ಬೆಂಗಳೂರು: ನಗರದಲ್ಲಿ ಅತಿಹೆಚ್ಚು ವಾಯು ಮಾಲಿನ್ಯವಿರುವ ರಸ್ತೆಗಳಲ್ಲಿ ಮಾಲಿನ್ಯವನ್ನು ನಿಯಂತ್ರಿಸಲು ‘ಆ್ಯಂಟಿ ಸ್ಮಾಗ್ ಗನ್’ ಯಂತ್ರಗಳನ್ನು ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಬಳಸುತ್ತಿದೆ.

ನಗರದಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಅದನ್ನು ನಿಯಂತ್ರಿಸುವುದಕ್ಕಾಗಿ ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದಿಂದ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಲ್ಲಿ ‘ಆ್ಯಂಟಿ ಸ್ಮಾಗ್ ಗನ್’ ಒಂದಾಗಿದೆ.

‘ಅತಿಹೆಚ್ಚು ನಿರ್ಮಾಣ ಚಟುವಟಿಕೆಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ಈ ಯಂತ್ರಗಳನ್ನು ಬಳಸಲಾಗುತ್ತಿದೆ. ಈ ಯಂತ್ರವುಳ್ಳ ವಾಹನ ನಿತ್ಯ ಸುಮಾರು 60 ಕಿ.ಮೀ ಸಂಚರಿಸುತ್ತಿದೆ. ದೆಹಲಿ ಪರಿಸ್ಥಿತಿ ಹಿನ್ನೆಲೆಯಲ್ಲಿ ನಗರದಲ್ಲಿ ನಗರದಲ್ಲಿ ಅಂತಹ ಪರಿಸ್ಥಿತಿ ಬಾರದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ’ ಎಂದು ರಸ್ತೆ ಮೂಲಸೌಕರ್ಯದ ಮುಖ್ಯ ಎಂಜಿನಿಯರ್ ಆಗಿರುವ ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ತಿಳಿಸಿದರು.

‘ಕೋರಮಂಗಲ–100 ವ್ಯಾಲಿಯಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಿಸಲಾಗಿರುವ 5 ಎಂಎಲ್ಡಿ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ‘ಆ್ಯಂಟಿ ಸ್ಮಾಗ್ ಗನ್’ ಯಂತ್ರಗಳಿಗೆ ನೀರನ್ನು ಬಳಸಲಾಗುತ್ತಿದೆ’ ಎಂದು ಹೇಳಿದರು.

Cut-off box - 8 ಒಟ್ಟು ‘ಆ್ಯಂಟಿ ಸ್ಮಾಗ್ ಗನ್’ ಯಂತ್ರ 45 ಕಿ.ಮೀ.ಯಿಂದ 60 ಕಿ.ಮೀ ನಿತ್ಯ ಈ ಯಂತ್ರವುಳ್ಳ ವಾಹನದ ಸಂಚಾರ 6000 ಲೀಟರ್ ಪ್ರತಿ ಯಂತ್ರದ ನೀರಿನ ಸಂಗ್ರಹ ಸಾಮರ್ಥ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.