ಗುಂಡ್ಲುಪೇಟೆ: ರಂಗಭೂಮಿಯಲ್ಲಿ ಬಣ್ಣಕ್ಕೆ ಹೆಚ್ಚು ಮಹತ್ವ. ರಂಗದ ಮೇಲೆ ಕಲಾವಿದರು ಮಿಂಚಲು ಅವರ ಸಂಭಾಷಣೆಯೊಂದಿಗೆ ಮುಖಕ್ಕೆ ಹಚ್ಚಿರುವ ಬಣ್ಣ, ವೇಷಭೂಷಣವೂ ಮುಖ್ಯ. ಹೀಗಾಗಿ, ಪ್ರಸಾಧನ ಅಥವಾ ಮೇಕಪ್‌ಗೆ ಕಲಾವಿದರು ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ.

ಬಹುಪಾಲು ಸಂದರ್ಭದಲ್ಲಿ ಪ್ರಸಾಧನ ಕಲಾವಿದರು ಮುನ್ನೆಲೆಗೆ ಬರುವುದಿಲ್ಲ. ತೆರೆಮರೆಯಲ್ಲೇ ಇದ್ದುಕೊಂಡು ನಾಟಕಗಳು ಯಶಸ್ಸಿಯಾಗಲು ಪರೋಕ್ಷವಾಗಿ ಕಾರಣರಾಗುತ್ತಾರೆ. ಪಟ್ಟಣದಲ್ಲೊಬ್ಬ ಅಂತಹ ಮೇಕಪ್ ಕಲಾವಿದ ಇದ್ದಾರೆ. ತಮ್ಮ ಮರಕೆಲಸದ ವೃತ್ತಿಯ ನಡುವೆ ಹವ್ಯಾಸಿಯಾಗಿ ಕಲಾವಿದರಿಗೆ ಬಣ್ಣ ಹಚ್ಚುವ ಕೆಲಸವನ್ನೂ ಮಾಡುತ್ತಿದ್ದಾರೆ.

ಗುಂಡ್ಲುಪೇಟೆ ಪಟ್ಟಣದ ವಿಶ್ವನಾಥ್ ಹಾಗೂ ಜಿ.ಆರ್ ಮಂಜುಳಾ ದಂಪತಿಯ ಮಗ ಕಿರಣ್ ಕುಮಾರ್ ಎರಡು ದಶಕಗಳಿಂದ ಮೇಕಪ್ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.

ಬಿ.ಕಾಂ ಪದವೀದರರಾಗಿರುವ ಕಿರಣ್ ಅವರಿಗೆ ವಿದ್ಯಾರ್ಥಿಯಾಗಿದ್ದಾಗಲೇ ನಾಟಕ, ನೃತ್ಯ, ಕಂಸಾಳೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ದಿನ ಕಳೆದಂತೆ ಬಣ್ಣ ಹಚ್ವುವ ಕೆಲಸದ ಮೇಲೆ ಆಕರ್ಷಣೆ ಹೆಚ್ಚಾಗಿ ಕಲಾ ಕ್ಷೇತ್ರದ ಜೊತೆಗೆ ನಂಟು ಬೆಳೆಸಿಕೊಂಡರು.

‘ಮೈಸೂರಿನ ರಾಜೇಶ್ವರಿ ವಸ್ತ್ರಾಲಂಕಾರದ ಕಲಾವಿದ ರಾಮಚಂದ್ರ ಎಂಬುವವರು ಶಾಲಾ ದಿನಗಳಲ್ಲಿ ಅಭಿನಯಿಸುತ್ತಿದ್ದ ಸಂದರ್ಭದಲ್ಲಿ ಮೇಕಪ್ ಮಾಡಲು ಬರುತ್ತಿದ್ದರು. ಅವರಿಂದ ಪ್ರೇರಣೆಗೊಂಡು, ಅವರು ಬಣ್ಣ ಹಚ್ಚುವುದನ್ನು ನೋಡುತ್ತಾ ಕಲಿತೆ. ಬಳಿಕ ಅದನ್ನೇ ಹವ್ಯಾಸವಾಗಿ ರೂಡಿಸಿಕೊಂಡು ಸ್ವತಃ ಮೇಕಪ್ ಮಾಡುವುದನ್ನು ಕಲಿಯಲಾರಂಬಿಸಿದೆ’ ಎಂದು ಕಿರಣ್ ಕುಮಾರ್ ಹೇಳಿದರು.

‘ಈ ವೃತ್ತಿಯಿಂದ ಹೆಚ್ಚು ಆದಾಯ ಸಿಗುತ್ತಿರಲಿಲ್ಲ. ಆದರೂ ಹವ್ಯಾಸವನ್ನು ಮುಂದುವರಿಸಿದ್ದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಲಾವಿದ ರವಿ ಅವರ ಪರಿಚಯವಾಯಿತು. ಅವರ ಬಳಿ ಒಂದೂವರೆ ವರ್ಷ ಕಾಲ ಮೇಕಪ್ ಮಾಡುವುದನ್ನು ಕಲಿತೆ. ಈಗ ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಕಲಾವಿದರಿಗೆ ಬಣ್ಣ ಹಚ್ಚಿದ್ದೇನೆ’ ಎಂದು ವಿವರಿಸಿದರು.

ಈಗಲೂ ತಾಲ್ಲೂಕಿನಲ್ಲಿ ಶಾಲಾ ಕಾಲೇಜುಗಳಲ್ಲಿ ನಾಟಕ, ನೃತ್ಯಗಳಲ್ಲಿ ಅಭಿನಯಿಸುವವರಿಗೆ ವಸ್ತ್ರಾಲಂಕಾರ ಹಾಗೂ ಪಾತ್ರ ಬಣ್ಣ ಹಚ್ಚುತ್ತಾರೆ.

‘ಪ್ರತಿ ವರ್ಷ ಫೆಬ್ರುವರಿ ತಿಂಗಳಿಂದ ಮೇವರೆಗೆ ರಾಜ್ಯದಾದ್ಯಂತ ಹೆಚ್ಚು ನಾಟಕ ಪ್ರದರ್ಶನಗಳು ನಡೆಯುತ್ತವೆ. ಈ ಅವಧಿಯಲ್ಲಿ ಬಣ್ಣ ಹಚ್ಚುವ ಕೆಲಸ ಇರುತ್ತದೆ. ಉಳಿದಂತೆ ಜೀವನಕ್ಕೆ ಮರ ಗೆಲಸ ಮತ್ತು ಕಟ್ಟಡದ ಅಲಂಕಾರ ಕೆಲಸ ಮಾಡುತ್ತೇನೆ’ ಎಂದು ಕಿರಣ್‌ಕುಮಾರ್ ಹೇಳಿದರು.

‘ಪ್ರೋತ್ಸಾಹ ಬೇಕಿದೆ’

‘ವರ್ಷಪೂರ್ತಿ ನಾಟಕಗಳು ಇರುವುದಿಲ್ಲ ಪರಿಶ್ರಮಕ್ಕೆ ತಕ್ಕ ಸಂಭಾವನೆ ದೊರೆಯುವುದಿಲ್ಲ ಊರಿನಿಂದ ಊರಿಗೆ ಅಲೆಮಾರಿ ರೀತಿ ಸುತ್ತಬೇಕು’ ಎಂದು ಈ ಕೆಲಸದ ಕಷ್ಟವನ್ನು ವಿವರಿಸುತ್ತಾರೆ ಕಿರಣ್‌ಕುಮಾರ್. ‘ನಾವು ಅಸಂಘಟಿತ ಕಾರ್ಮಿಕರ ವರ್ಗಕ್ಕೆ ಹಾಗೂ ಕಲಾವಿದರ ವರ್ಗಕ್ಕೆ ಸೇರುತ್ತೇವೆ. ಸರ್ಕಾರದಿಂದ ಪ್ರೋತ್ಸಾಹ ಧನವಾಗಲಿ ಸಹಾಯಧನವಾಗಲಿ ಸಿಗುವುದಿಲ್ಲ. ಸರ್ಕಾರಗಳು ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು. ಇಲ್ಲವಾದಲ್ಲಿ ಕಲೆಗಳು ಮುಂದುವರೆಯುದಿಲ್ಲ’ ಎಂದು ಹೇಳುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.