ಮಂಗಳೂರು: ರಕ್ಷಣಾ ಪಡೆಗಳ ಮುಖ್ಯಸ್ಥ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸಾವಿನ ಸಂಭ್ರಮಾಚರಣೆ ಮಾಡಿರುವ ಆರೋಪದಲ್ಲಿ ಮೂರು ಫೇಸ್ಬುಕ್ ಖಾತೆಗಳ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ವಸಂತಕುಮಾರ್ ಟಿ.ಕೆ, ಶ್ರೀನಿವಾಸ ಕಾರ್ಕಳ ಎನ್ನುವ ಫೇಸ್ಬುಕ್ ಖಾತೆ ಹಾಗೂ ಇನ್ನೊಂದು ಅಪರಿಚಿತ ಖಾತೆಯಲ್ಲಿ ಬಿಪಿನ್ ರಾವತ್ ಸಾವಿನ ಬಗ್ಗೆ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಬಗ್ಗೆ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಲಾಗಿತ್ತು. ಆ ಖಾತೆಗಳು ಯಾರದ್ದು, ಅವುಗಳ ಮೂಲ, ಅವು ಅಸಲಿ ಖಾತೆಗಳೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಸೇನಾನಿಗಳಿಗೆ ಅಂತಿಮ ನಮನ

‘ಈ ಬಗ್ಗೆ ಸುಶಾಂತ್ ಪೂಜಾರಿ ದೂರು ನೀಡಿದ್ದು, ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುತ್ತಿದೆ. ದೂರಿನಲ್ಲಿ ಆರೋಪಿಸಿರುವ ಫೇಸ್ಬುಕ್ ಖಾತೆದಾರರಲ್ಲಿ ಒಬ್ಬರು ಬೆಂಗಳೂರಿನವರು, ಮತ್ತೊಬ್ಬರು ಕಾರ್ಕಳದವರಾಗಿದ್ದು, ಇನ್ನೊಂದು ಖಾತೆ ಅಪರಿಚಿತವಾಗಿದೆ. ಸಂಬಂಧಪಟ್ಟವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.