ಬೆಂಗಳೂರು: ನಗರದಲ್ಲಿ ಆಟೊ ಚಾಲಕರೊಬ್ಬರು ತಮ್ಮ ವಾಹನದ ಹಿಂಭಾಗ ‘ಇದು ಕೆಟ್ಟ ವಾಹನ ಯಾರೂ ಖರೀದಿಸಬೇಡಿ’ ಎಂದು ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

ನಗರದಲ್ಲಿ ಟ್ರಾಫಿಕ್ನಲ್ಲಿ ಆಟೊವೊಂದು ನಿಂತಿದ್ದು, ಅದರ ಹಿಂಭಾಗದಲ್ಲಿ ‘ಇದು ಕೆಟ್ಟ ವಾಹನ ಯಾರೂ ಖರೀದಿಸಬೇಡಿ’ ಎಂದು ಬರೆದಿರುವುದು ಕಂಡುಬಂದಿದೆ. ಇದೀಗ ಪೋಸ್ಟರ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಪರ –ವಿರೋಧದ ಚರ್ಚೆ ಹುಟ್ಟುಹಾಕಿದೆ.

ಆಶಿಶ್ ಕೃಪಾಕರ್ ಎಂಬುದರ ‘ಎಕ್ಸ್’ನಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ. ಕೆಟ್ಟ ಉತ್ಪನ್ನವನ್ನು ಖರೀದಿಸಬೇಡಿ ಎಂದು ಇತರರಿಗೆ ಹೇಳುವುದಕ್ಕೆ ಒಂದು ಉತ್ತಮ ಉದಾಹರಣೆ ಇಲ್ಲಿದೆ. ಕೇವಲ ನಮ್ಮ ಬೆಂಗಳೂರಿನ ವಿಷಯಗಳು ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಇದುವರೆಗೆ 44 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಎಲೆಕ್ಟ್ರಿಕ್ ಆಟೊಗೆ ಸಂಬಂಧಿಸಿದಂತೆ ಚಾಲಕರೊಂದಿಗೆ ನಾನು ಮಾತನಾಡಿದ್ದೇನೆ. ಆಟೊದ ಬ್ಯಾಟರಿ ಸಾಮರ್ಥ್ಯ ನಿರ್ದಿಷ್ಟವಾಗಿರುವುದರಿಂದ ಹೆಚ್ಚು ದೂರ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಟ್ರಿಪ್ಗಳನ್ನು ಕಡಿತಗೊಳಿಸಲಾಗುತ್ತದೆ ಎಂದು ಅವರು ಹೇಳಿಕೊಂಡಿರುವುದಾಗಿ ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.