ಭಾರತದ ಸಂವಿಧಾನಕ್ಕೀಗ 75 ವಸಂತಗಳ ಸಂಭ್ರಮ. ಸಂವಿಧಾನ ಕರಡು ರಚನಾ ಸಮಿತಿಯು ರಚಿಸಿದ್ದ ಭಾರತದ ಸಂವಿಧಾನವನ್ನು 1949ರ ನ. 26ರಂದು ಅಂಗೀಕರಿಸಲಾಗಿತ್ತು. ಜಗತ್ತಿನಲ್ಲಿಯೇ ಅತ್ಯಂತ ಶಕ್ತಿಶಾಲಿ ಪ್ರಜಾಪ್ರಭುತ್ವವಿರುವ, ಬಹುತ್ವವನ್ನು ಒಪ್ಪಿಕೊಂಡಿರುವ, ಹೆಚ್ಚು ಜನಸಂಖ್ಯೆ ಇರುವ ಭಾರತಕ್ಕೆ ನವೆಂಬರ್ 26ರ ದಿನ ಅತೀವ ಸಂಭ್ರಮದ್ದು ಎಂದರೆ ತಪ್ಪಾಗುವುದಿಲ್ಲ.

ಈ 75 ವಸಂತಗಳ ಪ್ರಯಾಣದ ಹಾದಿಯು ಸುಗಮವಾಗಿಯೇನೂ ಇರಲಿಲ್ಲ. ಹಲವು ಏರಿಳಿತಗಳನ್ನು ಈ ಪ್ರಯಾಣ ಕಂಡಿದೆ. ಆದರೆ, ಭಾರತವು ಸಾಧಿಸಿದ ಪ್ರಗತಿಯನ್ನು ಮಾತ್ರ ಯಾರೂ ಅಲ್ಲಗಳೆಯುವಂತಿಲ್ಲ. ಶಕ್ತಿಯುತ ಆರ್ಥಿಕತೆ ಹೊಂದಿರುವ ಜಗತ್ತಿನ ಮೊದಲ ಐದು ದೇಶಗಳ ಪಟ್ಟಿಯಲ್ಲಿ ಭಾರತವೂ ಸ್ಥಾನ ಪಡೆದಿದೆ. ಇಂಥ ಸಾಧನೆಯ ಜೊತೆಯಲ್ಲಿಯೇ ಭಾರತವು ತನ್ನ ಸಂವಿಧಾನ, ಏಕತೆ, ಸಮಗ್ರತೆಯನ್ನು ಕಾಪಾಡಿಕೊಂಡಿದೆ.

ಭಾರತದ ಸಂವಿಧಾನವು ಅತ್ಯಂತ ಬಾಳಿಕೆಯ ಗುಣ ಹೊಂದಿದೆ ಎಂದು ಅಧ್ಯಯನಗಳು ತೋರಿಸಿವೆ. ತಿದ್ದುಪಡಿಗಳಿಗೆ ಅವಕಾಶವಿರುವ, ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವ ಗುಣ ಇರುವ ಕಾರಣದಿಂದಲೇ ನಮ್ಮ ಸಂವಿಧಾನಕ್ಕೆ ಹೆಚ್ಚಿನ ಆಯಸ್ಸು ಪ್ರಾಪ್ತಿಯಾಗಿದೆ. ಕೆಲವು ದೇಶಗಳ ಸಂವಿಧಾನಕ್ಕೆ ಈ ಎರಡೂ ಗುಣಗಳು ಇರುವುದಿಲ್ಲ. ನಮ್ಮ ಸಂವಿಧಾನಕ್ಕೆ 106 ತಿದ್ದುಪಡಿಗಳನ್ನು ಮಾಡಲಾಗಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕೆಲವು ಪಾಶ್ಚಿಮಾತ್ಯ ವಿದ್ವಾಂಸರು ನಮ್ಮ ಸಂವಿಧಾನದ ಕುರಿತು ಅಪಹಾಸ್ಯವನ್ನೂ ಮಾಡಿದ್ದಾರೆ. ಆದರೆ, ತಿದ್ದುಪಡಿಗೆ ಅವಕಾಶ ಇರುವ ಕಾರಣದಿಂದಲೇ ನಮ್ಮ ಸಂವಿಧಾನಕ್ಕೆ ಹೆಚ್ಚು ಬಾಳಿಕೆಯ ಗುಣ ಪ್ರಾಪ್ತವಾಗಿದೆ ಹಾಗೂ ಇದರಿಂದಲೇ ಭಾರತದ ಏಕತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ತಮ್ಮ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂದು ಭಾರತೀಯರಿಗೆ ತಿಳಿದಿದೆ. ಆದರೆ, ಪಾಶ್ಚಿಮಾತ್ಯರಿಗೆ ಇದು ತಿಳಿದಿಲ್ಲ.

ಹೆಚ್ಚಿನ ಸಂವಿಧಾನಗಳು 15ರಿಂದ 19 ವರ್ಷಗಳಲ್ಲೇ ಅಪ್ರಸ್ತುತವಾಗುತ್ತವೆ. ‘ಲಿಖಿತ ಸಂವಿಧಾನದ ಜೀವಿತಾವಧಿ’ ಎನ್ನುವ ವಿಷಯಕ್ಕೆ ಸಂಬಂಧಿಸಿ ಷಿಕಾಗೊ ವಿಶ್ವವಿದ್ಯಾಲಯದ ಕಾನೂನು ಶಾಲೆಯು ಅಧ್ಯಯನ ನಡೆಸಿ, ವಿಷಯ ಮಂಡಿಸಿದೆ. ‘ಹೆಚ್ಚಿನ ಸಂವಿಧಾನಗಳ ಸರಾಸರಿ ಜೀವಿತಾವಧಿಯು 17 ವರ್ಷಗಳು ಮಾತ್ರ ಆಗಿದೆ’ ಎನ್ನುತ್ತದೆ ಈ ಅಧ್ಯಯನ. ‘ಅಂಗೀಕಾರಗೊಂಡ 18ನೇ ವರ್ಷಕ್ಕೆ ಜಗತ್ತಿನ ಅರ್ಧದಷ್ಟು ಸಂವಿಧಾನಗಳು ತಮ್ಮ ಪ್ರಸ್ತುತತೆ ಕಳೆದುಕೊಳ್ಳುತ್ತವೆ. 50 ವರ್ಷಗಳವರೆಗೆ ತಮ್ಮ ಪ್ರಸ್ತುತತೆಯನ್ನು ಶೇ 19ರಷ್ಟು ಸಂವಿಧಾನಗಳು ಮಾತ್ರ ಉಳಿಸಿಕೊಳ್ಳುತ್ತವೆ. ಅಂಗೀಕಾರಗೊಂಡ ಒಂದೇ ವರ್ಷದಲ್ಲಿ ಶೇ 7ರಷ್ಟು ಸಂವಿಧಾನಗಳು ಸಾಯುತ್ತವೆ’ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಈ ಕಾರಣಕ್ಕಾಗಿಯೇ, ನಮ್ಮ ಸಂವಿಧಾನಕ್ಕೆ 75 ವಸಂತ ತುಂಬಿರುವುದು ಅತ್ಯಂತ ಸಂತಸದ ವಿಚಾರ. ಜಗತ್ತಿನ 80ಕ್ಕೂ ಹೆಚ್ಚು ಸಂವಿಧಾನಗಳ ಪರಾಮರ್ಶೆಯನ್ನು ನಡೆಸಿದಾಗ ಹಲವಾರು ಮಹತ್ವದ ಅಂಶಗಳು ನನ್ನ ಗಮನಕ್ಕೆ ಬಂದವು. ಪ್ರಜಾಪ್ರಭುತ್ವದ ಮೂಲಭೂತ ಅಂಶಗಳು ಹಾಗೂ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ನೀಡಿರುವ ಮೂಲಭೂತ ಹಕ್ಕುಗಳ ಕಾರಣಕ್ಕಾಗಿ ಭಾರತದ ಸಂವಿಧಾನವು ಬೇರೆಲ್ಲಾ ಸಂವಿಧಾನಗಳಿಗಿಂತ ಮಿಗಿಲಾಗಿ ನಿಲ್ಲುತ್ತದೆ. ಇಂಥ ಹಕ್ಕುಗಳು ಜಗತ್ತಿನ ಬೇರೆ ಯಾವ ಸಂವಿಧಾನದಲ್ಲಿಯೂ ಇಲ್ಲ ಎಂಬುದು ನನಗೆ ಮನವರಿಕೆಯಾಯಿತು.

ಅಲ್ಪಸಂಖ್ಯಾತರಿಗೆ ನೀಡಿರುವ ಹಕ್ಕುಗಳ ಕುರಿತೇ ನೋಡಿ: ಕಾನೂನಿನ ಮುಂದೆ ಎಲ್ಲರೂ ಸಮಾನರು ಮತ್ತು ಕಾನೂನಿನ ಮೂಲಕ ರಕ್ಷಣೆ ಪಡೆದುಕೊಳ್ಳಲು ಎಲ್ಲರಿಗೂ ಸಮಾನ ಹಕ್ಕಿದೆ (ವಿಧಿ 14); ಧರ್ಮ, ಜಾತಿ, ಲಿಂಗ, ಜನ್ಮಸ್ಥಳದ ಆಧಾರದಲ್ಲಿ ತಾರತಮ್ಯ ಮಾಡುವಂತಿಲ್ಲ (ವಿಧಿ 15); ಸರ್ಕಾರಿ ಉದ್ಯೋಗದಲ್ಲಿ ತಾರತಮ್ಯ ಮಾಡುವಂತಿಲ್ಲ (ವಿಧಿ 16); ಎಲ್ಲ ರೀತಿಯ ಸ್ವಾತಂತ್ರ್ಯ (ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಘ–ಸಂಸ್ಥೆ ಸ್ಥಾಪಿಸುವ ಸ್ವಾತಂತ್ರ್ಯ, ದೇಶದಲ್ಲಿ ಎಲ್ಲಿ ಬೇಕಾದರೂ ಓಡಾಡುವ ಸ್ವಾತಂತ್ರ್ಯ, ಯಾವುದೇ ವೃತ್ತಿಯನ್ನು ಮಾಡುವ ಸ್ವಾತಂತ್ರ್ಯ, ದೇಶದಲ್ಲಿ ಎಲ್ಲಿ ಬೇಕಾದರೂ ವಾಸಿಸುವ ಸ್ವಾತಂತ್ರ್ಯ: ವಿಧಿ 19); ಯಾವುದೇ ನಂಬಿಕೆಯನ್ನು ಅನುಸರಿಸುವ ಹಾಗೂ ಯಾವುದೇ ಧರ್ಮವನ್ನು ಆಚರಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯ (ವಿಧಿ 25); ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸುವ ಸ್ವಾತಂತ್ರ್ಯ (ವಿಧಿ 26); ಎಲ್ಲ ರೀತಿಯ ಅಲ್ಪಸಂಖ್ಯಾತರು (ಭಾಷೆ ಅಥವಾ ಧರ್ಮ) ತಮ್ಮದೇ ಶೈಕ್ಷಣಿಕ ಸಂಸ್ಥೆ ಸ್ಥಾಪಿಸುವ ಹಾಗೂ ಅದರ ಆಡಳಿತ ನಡೆಸುವ ಸ್ವಾತಂತ್ರ್ಯ (ವಿಧಿ 30). ಹೀಗೆ ಹಲವು ಸ್ವಾತಂತ್ರ್ಯಗಳನ್ನು ಅಲ್ಪಸಂಖ್ಯಾತರಿಗೆ ನೀಡಲಾಗಿದೆ.

ಈ ಎಲ್ಲದಕ್ಕೂ ಮಿಗಿಲಾಗಿ, ಸರ್ಕಾರದಿಂದ ಸಂಪೂರ್ಣವಾಗಿ ಧನಸಹಾಯ ಪಡೆಯುವ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಪಾಠ ಮಾಡುವುದನ್ನು ಸಂವಿಧಾನದ 28ನೇ ವಿಧಿ ನಿರ್ಬಂಧಿಸುತ್ತದೆ.

ನಮ್ಮ ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗಾಗಿ ಹಾಗೂ ವೈಯಕ್ತಿಕ ನೆಲಗಟ್ಟಿನಲ್ಲಿ ಇಷ್ಟೊಂದು ಹಕ್ಕುಗಳನ್ನು ಯಾಕಾಗಿ ನೀಡಲಾಗಿದೆ ಎಂದು ಯಾರಿಗಾದರೂ ಆಶ್ಚರ್ಯವಾಗಬಹುದು. ಹಾಗಾದರೆ, ಜನಾಂಗೀಯ, ಧಾರ್ಮಿಕ, ಭಾಷಿಕ, ಸಾಮಾಜಿಕ ಹಾಗೂ ರಾಜಕೀಯ ವೈವಿಧ್ಯವನ್ನು ಗೌರವಿಸಲು ಮತ್ತು ದೇಶದ ಎಲ್ಲ ವರ್ಗದ ಜನರು ಉದಾರವಾದಿ ಹಾಗೂ ಪ್ರಜಾಪ್ರಭುತ್ವವಾದಿ ವಾತಾವರಣದಲ್ಲಿ ಜೀವಿಸಲು ಅನುವು ಮಾಡಿಕೊಡಲು ಇಷ್ಟೆಲ್ಲ ಹಕ್ಕುಗಳನ್ನು ನೀಡಲಾಗಿದೆಯೇ? ಅಲ್ಪಸಂಖ್ಯಾತ

ರಿಗೆ ಯಾಕಾಗಿ ಇಷ್ಟೊಂದು ಹಕ್ಕುಗಳನ್ನು ನೀಡಲಾಗಿದೆ ಎಂಬುದಕ್ಕೆ ಸರಳ ಉತ್ತರವಿದೆ. ಭಾರತವು ಬಹಳ ಹಿಂದಿನಿಂದಲೂ ಜಾತ್ಯತೀತವಾದ ಹಾಗೂ ಪ್ರಜಾಪ್ರಭುತ್ವವಾದಿ ರಾಷ್ಟ್ರ. ಇದಕ್ಕೆ ಋಗ್ವೇದ ಕಾಲದಲ್ಲಿ ಸಾಕ್ಷ್ಯಗಳು ದೊರಕುತ್ತವೆ. ಸಾವಿರಾರು ವರ್ಷಗಳ ಹಿಂದಿನ ಮಹಾಉಪನಿಷತ್ನಲ್ಲಿ ಹಾಗೂ ಇತರ ಗ್ರಂಥಗಳಲ್ಲಿಯೂ ಇದಕ್ಕೆ ಸಾಕ್ಷ್ಯಗಳಿವೆ.

ಜಾತ್ಯತೀತ ಹಾಗೂ ಪ್ರಜಾಪ್ರಭುತ್ವ ಸಿದ್ಧಾಂತವನ್ನು ನಾವು ಬ್ರಿಟಿಷರಿಂದ ಹಾಗೂ ಅಮೆರಿಕದವರಿಂದ ಎರವಲು ಪಡೆದುಕೊಂಡಿದ್ದೇವೆ ಎಂಬುದನ್ನು ವಸಾಹತುಶಾಹಿ ಕಾಲಘಟ್ಟದಲ್ಲಿ ಹಾಗೂ ನೆಹರೂ ಆಡಳಿತದ ಅವಧಿಯಲ್ಲಿ ಹೇಳಲಾಯಿತು. ಆದರೆ, ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವವಾದಿ ಪರಂಪರೆ ಇತ್ತು.

ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಪ್ರಜಾಪ್ರಭುತ್ವ ಇತ್ತು ಎನ್ನುವ ಕುರಿತು ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಬಿ.ಆರ್.ಅಂಬೇಡ್ಕರ್ ಕೂಡ ಸಾಕ್ಷ್ಯಗಳ ಆಧಾರದಲ್ಲಿಯೇ ಮಾತನಾಡಿದ್ದಾರೆ. ಭಾರತಕ್ಕೆ ಪ್ರಜಾಪ್ರಭುತ್ವವು ಹೊಸತಲ್ಲ ಎಂದಿದ್ದಾರೆ. ‘ಭಾರತಕ್ಕೆ ರಾಜಕೀಯ ಪ್ರಜಾಪ್ರಭುತ್ವ ಮಾತ್ರ ಸಾಕಾಗುವುದಿಲ್ಲ. ಭಾರತದ ಜನರಿಗೆ ಸಾಮಾಜಿಕ ಹಾಗೂ ಆರ್ಥಿಕ ಪ್ರಜಾಪ್ರಭುತ್ವವೂ ಬೇಕು’ ಎಂದು ಅಂಬೇಡ್ಕರ್ ಹೇಳಿದ್ದರು. ಕರ್ನಾಟಕದಲ್ಲಿ ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ (1970) ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡಿದ್ದರು. ಅಂಬೇಡ್ಕರ್ ಅವರ ಸಾಮಾಜಿಕ ಹಾಗೂ ಆರ್ಥಿಕ ಪ್ರಜಾಪ್ರಭುತ್ವದ ಮಾದರಿಯನ್ನು ನಮ್ಮ ಸರ್ಕಾರಗಳು ಅನುಸರಿಸಿದವು ಎನ್ನುವುದನ್ನು ಅರಸು ಅವರ ಆಡಳಿತ ಅವಧಿಯು ತೋರಿಸುತ್ತದೆ.

ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿದ ಬಳಿಕ ನಾನು ಎಂಟು ಅಂಶಗಳನ್ನು ಒಳಗೊಂಡ ಪ್ರಜಾಪ್ರಭುತ್ವ ಸೂಚ್ಯಂಕವನ್ನು ರೂಪಿಸಿದ್ದೇನೆ. ಈ ಎಲ್ಲ ಅಂಶಗಳನ್ನು ಪೂರೈಸಿದ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಜಾಪ್ರಭುತ್ವವಿದೆ ಎಂದರ್ಥ. ಅವು ಇಂತಿವೆ:

ಅಭಿವ್ಯಕ್ತಿ ಹಾಗೂ ಇತರ ಮೂಲಭೂತ ಸ್ವಾತಂತ್ರ್ಯಗಳು ಮತ್ತು ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ಬದ್ಧತೆ.

ಜಾತ್ಯತೀತ ತತ್ವಕ್ಕೆ ಬದ್ಧತೆ.

ಸರ್ಕಾರ ಮತ್ತು ಧರ್ಮ ಪ್ರತ್ಯೇಕವಾಗಿರಬೇಕು.

ಗಣರಾಜ್ಯ.

ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಕಾನೂನಿನಡಿ ಎಲ್ಲರಿಗೂ ರಕ್ಷಣೆ ಪಡೆದುಕೊಳ್ಳುವ ಸಮಾನ ಹಕ್ಕು.

ಜೀವಿಸುವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು.

ಲಿಂಗ ಸಮಾನತೆ.

ಅರ್ಹ ಎಲ್ಲರಿಗೂ ಮತದಾನದ ಹಕ್ಕು.

ಭಾರತದ ಸಂವಿಧಾನವು ಈ ಎಲ್ಲ ಅಂಶಗಳನ್ನು ಒಳಗೊಂಡಿದೆ. ಆದ್ದರಿಂದಲೇ ನಮ್ಮ ಸಂವಿಧಾನವು ಬೇರೆಲ್ಲಾ ಸಂವಿಧಾನಗಳಿಗಿಂತ ಮಿಗಿಲಾಗಿದೆ.

ದೇಶದಲ್ಲಿ ‘ಏನಾದರೂ ಸಮಸ್ಯೆಯಾದರೆ,ಅನಾಹುತವಾದರೆ ಅದಕ್ಕೆ ನಾವು ಕೆಟ್ಟ ಸಂವಿಧಾನವನ್ನು ಹೊಂದಿದ್ದೇವೆ ಎಂಬುದು ಕಾರಣವಲ್ಲ. ಇದಕ್ಕೆ ಕಾರಣ ವ್ಯಕ್ತಿಗಳಲ್ಲಿನ ಲೋಪ ಎಂದು ನಾವು ಹೇಳಬೇಕಾಗುತ್ತದೆ’. ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಯಶಸ್ಸು ಗಳಿಸಬೇಕು ಎಂದಾದರೆ, ಅಂಬೇಡ್ಕರ್ ಅವರು ಹೇಳಿದ ಈ ಮಾತನ್ನು ಮರೆಯಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.