ಸಾಂಪ್ರದಾಯಿಕ ಶೈಲಿಯ ಗಾದಿ ತಯಾರಿಕೆಯಲ್ಲಿ ನಿರತವಾಗಿರುವ ಹೊಸಹಳ್ಳಿ ಗ್ರಾಮದ ಬಾಬರಸಾಬ್ ನದಾಫ
ಆರ್ಥಿಕ ಶಕ್ತಿ ತುಂಬಬೇಕಿದೆ
ನದಾಫ ಪಿಂಜಾರ ಸಮುದಾಯವು ಧಾರ್ಮಿಕ ಅಲ್ಪಸಂಖ್ಯಾತ ಮುಸ್ಲಿಂ ಧರ್ಮದಲ್ಲಿ ಒಂದು ಪಂಗಡವಾಗಿದೆ. ಆರ್ಥಿಕ–ಸಾಮಾಜಿಕ–ಶೈಕ್ಷಣಿಕವಾಗಿ ತೀರಾ ಹಿಂದುಳಿದಿದೆ. ತಾಲ್ಲೂಕಿನ ವಿವಿಧ ಸಮುದಾಯಗಳ ಪೈಕಿ ಒಂದಾಗಿದ್ದು ಪಾರಂಪರಿಕ ವೃತ್ತಿಯೊಂದಿಗೆ ಬೆಸೆದುಕೊಂಡಿರುವ ಸಮಾಜದ ಅಭಿವೃದ್ಧಿಗೆ ಸರ್ಕಾರ ಕೈಜೋಡಿಸಬೇಕು. ಸಮುದಾಯದ ಸಂಸ್ಕೃತಿ ಸಂಪ್ರದಾಯದ ಜೊತೆ ಆರ್ಥಿಕ ಶಕ್ತಿ ತುಂಬುವ ಯೋಜನೆಗಳನ್ನು ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತರಬೇಕು –ಎಸ್.ವಿ. ಸಂಕನಗೌಡ್ರ ಸಮಾಜಶಾಸ್ತ್ರ ಉಪನ್ಯಾಸಕ ಎಸ್.ಎಸ್.ಬಿ. ಕಾಲೇಜು ರೋಣ