ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಹಾಲಿನನಾಗರಾಜು ಸೇರಿದಂತೆ ಇತರರು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಶಾಸಕ ಎಚ್.ಎಂ.ಗಣೇ್‌ಶ್ ಪ್ರಸಾದ್ ಜೊತೆಗಿದ್ದರು
ಮಿಶ್ರ ಬೆಳೆ ಪದ್ಧತಿ ಅನುಸರಿಸಲು ಸಲಹೆ ₹6 ಕೋಟಿ ವೆಚ್ಚದಲ್ಲಿ ಕಾಮಗಾರಿ ಮೂರು ತಿಂಗಳಲ್ಲಿ ಅನುದಾನ
ಎಪಿಎಂಸಿಗೆ ಭೇಟಿ ಪರಿಶೀಲನೆ
ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಶೇ 10ರಷ್ಟು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ರೈತರು ದೂರು ಬಂದಿದ್ದರಿದ ಸಚಿವರು ಗುಂಡ್ಲುಪೇಟೆಯ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಶೇ 8ರಿಂದ 10ರಷ್ಟು ಕಮಿಷನ್ ತೆಗೆದುಕೊಳ್ಳುತ್ತಿದ್ದ ವರ್ತಕರೊಬ್ಬರ ಪರವಾನಗಿಯನ್ನು ಈಗಾಗಲೇ ಅಮಾನತು ಗೊಳಿಸಲಾಗಿದೆ. ವರ್ತಕರು ರೈತರ ಶೋಷಣೆ ಮಾಡದೆ ಕಾನೂನು ಬದ್ದವಾಗಿ ಹಣ ತೆಗೆದುಕೊಳ್ಳಬೇಕು. ಶೇ 10ರಷ್ಟು ತೆಗೆದುಕೊಳ್ಳುವುದು ಕಂಡು ಬಂದರೆ ಅಂತಹ ವರ್ತಕರ ಪರವಾನಹಿಯನ್ನು ಅಮಾನತು ಮಾಡಲಾಗುವುದು’ ಎಂದು ಎಚ್ಚರಿಸಿದರು. ರೈತ ಸಂಘಟನೆಗಳಿಂದ ಮನವಿ: ಗುಂಡ್ಲುಪೇಟೆಯಲ್ಲಿ ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಸಂಘ ಮತ್ತು ಹಸಿರುಸೇನೆಯ (ವಾಸುದೇವ ಮೇಟಿ ಬಣ) ಪದಾಧಿಕಾರಿಗಳು ಶಿವಾನಂದ ಪಾಟೀಲ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.