ಬೀಳಗಿ: ತೆಂಗಿನಕಾಯಿ ದರ ಹೆಚ್ಚಳವಾಗಿದ್ದು, ಸಗಟು ವ್ಯಾಪಾರಿಗಳು, ಸಣ್ಣ ವ್ಯಾಪಾರಸ್ಥರು ಹಾಗೂ ಗ್ರಾಹಕರು ಪರದಾಡುವಂತಾಗಿದೆ.

ಕಳೆದ ತಿಂಗಳು ಒಂದು ತೆಂಗಿನಕಾಯಿ ದರ ಕನಿಷ್ಠ ₹12 ಹಾಗೂ ಗರಿಷ್ಠ ದರ ₹25ರಷ್ಟಿತ್ತು. ಇದೀಗ ಕನಿಷ್ಠ ದರ ₹25 ಹಾಗೂ ಗರಿಷ್ಠ ದರ ₹30 ರಿಂದ 40ಕ್ಕೆ ತಲುಪಿದೆ. ಸಗಟು ಮಾರುಕಟ್ಟೆಯಲ್ಲಿ ಪ್ರತಿ 100 ತೆಂಗಿನಕಾಯಿ ದರವು ₹900ರಿಂದ ₹1,800ವರೆಗೆ ಮಾರಾಟವಾಗಿದ್ದವು.

ಈಗ ಸಗಟು ಮಾರುಕಟ್ಟೆಯಲ್ಲಿ 100 ತೆಂಗಿನಕಾಯಿ ದರ ₹1,800-₹3,500ವರೆಗೆ ಮಾರಾಟವಾಗುತ್ತಿವೆ. ಈ ಹಿಂದೆ ಇದ್ದ ಗರಿಷ್ಠ ಮಟ್ಟದ ದರವು ಈಗ ಕನಿಷ್ಠ ಮಟ್ಟಕ್ಕೆ ತಲುಪಿದೆ. ಸಾಗಾಣಿಕೆ ವೆಚ್ಚ, ತೆರಿಗೆ ಹಾಗೂ ಮತ್ತಿತರ ಬಾಬತ್ತುಗಳನ್ನು ಸೇರಿಸಿದರೆ ತಲಾ ಒಂದು ತೆಂಗಿನಕಾಯಿ ಬೆಲೆ ₹36 ರಷ್ಟಾಗಿ, ಸಗಟು ವ್ಯಾಪಾರಿಗಳು, ಸಣ್ಣ ವ್ಯಾಪಾರಸ್ಥರು ಹಾಗೂ ಗ್ರಾಹಕರು ಪರದಾಡುತ್ತಿದ್ದಾರೆ.

ಶಿವಮೊಗ್ಗ, ಅರಸಿಕೇರೆ, ತಿಪಟೂರು, ತಮಿಳುನಾಡು ಮೊದಲಾದ ಭಾಗಗಳಿಂದ ಮಾರುಕಟ್ಟೆಗೆ ತೆಂಗಿನಕಾಯಿ ತರಿಸಿಕೊಳ್ಳಲಾಗುತ್ತದೆ. ವ್ಯಾಪಾರಸ್ಥರಿಗೆ ಸಾಗಾಣಿಕೆಯ ವೆಚ್ಚವೇ ಅಧಿಕವಾಗಿದ್ದು, ಅನ್ಯದಾರಿ ಕಾಣದೆ ವ್ಯಾಪಾರಸ್ಥರು ಅದರ ವೆಚ್ಚವನ್ನು ಗ್ರಾಹಕರ ಮೇಲೆ ಹೇರುತ್ತಿದ್ದಾರೆ. ಹೀಗಾಗಿ ಕಳೆದ ಹಲವು ದಿನಗಳಿಂದ ತೆಂಗಿನ ದರ ಗಗನಮುಖಿಯಾಗಿದೆ.

ದರ ಏರಿಕೆ ಹೋಟೆಲ್ ಉದ್ಯಮಿಗಳನ್ನು ಬಾಧಿಸುತ್ತಿದೆ. ಹಬ್ಬ, ಹರಿದಿನಗಳ ಧಾರ್ಮಿಕ ಆಚರಣೆಯಲ್ಲಿ ತೆಂಗು ಅಗ್ರಸ್ಥಾನ ಪಡೆದಿದ್ದು, ತೆಂಗಿನಕಾಯಿ ಇಲ್ಲದೆ ಯಾವ ಪೂಜೆಯೂ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಜನ ಸಾಮಾನ್ಯರು ತೆಂಗಿನಕಾಯಿಯನ್ನು ಖರೀದಿಸಲೇ ಬೇಕಾಗುತ್ತದೆ. ಜೊತೆಗೆ ಹೋಟೆಲ್ ಉದ್ಯಮಿಗಳಿಗೆ ತೆಂಗು ಅನಿವಾರ್ಯವಾಗಿದೆ.

ಎಳೆನೀರು ಮಾರಾಟದಿಂದ ಲಾಭ: ಬೀಳಗಿ ತಾಲ್ಲೂಕಿನ ಸೊನ್ನ,ಢವಳೆಶ್ವರ,ನಾಗರಾಳ, ಮೊದಲಾದ ಕೃಷ್ಣಾ ನದಿ ದಂಡೆಯ ನೀರಾವರಿ ಜಮೀನುಗಳಲ್ಲಿ ಹೇರಳವಾಗಿ ತೆಂಗು ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ತೆಂಗನ್ನು ರೈತರೆ ಮಾರುಕಟ್ಟೆಯಲ್ಲಿ ಎಳೆನೀರು ರೂಪದಲ್ಲಿ ಮಾರಾಟ ಮಾಡುತ್ತಿದ್ದಾರೆ. ಒಂದು ಎಳೆನೀರು ₹40 ರಿಂದ ₹50ಕ್ಕೆ ಮಾರಾಟವಾಗುತ್ತಿದೆ. ತೆಂಗಿನ ಮರದಲ್ಲಿ ಕಾಯಿ ಬಲಿತು, ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಅದರಿಂದ ಹೆಚ್ಚೇನು ಲಾಭ ಬರುವುದಿಲ್ಲ. ಹೀಗಾಗಿ ಬಹುತೇಕ ರೈತರು ಎಳನೀರು ಮಾರಾಟದಲ್ಲಿ ತೊಡಗಿದ್ದಾರೆ.

ಬಾಗಲಕೋಟೆ, ಮುಧೋಳ, ಬೀಳಗಿ ಮೊದಲಾದ ಭಾಗಗಳ ವ್ಯಾಪಾರಸ್ಥರು ರೈತರ ಜಮೀನುಗಳಿಗೆ ಆಗಮಿಸಿ ಜಮೀನಿನಲ್ಲಿಯೇ ತಲಾ ₹30-₹35ಕ್ಕೆ ಎಳೆನೀರು ಕಾಯಿಗಳನ್ನು ಖರೀದಿಸಿ ಸ್ಥಳದಲ್ಲಿಯೇ ಹಣ ನೀಡುತ್ತಾರೆ. ಇದು ಇಲ್ಲಿಯ ರೈತರಿಗೆ ಅನುಕೂಲವಾಗಿದೆ. ಬಹುತೇಕ ರೈತರು ಬಲಿತ ತೆಂಗಿನಕಾಯಿಗಳ ಬದಲಾಗಿ ಎಳೆನೀರು ಮಾರಾಟಕ್ಕೆ ಮೊರೆಹೋಗಿದ್ದಾರೆ.

’ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಹಬ್ಬಮ ಮತ್ತಿತರ ಸಂದರ್ಭದಲ್ಲಿ ತೆಂಗಿನಕಾಯಿ ಖರೀದಿಸುವುದು ಅನಿವಾರ್ಯವಾಗುತ್ತದೆ’ ಎನ್ನುತ್ತಾರೆ ನೇಕಾರ ನಗರದ ನಿವೃತ್ತ ಶಿಕ್ಷಕ ಕಾಶೀನಾಥ ಹೊಟ್ಟಿ ತಿಳಿಸಿದರು.

ಎಳೆನೀರು ಒಣಕೊಬ್ಬರಿ ಹಾಗೂ ಶುದ್ಧ ಕೊಬ್ಬರಿ ಎಣ್ಣೆಗಳ ಬೇಡಿಕೆಯಿಂದಾಗಿ ತೆಂಗಿಗೆ ಭಾರಿ ಬೇಡಿಕೆ ಬಂದಿದ್ದು ಬೆಲೆ ಏರಿಕೆಯಾಗಿದೆ.
–ಬಾಬುಸಾಬ ಬೀಳಗಿ ತೆಂಗಿನಕಾಯಿ ಸಗಟು ವ್ಯಾಪಾರಿ ಬೀಳಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.