ಹುಬ್ಬಳ್ಳಿ: ಇಲ್ಲಿನ ಭವಾನಿ ನಗರದ ಚಿನ್ಮಯ ಸೇವಾ ಸಮಿತಿ ಟ್ರಸ್ಟ್ ನ ಚಿನ್ಮಯ ವಿದ್ಯಾಲಯದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು ಪತ್ನಿ ಜ್ಯೋತಿ, ಪುತ್ರಿಯರಾದ ಅರ್ಪಿತಾ, ಅನುಷಾ ಅವರೊಂದಿಗೆ ಬಂದು ಮಾತದಾನ ಮಾಡಿದರು.

ನಂತರ ಮಾತನಾಡಿದ ಜೋಶಿ, ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಎಲ್ಲರೂ ಉತ್ಸಾಹದಿಂದ ಬಂದು ಮತದಾನ ಮಾಡಲು ಬರುತ್ತಿದ್ದಾರೆ ಎಂದರು.

ಜನರ ಉತ್ಸಾಹ ನೋಡಿದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರನೇ ಬಾರಿಗೆ ಬರುವುದು ನಿಶ್ಚಿತ. ಐದು ವರ್ಷ ದೇಶದ ಭವಿಷ್ಯವನ್ನು ಯಾರ ಕೈಗೆ ನೀಡಬೇಕು ಎಂದು ನಿರ್ಧರಿಸುವ ಚುನಾವಣೆ ಇದು. ಹೀಗಾಗಿ ಎಲ್ಲರೂ ತಪ್ಪದೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಎರಡನೇ ಹಂತದಲ್ಲಿ ಎಲ್ಲ ೧೪ ಸ್ಥಾನಗಳನ್ನು ಗೆಲ್ಲುತ್ತೇವೆ. ಪ್ರತಿ ಬಾರಿಯೂ ಹೆಚ್ಚಿನ ಅಂತರದಿಂದ ಗೆದ್ದಿದ್ದೇನೆ. ಈ ಬಾರಿಯೂ ಅಭೂತಪೂರ್ವ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿ ಚುನಾವಣೆಯಲ್ಲಿಯೂ ನನ್ನ ತೇಜೋವಧೆ ಮಾಡುತ್ತಾರೆ. ನನ್ನ ಸಾರ್ವಜನಿಕ ಬದುಕು ಶುದ್ಧವಾಗಿದೆ. ಯಾವುದೇ ಕಪ್ಪು ಚುಕ್ಕೆ ಇಲ್ಲ. ಎಲ್ಲವನ್ನೂ ಎದುರಿಸುದ್ದೇನೆ. ಜನ ಆಶೀರ್ವಾದ ಮಾಡಿದ್ದಾರೆ. ಈ ಬಾರಿಯೂ ಮಾಡುತ್ತಾರೆ. ಕಾಂಗ್ರೆಸ್ ನ ಸ್ಥಿತಿ ನೋಡಿ ಜನ ಮರುಕ ಪಡುತ್ತಿದ್ದಾರೆ ಎಂದರು.
.Lok Sabha Polls Karnataka LIVE | ಮತದಾನ ಅಂತ್ಯ– ಬಹುತೇಕ ಶಾಂತಿಯುತ.ಬೀದರ್ ಲೋಕಸಭಾ ಕ್ಷೇತ್ರ | ಮತದಾನದ ವಿಡಿಯೊ ಚಿತ್ರೀಕರಿಸಿದ ಭಗವಂತ ಖೂಬಾ ಅಭಿಮಾನಿ.ಈ ಬಾರಿ ಬೆಳಗಾವಿ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿ ನಿಶ್ಚಿತ: ಲಕ್ಷ್ಮಿ ಹೆಬ್ಬಾಳಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.