ಧಾರವಾಡ: ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ಬೆಳೆ ಖರೀದಿಗೆ ನೋಂದಣಿ ಗಡುವು ಮುಗಿಯುವ ಹಂತದಲ್ಲಿದೆ. ಜಿಲ್ಲೆಯಲ್ಲಿ ಈವರೆಗೆ (ಅಕ್ಟೋಬರ್ 18) ಉದ್ದು ಮಾರಾಟಕ್ಕೆ 34 ಹಾಗೂ ಸೋಯಾಬಿನ್ ಮಾರಾಟಕ್ಕೆ 834 ರೈತರು ನೋಂದಾಯಿಸಿದ್ದಾರೆ.

ಕೆಲ ದಿನಗಳಿಂದ ಮಳೆಯಾಗುತ್ತಿದೆ. ಬೆಳೆ ಸಂಸ್ಕರಣೆ ಮಾಡುವುದು, ಒಣಗಿಸುವುದು, ದಾಸ್ತಾನು ಮಾಡುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ. ರೈತರು ಒಕ್ಕಣೆ ಕಾರ್ಯದಲ್ಲಿ ತೊಡಗಿದ್ಧಾರೆ. ಹೀಗಾಗಿ, ಹಲವರಿಗೆ ನೋಂದಣಿ ಮಾಡಿಸಲು ಸಾಧ್ಯವಾಗಿಲ್ಲ.

ಸೆ.5ರಿಂದ ನೋಂದಣಿ ಆರಂಭವಾಗಿದ್ದು, ಅ.20 ಕೊನೆ ದಿನವಾಗಿದೆ. ನೋಂದಣಿ ಅವಧಿಯನ್ನು ವಿಸ್ತರಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.

ಮುಂಗಾರು ಹಂಗಾಮಿನಲ್ಲಿ ಉದ್ದು 15.1 ಸಾವಿರ ಹೆಕ್ಟೇರ್ ಹಾಗೂ ಸೋಯಾಬಿನ್ 40.1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಗುರಿಗಿಂತ ಹೆಚ್ಚು ಬಿತ್ತನೆಯಾಗಿತ್ತು.

‘ಉದ್ದು ಬೆಳೆದಿದ್ದೇನೆ. ಮಳೆಯಿಂದಾಗಿ ಬೆಳೆ ಒಣಗಿಸುವುದು ಸಮಸ್ಯೆಯಾಗಿದೆ. ಬೆಳೆ ಖರೀದಿ ನೋಂದಣಿ ಅವಧಿ ವಿಸ್ತರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ’ ಎಂದು ಕುಂದಗೊಳದ ಬೆಳೆಗಾರ ಜಗದೀಶ ಕುಡುವಕಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೆಯಲ್ಲಿ ಬೆಳೆ ದಾಸ್ತಾನು ಇಡುವುದು ಕಷ್ಟವಾಗಿದೆ. ಖರೀದಿಗೆ ನೋಂದಣಿ ಮಾಡಿಸಿದರೆ ಸಾಲದು, ಖರೀದಿ ಪ್ರಕ್ರಿಯೆಯನ್ಣೂ ತಕ್ಷಣ ಆರಂಭಿಸಬೇಕು. ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಕೆಲಗೇರಿಯ ರೈತ ಅಶೋಕ ಗಿಡ್ಡಣ್ಣವರ ಒತ್ತಾಯಿಸುತ್ತಾರೆ.

ಎಂಎಸ್ಪಿ ಯೋಜನೆಯಡಿ ನಿಗದಿಪಡಿಸಿರುವ ದರ ಮಾರುಕಟ್ಟೆ ಮೌಲ್ಯಕ್ಕಿಂತ ಸ್ವಲ್ಪ ಜಾಸ್ತಿ ಇದೆ. ಆದರೆ, ತೇವಾಂಶ ಶೇ 12 ನಿಗದಿಪಡಿಸಿದ್ದಾರೆ. ಮಳೆಯಿಂದಾಗಿ ಬೆಳೆ ಪೂರ್ತಿ ಒಣಗಿಲ್ಲ, ತೇವಾಂಶ ಹೆಚ್ಚು ಇದೆ. ಹೀಗಾಗಿ, ಬೆಳೆ ಮಾರಾಟ ಮಾಡಲು ಆಗುತ್ತಿಲ್ಲ. ತೇವಾಂಶ ಪ್ರಮಾಣವನ್ನು ಶೇ 20ಕ್ಕೆ ನಿಗದಿಪಡಿಸಬೇಕು ಎಂಬುದು ರೈತರ ಬೇಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.