ಬಳ್ಳಾರಿ ನಗರದ ಕನಕ ದುರ್ಗಮ್ಮ ಗುಡಿ ಮುಂದಿನ ರಸ್ತೆಯ ದುಃಸ್ಥಿತಿ
ವಿಸ್ತರಣೆಗಾಗಿ ಕಾದಿರುವ ಬಳ್ಳಾರಿ ರಸ್ತೆಯೊಂದರ ನೋಟ
ಪ್ರಜಾವಾಣಿ ಚಿತ್ರಗಳು– ಮುರಳಿಕಾಂತ ರಾವ್
ನಮ್ಮ ಅಂಗಡಿ ಬಳಿ ರಸ್ತೆ ಗುಂಡಿಗೆ ಕಲ್ಲುಗಳನ್ನು ಸುರಿಯಲಾಗಿದೆ. ಇದರಿಂದ ವಿಪರೀತ ದೂಳು ಬರುತ್ತಿದೆ. ಭಾರಿ ವಾಹನಗಳು ಹೋದಾಗ ಕಲ್ಲುಗಳು ಸಿಡಿದು ಅಂಗಡಿಗೆ ಬೀಳುತ್ತಿವೆ
ವಿ. ಸುರೇಶ್ ನಂದಿನಿ ಹಾಲು ವಿತರಕ
ಟೋಲ್ ಶುಲ್ಕ ಪ್ರಸ್ತಾಪ
ಈಚೆಗೆ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಂದಿನ ಕಮಿಷನರ್ ಎಸ್.ಎನ್. ರುದ್ರೇಶ್ ನಗರದೊಳಗೆ ಬರುವ ಟ್ರಕ್‌ಗಳಿಗೆ ಟೋಲ್ ಶುಲ್ಕ ಸಂಗ್ರಹಿಸುವ ಕುರಿತು ಪ್ರಸ್ತಾಪಿಸಿದ್ದರು. ಮರು ದಿನವೇ ಅವರ ವರ್ಗಾವಣೆ ಆಯಿತು. ಪ್ರತಿನಿತ್ಯ ನಗರದೊಳಗೆ ಹಾದುಹೋಗುವ ನೂರಾರು ಟ್ರಕ್‌ಗಳಿಗೆ ಟೋಲ್ ಶುಲ್ಕ ವಿಧಿಸುವುದರಿಂದ ಪಾಲಿಕೆಗೂ ಆದಾಯ ಬರಲಿದೆ. ರಸ್ತೆಗಳ ರಿಪೇರಿಗೂ ಹಣ ಸಂಗ್ರಹವಾಗಲಿದೆ. ಇದೊಂದು ಸಮಯೋಚಿತ ನಿರ್ಧಾರ. ಅನುಷ್ಠಾನಕ್ಕೆ ಬರಬೇಕು. ಟ್ರಕ್‌ಗಳು ನಗರದೊಳಗೆ ಬರುವುದನ್ನು ತಡೆಯಲು ವರ್ತುಲ ರಸ್ತೆ ನಿರ್ಮಿಸುವ ಪ್ರಸ್ತಾವವೂ ಇದೆ. ಅದು ಯಾವಾಗ ಆಗುವುದೋ? ವರ್ತುಲ ರಸ್ತೆಯಾದರೆ ನಗರದ ರಸ್ತೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ.