ನರೇಗಲ್: ‘ಬೀಚಿಯವರು ತಮ್ಮ ಸಂದೇಶಗಳನ್ನು ಹಾಸ್ಯದ ಮೂಲಕ ಜನರಿಗೆ ಉಣ ಬಡಿಸಿದರು. ಅವರ ಹಾಸ್ಯದಲ್ಲಿ ವಿಡಂಬನೆ ಇತ್ತಾದರೂ ಅದರಲ್ಲಿ ಅರ್ಥ ಇರುತ್ತಿತ್ತು. ಹೀಗಾಗಿ ಕನ್ನಡ ನಾಡಿನ ಅಪರೂಪದ ಸಾಹಿತಿಯಾಗಿ ಪ್ರಸಿದ್ಧಿ ಪಡೆದಿದ್ದಾರೆ’ ಎಂದು ಗಂಗಾವತಿ ಪ್ರಾಣೇಶ್ ಹೇಳಿದರು.

ಪಟ್ಟಣದ ಹಿರೇಮಠದ ಸಭಾ ಭವನದಲ್ಲಿ ಭಾನುವಾರ ಸಂಜೆ ನಡೆದ ಬೀಚಿ ಬಳಗದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮನುಷ್ಯ ಬೆಳೆದಂತೆ ಅವನ ಆಯುಷ್ಯ ಕಡಿಮೆಯಾಗುತ್ತ ಹೋಗುತ್ತದೆ. ಆದರೆ ಸಂಘಟನೆಗಳು ಬೆಳೆದಂತೆ ಅವುಗಳ ಆಯುಷ್ಯ ಹೆಚ್ಚಾಗುತ್ತದೆ. ಆದ್ದರಿಂದಲೆ ಸಂಘ-ಸಂಸ್ಥೆಗಳು ದಶಮಾನೋತ್ಸವ, ಬೆಳ್ಳಿ ಮಹೋತ್ಸವ, ಸುವರ್ಣ ಮಹೋತ್ಸವ, ಅಮೃತ ಮಹೋತ್ಸವ, ಶತಮಾನೋತ್ಸವಗಳನ್ನು ಆಚರಿಸುವ ರೂಢಿ ನಮ್ಮಲ್ಲಿದೆ. ನರೇಗಲ್ ಬೀಚಿ ಬಳಗವು ಶತಮಾನೋತ್ಸವವನ್ನು ಆಚರಿಸುವಂತಾಗಲಿ’ ಎಂದರು. ನಂತರ ತಮ್ಮ ಹಾಸ್ಯದ ಮಾತುಗಳ ಧಾಟಿಯಲ್ಲಿ ಅನೇಕ ಪ್ರಸಂಗಗಳನ್ನು ಹೇಳಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.

ಅನಿಲ ವೈದ್ಯ, ಬಸವರಾಜ ಮಹಾಮನಿ ಮತ್ತು ನರಸಿಂಹ ಜೋಶಿಯವರ ತಮ್ಮ ಮಾತುಗಳ ಮೂಲಕ ಜನರನ್ನು ರಂಜಿಸಿದರು.

ಬೀಚಿ ಬಳಗದ ನಿಕಟಪೂರ್ವ ಅಧ್ಯಕ್ಷರಾದ ಡಿ.ಎ. ಅರವಟಗಿಮಠ, ಎಂ.ಎಸ್. ದಢೇಸೂರಮಠ, ಅರುಣ ಬಿ. ಕುಲಕರ್ಣಿ, ಎಸ್.ಜಿ. ಗುರಿಕಾರ, ಎಸ್.ಸಿ. ಗುಳಗಣ್ಣವರ, ಆರ್.ಕೆ. ಗಚ್ಚಿನಮಠ, ಸುರೇಶ ಹಳ್ಳಿಕೇರಿ, ಸ್ಮರಣ ಸಂಚಿಕೆಯ ಸಂಪಾದಕ ಕಲ್ಲಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್, ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಹಾಲಕೆರೆ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ, ಮಿಥುನ ಪಾಟೀಲ, ಶೇಖರ ಡಿ. ಸಜ್ಜನರ, ಕೆ.ಬಿ. ಧನ್ನೂರ, ಎನ್.ಆರ್. ಗೌಡರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.