ಕೊಳ್ಳೇಗಾಲ: ಸ್ಥಳೀಯ ಆಡಳಿತ ಬೀದಿದೀಪಗಳ ನಿರ್ವಹಣೆ ಮಾಡದ ಪರಿಣಾಮ ನಗರ ಕತ್ತಲಲ್ಲಿ ಮುಳುಗಿದೆ. ನಗರದ ಅಲ್ಲಲ್ಲಿ ಬೀದಿದೀಪಗಳು ಬೆಳಗದೆ ಪ್ರಮುಖ ರಸ್ತೆ ಹಾಗೂ ಹೆದ್ದಾರಿಗಳಲ್ಲಿ ಗಾಢ ಕತ್ತಲು ಕವಿದಿದೆ.

ರಾತ್ರಿಯ ಹೊತ್ತು ಬೀದಿದೀಪಗಳು ಉರಿಯದೆ ಸಾರ್ವಜನಿಕರ ಸಂಚಾರ ದುಸ್ತರವಾಗಿದೆ. ಮಹಿಳೆಯರು, ಮಕ್ಕಳು ಕತ್ತಲಲ್ಲಿ ಭೀತಿಯಲ್ಲಿ ಓಡಾಡಬೇಕಾಗಿದೆ. ರಸ್ತೆಯ ಮೇಲೆ ಅಲ್ಲಲ್ಲಿ ಬಿದ್ದಿರುವ ಹೊಂಡಗುಂಡಿಗಳು ಕಾಣದೆ ನಿತ್ಯ ವಾಹನ ಸವಾರರು, ಪಾದಚಾರಿಗಳು ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ.

ನಗರದ ಆಯಕಟ್ಟಿನ ಜಾಗಗಳಲ್ಲಿಯೇ ಬೀದಿದೀಪಗಳು ಕೆಟ್ಟುನಿಂತಿರುವುದು ನಗರಸಭೆಯ ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಸಾರ್ವಜನಿಕರು ಟೀಕಿಸುತ್ತಿದ್ದಾರೆ. ಹಾಳಾದ ಬೀದಿದೀಪಗಳನ್ನು ದುರಸ್ತಿಪಡಿಸುವಂತೆ ಸಾರ್ವಜನಿಕರು ಹಾಗೂ ಬಡಾವಣೆಯ ನಿವಾಸಿಗಳು ನಗರಸಭೆ ಅಧಿಕಾರಿಗಳಿಗೆ, ವಾರ್ಡ್ ಕೌನ್ಸಿಲರ್ಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಗರಸಭೆಗೆ ‘ಗ್ರಹಣ’ ಹಿಡಿದಿದೆ ಎಂದು ದೂರುತ್ತಾರೆ ನಾಗರಿಕ ತರುಣ್.

ಎಲ್ಲೆಲ್ಲಿ ಕತ್ತಲು: ನಗರದ ನ್ಯಾಯಾಲಯದ ರಸ್ತೆ, ಜೆಎಸ್ಎಸ್ ಕಾಲೇಜು ರಸ್ತೆ, ಆರ್ಸಿಎಂ ಶಾಲೆ ಸಮೀಪ, ಶಿವಕುಮಾರ ಸ್ವಾಮೀಜಿ ಬಡಾವಣೆ, ಮಹದೇಶ್ವರ ಕಾಲೇಜು ಸಮೀಪ, ಜಿಪಿ ಮಲ್ಲಪ್ಪ ಪುರಂ, ಆರ್ಎಮ್ ಕಲ್ಯಾಣ ಮಂಟಪ ರಸ್ತೆ, ಹೀಗೆ ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿದೀಪಗಳ ಸಮಸ್ಯೆ ಇದೆ. ಈ ರಸ್ತೆಗಳಲ್ಲಿ ಸಂಚರಿಸುವರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ.

ಕೆಲವು ರಸ್ತೆಗಳಲ್ಲಿ ಬೀದಿದೀಪಗಳಿದ್ದೂ ಇಲ್ಲದಂತ ಪರಿಸ್ಥಿತಿ ಇದೆ. ಹೆಸರಿಗೆ ಬೀದಿದೀಪಗಳು ಉರಿಯುವಂತೆ ಕಂಡರೂ ಪ್ರಕಾಶಮಾನವಾದ ಬೆಳಕು ಹೊರಸೂಸುವುದಿಲ್ಲ. ದೀಪಗಳ ಬೆಳಕು ಕಂಬದ ಬುಡಕ್ಕೂ ತಲುಪುವುದಿಲ್ಲ.

ಕೆಲವು ಕಡೆ ಬೀದಿದೀಪಗಳ ಸುತ್ತಲೂ ಗಿಡಗಂಟಿಗಳು ಬೆಳೆದಿದ್ದು ಬೆಳಕು ರಸ್ತೆಗೆ ಚೆಲ್ಲುತ್ತಿಲ್ಲ. ನಗರದ ಹೊಸ ಬಡಾವಣೆಗಳಲ್ಲಿ ಬೀದಿ ದೀಪಗಳನ್ನೇ ಅಳವಡಿಸದ ಪರಿಣಾಮ ಅಲ್ಲಿನ ನಿವಾಸಿಗಳು ರಾತ್ರಿ ಸಂಚರಿಸುವಾಗ ಟಾರ್ಚ್ ಅಥವಾ ಮೊಬೈಲ್ ಲೈಟ್ ಬಳಸಬೇಕಾದ ಅನಿವಾರ್ಯತೆ ಇದೆ.

ಮಹದೇಶ್ವರ ಕಾಲೇಜು ಸಮೀಪದ ರಸ್ತೆಯಲ್ಲಿ ಹಾವು ಸೇರಿದಂತೆ ವಿಷಜಂತುಗಳ ಕಾಟ ಹೆಚ್ಚಾಗಿದೆ. ಜೊತೆಗೆ ಹಂದಿ ಹಾಗೂ ಬೀದಿನಾಯಿಗಳ ಕಾಟವೂ ಮಿತಿಮೀರಿದೆ. ಈ ರಸ್ತೆಯಲ್ಲಿ ಬೀದಿದೀಪಗಳು ಉರಿಯದೆ ಸಾರ್ವಜನಿಕರು ಮೊಬೈಲ್ ಟಾರ್ಚ್ ಹಿಡಿದುಕೊಂಡು ಹೋಗುವಾಗ ಹಲವು ಬಾರಿ ನಾಯಿಗಳು ದಾಳಿ ನಡೆಸಿವೆ. ವಿಷ ಜಂತುಗಳು ರಸ್ತೆಗೆ ಅಡ್ಡಲಾಗಿ ಬಂದಿವೆ.

ಕಳೆದ ವಾರ ಮೊಬೈಲ್ ಟಾರ್ಚ್ ಹಿಡಿದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಬೀದಿ ನಾಯಿಗಳು ದಾಳಿಗೆ ಮುಂದಾಗಿದ್ದು ಮಹಿಳೆ ಅವರಸದಲ್ಲಿ ಚರಂಡಿಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಬೈಕ್ ಸವಾರರು ಹೋಗುವಾಗ ಚಕ್ರಕ್ಕೆ ಅಡ್ಡಲಾಗಿ ಹಲವು ಬಾರಿ ವಿಷಜಂತುಗಳು ಸಿಲುಕಿವೆ ಎಂದು ಶಿವಕುಮಾರ ಸ್ವಾಮೀಜಿ ಬಡಾವಣೆಯ ಮಹದೇವಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕತ್ತಲಲ್ಲಿ ಮಾದಪ್ಪನ ಭಕ್ತರ ಕಾಲ್ನಡಿಗೆ: ರಾಜ್ಯದ ನಾನಾ ಕಡೆಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಮಂದಿ ಕಾಲ್ನಡಿಗೆಯಲ್ಲಿ ಕೊಳ್ಳೇಗಾಲ ನಗರ ಮಾರ್ಗವಾಗಿ ಬರುತ್ತಾರೆ. ನೂರಾರು ಕಿ.ಮೀ ಕಾಲ್ನಡಿಗೆಯಲ್ಲಿ ನಡೆಯುವ ಮಾದಪ್ಪನ ಭಕ್ತರು ಕೊಳ್ಳೇಗಾಲ ನಗರದಲ್ಲಿ ಬೀದಿದೀಪಗಳಿಲ್ಲದ ರಸ್ತೆಯೊಳಗೆ ಕತ್ತಲಲ್ಲಿ ಮೊಬೈಲ್ ಬೆಳಕಿನಲ್ಲಿ ನಡೆಯಬೇಕಾದ ದುಸ್ಥಿತಿ ಎದುರಾಗಿದೆ.

ನಗರದ ಗ್ರಾಮಾಂತರ ಠಾಣೆ ಮುಂಭಾಗದ ರಸ್ತೆಯಿಂದ ಸಿದ್ದಗನಪುರ ಗ್ರಾಮ ಹೋಗುವ ರಸ್ತೆ ಕತ್ತಲಿನಿಂದ ಕೂಡಿರುವುದರಿಂದ ಕಾಲ್ನಡಿಗೆಯಲ್ಲಿ ಬರುವ ಭಕ್ತರು ನ್ಯಾಯಾಲಯದ ಆವರಣ, ಬಸ್ ನಿಲ್ದಾಣ ಸೇರಿದಂತೆ ಅಂಗಡಿ ಮುಂಗಟ್ಟುಗಳ ಮುಂದೆ ಮಲಗಿ ಹಗಲಿನಲ್ಲಿ ಕ್ಷೇತ್ರದತ್ತ ತೆರಳುತ್ತಾರೆ. ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ಬೀದಿ ದೀಪಗಳನ್ನು ದುರಸ್ತಿಪಡಿಸಬೇಕು ಎಂದು ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದ ನಿವಾಸಿ ಆನಂದ್ ಒತ್ತಾಯಿಸಿದರು.

ಮುಖ್ಯ ರಸ್ತೆ ಕಗ್ಗತ್ತಲು

ಮುಡಿಗುಂಡದ ರಾಷ್ಟ್ರೀಯ ಹೆದ್ದಾರಿ ಆರಂಭದಿಂದ ಅಚ್ಕಲ್ ಮುಖ್ಯ ರಸ್ತೆಯವರಿಗೆ ಬೀದಿ ದೀಪಗಳನ್ನು ಅಳವಡಿಸಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಹೊಸ ಹಣಗಲ್ಲಿ ಬಡಾವಣೆಯ ರಾಷ್ಟ್ರೀಯ ಹೆದ್ದಾರಿ ಮುಖ್ಯ ರಸ್ತೆಯಲ್ಲೂ ಬೀದಿ ದೀಪವಿಲ್ಲ. ನಗರಕ್ಕೆ ಬರುವ ವಾಹನ ಸವಾರರಿಗೆ ಕತ್ತಲಿನ ಸ್ವಾಗತ ಸಿಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೀದಿ ದೀಪಗಳ ನಿರ್ವಹಣೆ ಕೊರತೆಯಿಂದ ಅಪಘಾತಗಳು ಸಂಭವಿಸಿವೆ. ಸವಾರರಿಗೆ ರಸ್ತೆ ಕಾಣದೆ ರಸ್ತೆ ಬದಿಯ ಚರಂಡಿ ಹಾಗೂ ವಿಭಜಕಗಳಿಗೆ ವಾಹನಗಳನ್ನು ಗುದ್ದಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ ಎಂದು ಹೊಸ ಅಣ್ಣಗಳ್ಳಿ ಬಡಾವಣೆಯ ನಾಗರಾಜು ಒತ್ತಾಯಿಸುತ್ತಾರೆ.

ಅಪರಾಧ ಚಟುವಟಿಕೆ ಹೆಚ್ಚಳ

ಬೀದಿದೀಪಗಳ ಸಮಸ್ಯೆ ಅಪರಾಧ ಚಟುವಟಿಕೆಗಳ ಹೆಚ್ಚಳಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಬೀದಿದೀಪಗಳ ಸಮಸ್ಯೆ ಇರುವ ಹೊಸ ಬಡಾವಣೆಗಳನ್ನು ಗುರಿಯಾಗಿಸಿಕೊಂಡು ಮನೆಗಳಲ್ಲಿ ಕಳವು ಮಾಡಲಾಗುತ್ತಿದೆ.

ಎಲ್ಲೆಲ್ಲಿ ಬೀದಿದೀಪಗಳ ಸಮಸ್ಯೆ ಇದೆ ಎಂಬುದನ್ನು ಪರಿಶೀಲಿಸಿ ತಕ್ಷಣ ಬೀದಿ ದೀಪಗಳನ್ನು ಹಾಕಿಸಲಾಗುವುದು
-ರೇಖಾ, ನಗರಸಭೆ ಅಧ್ಯಕ್ಷೆ

ಬೀದಿದೀಪಗಳಿಲ್ಲದೆ ಪ್ರತಿನಿತ್ಯ ಕತ್ತಲಿನಲ್ಲಿ ಸಂಚರಿಸಬೇಕಾಗಿದೆ. ನಗರಸಭೆಗೆ ಸಮಸ್ಯೆ ಹೇಳಿಕೊಂಡರೂ ಪ್ರಯೋಜನವಾಗಿಲ್ಲ ಶಾಸಕರು ಸಮಸ್ಯೆ ಬಗೆಹರಿಸಬೇಕು.
-ನಿರಂಜನ್, ಶಿವಕುಮಾರ ಸ್ವಾಮೀಜಿ ಬಡಾವಣೆ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.