ಬೆಂಗಳೂರು: ನಗರದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣ, ರೋಗ ಪತ್ತೆಯ ಪರೀಕ್ಷೆ (ಆರ್ಟಿಪಿಸಿಆರ್), ಆಕ್ಸಿಜನ್ ಸಿಲಿಂಡರ್, ಸೊಳ್ಳೆ ನಿಯಂತ್ರಣಕ್ಕೆ ಔಷಧ ಸಿಂಪಡಿಸುವ ವೆಚ್ಚಗಳಲ್ಲಿ ಅಕ್ರಮವಾಗಿದ್ದು, ಕೋಟ್ಯಂತರ ರೂಪಾಯಿಯನ್ನು ಹೆಚ್ಚುವರಿಯಾಗಿ ಪಾವತಿ ಮಾಡಲಾಗಿದೆ.

ಕೋವಿಡ್ ನಿಯಂತ್ರಣದ ವೆಚ್ಚಗಳ ಪಾವತಿ ಬಿಲ್ಗಳಲ್ಲಿ ದರ ವ್ಯತ್ಯಾಸ ಹಾಗೂ ಇತರೆ ನ್ಯೂನತೆಗಳು ಕಂಡುಬಂದಿವೆ. ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚು ಹಣವನ್ನು ಪಾವತಿಸಲಾಗಿದೆ. ಆರ್ಟಿಪಿಸಿಆರ್ನಲ್ಲಿಯೇ ಅತಿಹೆಚ್ಚು ಅಕ್ರಮಗಳು ನಡೆದಿರುವುದು ಬಿಬಿಎಂಪಿಯ ಮುಖ್ಯ ಲೆಕ್ಕಪರಿಶೋಧಕರ 2021–22ನೇ ಸಾಲಿನ ವರದಿಯಲ್ಲಿ ಬಹಿರಂಗವಾಗಿದೆ.

ಕೇಂದ್ರ ವಲಯದ ಸಾರ್ವಜನಿಕ ಆರೋಗ್ಯದ ಮುಖ್ಯ ಆರೋಗ್ಯಾಧಿಕಾರಿ ಆರ್ಟಿಪಿಸಿಆರ್ ಪರೀಕ್ಷೆಗಳಿಗೆ ಸರ್ಕಾರದ ನಿಗದಿತ ವೆಚ್ಚಕ್ಕಿಂತ 15 ಡಿಸಿ ಬಿಲ್ಗಳಲ್ಲಿ ₹57.23 ಲಕ್ಷ ಪಾವತಿಸಿದ್ದಾರೆ. ಕೋವಿಡ್ ಕೇರ್ ಸೆಂಟರ್ಗಳಲ್ಲಿನ ವೈದ್ಯಕೀಯ ಸಿಬ್ಬಂದಿಗೆ ಗರಿಷ್ಠ ದಿನಕ್ಕಿಂತ ಹೆಚ್ಚು ವೆಚ್ಚ ಭರಿಸಲಾಗಿದೆ. ಜೊತೆಗೆ ಆರ್ಟಿಪಿಸಿಆರ್ ಪರೀಕ್ಷೆಗೆ ಮಾನವ ಸಂಪನ್ಮೂಲ ಒದಗಿಸಿರುವುದಕ್ಕೆ ₹8.59 ಕೋಟಿ ಕಿದ್ವಾಯಿ ಸಂಸ್ಥೆಯಿಂದ ಪಾಲಿಕೆಗೆ ಪಾವತಿಯಾಗಿಲ್ಲ. ಮಾಲಿಕ್ಯುಲಾರ್ ಸಲ್ಯೂಷನ್ ಸಂಸ್ಥೆಗೂ ₹2.71 ಕೋಟಿ ಹೆಚ್ಚಾಗಿ ನೀಡಲಾಗಿದೆ.

141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗಂಟಲಿನ ದ್ರವ ಪರೀಕ್ಷೆಗಳನ್ನು ಯುರೊಫಿನ್ ಮತ್ತು ಹೈಬ್ರಿನೊಮಿಕ್ಸ್ ಸಂಸ್ಥೆಗಳು ನಡೆಸಿದ್ದು, ಅವರಿಗೆ ಪಾವತಿ ಮಾಡಬೇಕಿದ್ದಕ್ಕಿಂತ ಹೆಚ್ಚಾಗಿ ₹3.68 ಲಕ್ಷವನ್ನು ಕೇಂದ್ರ ವಲಯದ ಸಾರ್ವಜನಿಕ ಆರೋಗ್ಯದ ಮುಖ್ಯ ಆರೋಗ್ಯಾಧಿಕಾರಿ ವತಿಯಿಂದ ಪಾವತಿಸಲಾಗಿದೆ. ಆಂಬುಲೆನ್ಸ್ಗಳನ್ನು ಖಾಸಗಿ ಸಂಸ್ಥೆಗಳಿಂದ ನಿಯೋಜಿಸಿಕೊಳ್ಳಲಾಗಿದ್ದು, ಅವುಗಳ ಸಂಖ್ಯೆ ಹಾಗೂ ಪಾವತಿಯಲ್ಲಿ ₹24.70 ಲಕ್ಷದಷ್ಟು ಆಕ್ಷೇಪಣೆ ವ್ಯಕ್ತವಾಗಿದ್ದು, ವಸೂಲಿಗೆ ಸೂಚಿಸಲಾಗಿದೆ.

ಆರ್ಟಿಪಿಸಿಆರ್ ಪರೀಕ್ಷೆ ನಡೆಸಲು ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಕಾರ್ಯಕ್ಕೆ ನ್ಯೂಬರ್ಗ್ ಆನಂದ್ ರೆಫೆರಲ್ ಆಸ್ಪತ್ರೆಗೆ ಹೆಚ್ಚುವರಿಯಾಗಿ ₹10.23 ಕೋಟಿಯನ್ನು ಮುಖ್ಯ ಆರೋಗ್ಯಾಧಿಕಾರಿಯಿಂದ ಪಾವತಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ, ಆಯುಕ್ತರ ಸುತ್ತೋಲೆಯನ್ನು ಉಲ್ಲಂಘಿಸಿ ಮೆಡಿಕಲ್ ಡಯಾಗ್ನಸಿಸ್ ಸೆಂಟರ್ನಲ್ಲಿ ನಿತ್ಯ 5500ಕ್ಕಿಂತ ಹೆಚ್ಚುವರಿ ಪರೀಕ್ಷೆಗಳನ್ನು ನಡೆಸಿ, ₹63.65 ಲಕ್ಷವನ್ನು ಅಧಿಕವಾಗಿ ಪಾವತಿಸಲಾಗಿದೆ.

ಕೋವಿಡ್–19ರ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳ ಸಂಖ್ಯೆಗಳನ್ನು ನಮೂದಿಸದೇ ₹3.97 ಕೋಟಿಯನ್ನು ನ್ಯೂಬರ್ಗ್ ಆನಂದ್ ರೆಫೆರಲ್ ಆಸ್ಪತ್ರೆಗೆ ಪಾವತಿಸಲಾಗಿದೆ.

ಬಿಬಿಎಂಪಿ ರೆಫೆರಲ್ ಆಸ್ಪತ್ರೆ ಮತ್ತು ಮೆಟರ್ನಿಟಿ ಹೋಮ್ಗಳಿಗೆ ಗ್ಯಾಸ್ ಪೈಪ್ ಲೈನ್ ಸಿಸ್ಟಮ್ ಅಳವಡಿಕೆ ನಂತರ ವಾರ್ಷಿಕ ನಿರ್ವಹಣೆಯಲ್ಲಿ ₹2.53 ಕೋಟಿಯಷ್ಟು ಅಕ್ರಮವಾಗಿದೆ. 14 ಹೆರಿಗೆ ಆಸ್ಪತ್ರೆಗಳಿಗೆ ಬೆನಕ ಮೆಡಿಟೆಕ್ ಗ್ಯಾಸ್ ಪೈಪ್ಲೈನ್ ಅಳವಡಿಸಿರುವುದಕ್ಕೆ ಪೂರಕ ದಾಖಲೆಗಳಿಲ್ಲ.

ಯಲಹಂಕ ವಿಭಾಗದ ಆರೋಗ್ಯ ವೈದ್ಯಾಧಿಕಾರಿಯವರು ಸೊಳ್ಳೆ ನಿಯಂತ್ರಣ ಔಷಧ ಸಿಂಪಡಣೆ ಕಾರ್ಯದಲ್ಲಿ ಗುತ್ತಿಗೆದಾರರು ಖಾಲಿ ಬಿಲ್ಲಿನ ಮೇಲೆ ಸಹಿ ಮಾಡಿ ನೀಡಿದ್ದಾರೆ. ಈ ಬಿಲ್ಲುಗಳನ್ನು ಆರೋಗ್ಯ ಅಧಿಕಾರಿಗಳು ಪರಿಶೀಲಿಸದೆ ₹.181 ಕೋಟಿ ಬಿಡುಗಡೆ ಮಾಡಿದ್ದಾರೆ.

ಆರೋಗ್ಯ ವಿಭಾಗದಲ್ಲಿನ ಮುಖ್ಯ ಆಕ್ಷೇಪಣೆಗಳು

* ಗೋವಿಂದರಾಜನಗರ ಚಂದ್ರಾಲೇಔಟ್ ವಿಭಾಗದ ಆರೋಗ್ಯ ವೈದ್ಯಾಧಿಕಾರಿ ಕಚೇರಿಯಲ್ಲಿ ಪೆಟ್ರೋಲ್ ಚಾಲಿತ ಹ್ಯಾಂಡ್ ಪಂಪ್ ಮೂಲಕ ಔಷಧ ಸಿಂಪಡಿಸಿರುವ ಬಿಲ್ಗಳು ತಾಳೆಯಾಗುತ್ತಿಲ್ಲ * ಮಹಾಲಕ್ಷಿಪುರಂ ಆರೋಗ್ಯ ವೈದ್ಯಾಧಿಕಾರಿ ಕಚೇರಿಯಲ್ಲಿ ಏಕರೂಪ ದರ ನಿಗದಿ ಆದೇಶ ಉಲ್ಲಂಘಿಸಿ ಔಷಧ ಮತ್ತು ಸಾಮಗ್ರಿಗಳನ್ನು ಖರೀದಿಸಲಾಗಿದೆ. ಸೋಂಕಿತರು ಮತ್ತು ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳಿಗೆ ಆಹಾರ ಸರಬರಾಜು ಮಾಡಲು ₹16.89 ಲಕ್ಷ ಪಾವತಿಸಿದ್ದು ಪೂರೈಸಿದ ದಾಖಲೆಗಳಿಲ್ಲ. * ಪುಲಕೇಶಿನಗರ ಮತ್ತು ಸರ್ವಜ್ಞನಗರ ವಿಭಾಗದ ಆರೋಗ್ಯ ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಸೊಳ್ಳೆ ನಿಯಂತ್ರಣದ ಕೆಲಸ ನಿರ್ವಹಿಸದ ದಿನಗಳಿಗೂ ಆಟೊಗಳ ಮೈಕಿಂಗ್ ಬಾಡಿಗೆ ಪೆಟ್ರೋಲ್ಗೆ ₹4.99 ಲಕ್ಷ ಭರಿಸಲಾಗಿದೆ. * ಶಾಂತಿನಗರ ವಿಭಾಗದ ಆರೋಗ್ಯ ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಮಾನವ ಸಂಪನ್ಮೂಲ ಸೇವೆ ಒದಗಿಸಿದ ಫ್ಯೂಚರ್ ಪ್ಲಾನೆಟ್ (ಒಪಿಸಿ) ಸಂಸ್ಥೆಯಿಂದ ಅಧಿಕೃತ ಬಿಲ್ ಪಡೆಯದೇ ₹47.23 ಲಕ್ಷ ಪಾವತಿಸಲಾಗಿದೆ. * ಕೇಂದ್ರ ವಲಯ ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್)ಯವರು ಆಸ್ಪತ್ರೆಗಳಿಗೆ ಭದ್ರತೆ ಸೇವೆ ಒದಗಿಸಿರುವ ಗುತ್ತಿಗೆದಾರರಾದ ಶ್ರೀನಿವಾಸ ಸೆಕ್ಯೂರಿಟಿ ಸರ್ವೀಸಸ್ಗೆ ₹1 ಕೋಟಿ ಪಾವತಿಸಿದ್ದು ಸೇವೆ ನೀಡಿರುವ ಬಗ್ಗೆ ದಾಖಲೆಗಳಿಲ್ಲ.

ಕೋವಿಡ್ ಲೆಕ್ಕದಲ್ಲಿ ಅಕ್ರಮಗಳು l ₹ 22

.57 ಕೋಟಿ; ಆರ್ಟಿಪಿಸಿಆರ್ ನಿಗದಿತ ದರಕ್ಕಿಂತ ಹೆಚ್ಚು ಪಾವತಿ l ₹3.97 ಕೋಟಿ; ಕೋವಿಡ್ ಪರೀಕ್ಷೆ ಸಂಖ್ಯೆ ನಮೂದಿಸದೆ ಹಣ ಪಾವತಿ l ₹2.53 ಕೋಟಿ; ಆಕ್ಸಿಜನ್ ಸಿಲಿಂಡರ್ ಪೂರೈಕೆಯಲ್ಲಿ ಅಕ್ರಮ l ₹1.81 ಕೋಟಿ; ಸೊಳ್ಳೆ ನಿವಾರಕ ಔಷಧ ಸಿಂಪಡಣೆ l ₹63.65 ಲಕ್ಷ; ಆಯುಕ್ತರ ಆದೇಶಕ್ಕೆ ವಿರುದ್ಧವಾಗಿ ಹೆಚ್ಚವರಿ ಪರೀಕ್ಷೆಗೆ ಪಾವತಿ l ₹24.70 ಲಕ್ಷ; ಆಂಬುಲೆನ್ಸ್ ನಿಯೋಜನೆಗೆ ಲೆಕ್ಕವಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.