‘ಮನೆಯಲ್ಲಿ ಇಲ್ಲದಿದ್ದರೆ ಮಾಹಿತಿ ನೀಡಿ’
ರಾತ್ರಿ ಸಮಯದಲ್ಲಿ ಬೀಟ್ ಹೆಚ್ಚಳಕ್ಕೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ನಾಗರಿಕರು ಎರಡು ಮೂರು ದಿನ ಮನೆ ಬಿಟ್ಟು ಹೊರಗೆ ಹೋಗಬೇಕಾದರೆ ಸಮೀಪದ ಠಾಣೆಗೆ ಬಂದು ಮಾಹಿತಿ ನೀಡಬೇಕು. ಇದರಿಂದ ಖಾಲಿ ಮನೆಗಳ ಸುತ್ತ ಪೊಲೀಸರು ಗಸ್ತು ತಿರುಗುವುದರಿಂದ ಕಳ್ಳತನ ಪ್ರಕರಣಗಳು ಕಡಿಮೆಯಾಗುತ್ತವೆ. ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಗೆ ನಾಗರಿಕರು ಆಸಕ್ತಿ ತೋರಿಸಬೇಕು. ಇದರಿಂದ ಕಳವು ಪ್ರಕರಣಗಳು ನಡೆಯುವುದು ಕಡಿಮೆಯಾಗುವುದರ ಜತೆಗೆ ಕಳ್ಳತನ ನಡೆದರೆ ಕಳ್ಳರನ್ನು ಹಿಡಿಯಲು ಸುಲಭವಾಗುತ್ತದೆ. ಪೊಲೀಸ್ ಇಲಾಖೆ ಕಳ್ಳರ ಪತ್ತೆಗೆ ಕಾರ್ಯಪ್ರವೃತ್ತವಾಗಿದೆ ಎಂದು ಡಿವೈಎಸ್ಪಿ ಧರ್ಮೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.