ. ಗೆಳೆಯನ ಬಳಿ ಎರಡು ದಿನಕ್ಕೆ 4 ಬಾರಿ ಸೆಕ್ಸ್ ಮಾಡುತ್ತೇನೆ. ಇದರಿಂದ ಏನಾದರೂ ಸಮಸ್ಯೆಗಳಾಗುತ್ತದೆಯೇ?

–ಹೆಸರು, ಊರು ತಿಳಿಸಿಲ್ಲ

ನೀವು ವಿವಾಹದ ಚೌಕಟ್ಟಿನೊಳಗಿದ್ದು, ಪತಿ ಬಿಟ್ಟು ಗೆಳೆಯರೊಡನೆ ಲೈಂಗಿಕಸಂಪರ್ಕ ಮಾಡುತ್ತಿರುವುದು ಸಾಮಾಜಿಕವಾಗಿಯೂ, ನೈತಿಕವಾಗಿಯೂ ಸಮಂಜಸವಲ್ಲ. ವಿವಾಹೇತರ ಲೈಂಗಿಕಸಂಪರ್ಕದಿಂದ ಲೈಂಗಿಕ ರೋಗಗಳು ತಗಲುವ ಅಪಾಯವಿದೆ. ಹಾಗಾಗಿ ನೀವು ನಿಮ್ಮ ಪತಿಯೊಡನೆ ಲೈಂಗಿಕ ಸಂಪರ್ಕ ಮಾಡಲು ತೊಂದರೆ ಇದ್ದಲ್ಲಿ ತಜ್ಞರನ್ನ ಸಂರ್ಪಕಿಸಿ ಸಲಹೆ ಪಡೆದುಕೊಳ್ಳಿ. ಲೈಂಗಿಕ ಕಾಯಿಲೆಯಿಂದಲೂ ಬಿಳಿಮುಟ್ಟು ಉಂಟಾಗುವುದರಿಂದ ಸ್ತ್ರೀರೋಗತಜ್ಞರನ್ನು ಭೇಟಿ ಮಾಡಿ ಸೂಕ್ತಚಿಕಿತ್ಸೆ ಪಡೆದುಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.