ಬೆಂಗಳೂರು: ಸಂವಿಧಾನವನ್ನು ಗೌರವಿ ಸುವುದು ಪ್ರತಿ ಭಾರತೀಯನ ಕರ್ತವ್ಯ. ಸಂವಿಧಾನ ಪೀಠಿಕೆಗೆ ‘ಜಾತ್ಯತೀತ’, 'ಸಮಾಜವಾದ' ಪದಗಳ ಸೇರ್ಪಡೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯು ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಮಂಗಳವಾರ ಸಂವಿಧಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ‘ಸಂವಿಧಾನ ಸೈನಿಕರ ಸಮಾವೇಶ’ದಲ್ಲಿ ಮಾತನಾಡಿದರು.

‘ಸಮಾಜವಾದ ಎನ್ನುವ ಪದ ಚುನಾವಣಾ ಸಂದರ್ಭಕ್ಕೆ ಬಳಕೆಯಾಗಬಾರದು. ಆಂತರ್ಯದ ಪದವಾಗಬೇಕು. ನಾಡಿನಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಅವುಗಳ ಬಗ್ಗೆ ಚರ್ಚೆಯಾಗಬೇಕು. ವಕೀಲಿಕೆಯ ಅಧಿಕಾರವನ್ನು ಬಳಸಿ ಸಂವಿಧಾನದ ಮೂಲಕ ಸಮಸ್ಯೆ ವಿರುದ್ಧ ಹೋರಾಡಿ ಶೋಷಣೆಗೆ ಲಗಾಮು ಹಾಕಬೇಕು’ ಎಂದು ಹೇಳಿದರು.

‘ಸಂವಿಧಾನದಲ್ಲಿ ಶಕ್ತಿಯುತವಾದ ಅನುಚ್ಛೇದಗಳಿವೆ. ಈ ಒಂದು ಸಂವಿಧಾನ, ಸೈನಿಕರ ಸಮಾವೇಶದಿಂದ ನಾಡಿನಲ್ಲಿ ಹೊಸ ಭರವಸೆ ಮೂಡಬೇಕು. ಇದನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕು. ಸಂವಿಧಾನವನ್ನು ಅಧ್ಯಯನ ಮಾಡಿ, ಅದರ ಮೂಲಕ ಹೆಚ್ಚಿನ ಶಕ್ತಿ ಗಳಿಸಬೇಕು’ ಎಂದು ಸಲಹೆ ನೀಡಿದರು.

ಸಹಾಯಕ ಪ್ರಾಧ್ಯಾಪಕಿ ರಾಧಿಕಾ ಕೇರಿಹೊಳ್ಳ ಸಂವಿಧಾನ ಪೀಠಿಕೆ ವಾಚಿಸಿದರು. ಸಂಸ್ಥೆ ನಿರ್ದೇಶಕ ಪ್ರೊ. ಸಿ.ಎಸ್.ಪಾಟೀಲ, ಪ್ರಾಂಶುಪಾಲರಾದ ಜ್ಯೋತಿ, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ರೇವಯ್ಯ ಒಡೆಯರ್, ಕಾನೂನು ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.