ಹೂವಿನಹಡಗಲಿ/ಗೋಕರ್ಣ: ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಅರಳಿಹಳ್ಳಿ ಗ್ರಾಮದ ಬಳಿ ಗುರುವಾರ ಸಂಜೆ ಸಿಡಿಲು ಬಡಿದು ಮಾನ್ಯರಮಸವಾಡ ಗ್ರಾಮದ ಶಂಭು ತೋಟಣ್ಣನವರ (26) ಮೃತಪಟ್ಟಿದ್ದಾರೆ. ಅರಳಿಹಳ್ಳಿ ಬಳಿ ಮರದ ಬಳಿ ನಿಂತಾಗ, ಸಿಡಿಲು ಬಡಿದಿದೆ ಎಂದು ಹಿರೇಹಡಗಲಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಎಪಿಎಂಸಿ ಬಳಿ ಸಂತೆ ಮಾರುಕಟ್ಟೆಯಲ್ಲಿ ಖರೀದಿಸಲು ಹೋದ ನಾಲ್ವರು ಕಾರ್ಮಿಕರಾದ ಪರಮೇಶ್ವರ ಚಂದ್ರ ಗೌಡ, ಮಹಮ್ಮದ ಅಝಾದ್, ಆಯುಶ್ ಕುಮಾರ್ ಮತ್ತು ನೂರ್ ಅಸ್ಲಾಂ ಎಂಬುವರು ಸಿಡಿಲು ಬಡಿದು ಗಾಯಗೊಂಡಿದ್ದಾರೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.