ಬಿಆರ್‌ಟಿ ಮಲೆ ಮಹದೇಶ್ವರ ವನ್ಯಧಾಮ ಬಂಡೀಪುರ ಕಾವೇರಿ ವನ್ಯಜೀವಿ ಧಾಮಗಳಲ್ಲಿ ಜೇನಿನ ಸವಿರುಚಿ ಮತ್ತು ಸ್ವಾದದಲ್ಲಿ ವ್ಯತ್ಯಾಸ ಇದೆ. ಈ ಭಾಗಗಳಲ್ಲಿ ದೊರೆಯುವ ವನ ವೈವಿಧ್ಯ ಮತ್ತು ಹೂ ಬಿಡುವ ಸಸ್ಯ ಪ್ರಭೇದಗಳಲ್ಲಿ ಇರುವ ಗುಣಗಳೇ ಕಾರಣ. ಜೇನು ಕೃಷಿ ಬಿಳಿಗಿರಿಬೆಟ್ಟದ 5 ಸಾವಿರ ಬುಡಕಟ್ಟು ಜನರಿಗೆ ಉದ್ಯೋಗ ನೀಡಿದೆ. ಜೇನು ಮಾರಾಟಕ್ಕೆ ಲ್ಯಾಂಪ್ಸ್ ಸೊಸೈಟಿ ನೆರವಾಗಿದೆ. ವಾರ್ಷಿಕ 16 ರಿಂದ 20 ಟನ್ ಹೆಜ್ಜೇನು ಸಂಗ್ರಹವಾಗುತ್ತದೆ. ಕೋಲು ಜೇನು 2 ಟನ್ ನೇರಳೆ ಕಹಿ ಜೇನು 3 ತುಡುವೆ 3 ಟನ್ ಹಾಗೂ ನೆಸರೆ ಕೇವಲ 10 ಕೆಜಿ ಮಾತ್ರ ಸಿಗುತ್ತದೆ. ಎಲ್ಲ ತರದ ಜೇನನ್ನು ಒಟ್ಟು ಮಾಡಿ ಮಾರಾಟ ಮಾಡಲಾಗುತ್ತದೆ. ಹಾಗಾಗಿ ಬಿಆರ್‌ಟಿ ಪರಿಸರದ ಜೇನು ರುಚಿ ಬಣ್ಣ ಮತ್ತು ಸ್ವಾದದಲ್ಲಿ ವಿಶೇಷ ಸವಿರುಚಿ ಇರುತ್ತದೆ’ ಎಂದು ಹೇಳುತ್ತಾರೆ ಲ್ಯಾಂಪ್ಸ್ ಸೊಸೈಟಿ ಸದಸ್ಯ ಮಾದೇಗೌಡ.