ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೋಧನೆಗೆ ತಂತ್ರಜ್ಞಾನ ಬಳಕೆ: ಶಿಕ್ಷಕ ವಿವೇಕಾನಂದಗೌಡ ಕಾರ್ಯಕ್ಕೆ ಮೆಚ್ಚುಗೆ

Published : 5 ಸೆಪ್ಟೆಂಬರ್ 2024, 5:29 IST
Last Updated : 5 ಸೆಪ್ಟೆಂಬರ್ 2024, 5:29 IST
ಫಾಲೋ ಮಾಡಿ
Comments

ಗದಗ: ‘ತರಗತಿಯೊಳಗೆ ‘ಚಾಕ್‌ ಆ್ಯಂಡ್‌ ಟಾಕ್‌’ಗಿಂತ ದೃಕ್‌ಶ್ರವಣ ಮಾದರಿಯ ಬೋಧನೆ ಹೆಚ್ಚು ಪರಿಣಾಮಕಾರಿ’ ಎಂದು ಎಸ್.ಎಂ.ಕೃಷ್ಣ ನಗರದ ಸರ್ಕಾರಿ ಪ್ರೌಢಶಾಲೆ ಇಂಗ್ಲಿಷ್‌ ಭಾಷಾ ಶಿಕ್ಷಕ ವಿವೇಕಾನಂದಗೌಡ ಪಾಟೀಲ ನಂಬಿದ್ದಾರೆ. ಅವರ ವಿಡಿಯೊ ಪಾಠಗಳನ್ನು ರಾಜ್ಯದೆಲ್ಲೆಡೆ 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವೀಕ್ಷಣೆ ಮಾಡಿದ್ದಾರೆ.

ಗ್ರಾಮೀಣ ಮಕ್ಕಳಿಗೆ ಕಬ್ಬಿಣದ ಕಡಲೆ ಎನಿಸಿರುವ ಇಂಗ್ಲಿಷ್‌ ಪಠ್ಯವನ್ನು ಅವರಿಗೆ ಸರಳವಾಗಿ ಅರ್ಥೈಸಲು ಯುಟ್ಯೂಬ್‌ ಚಾನೆಲ್‌ ಆರಂಭಿಸಿರುವ ಅವರು, 8, 9 ಮತ್ತು ಎಸ್‌ಎಸ್‌ಎಲ್‌ಸಿ ತರಗತಿಯ ಇಂಗ್ಲಿಷ್‌ ಪಠ್ಯ, ವ್ಯಾಕರಣ ವಿಷಯಗಳನ್ನು ವಿಡಿಯೊ ಮಾಡಿ ಅಪ್‌ಲೋಡ್‌ ಮಾಡುತ್ತಾರೆ. ಜೊತೆಗೆ ಶಾಲೆಯಲ್ಲಿ ಇಂಗ್ಲಿಷ್‌ ಬೋಧನೆಗೆ ಸ್ಮಾರ್ಟ್‌ ಬೋರ್ಡ್‌ ಬಳಸುತ್ತಾರೆ.

‘ತರಗತಿಯೊಳಗೆ ಪಠ್ಯವನ್ನು ಬಾಯಲ್ಲಿ ಹೇಳುವುದಕ್ಕಿಂತ ವಿದ್ಯಾರ್ಥಿಗಳಿಗೆ ದೃಶ್ಯ ಮತ್ತು ಶ್ರವಣ ಮಾಧ್ಯಮದಲ್ಲಿ ಹೇಳಿಕೊಡುವುದು ಹೆಚ್ಚು ಪರಿಣಾಮಕಾರಿ. ವಿದ್ಯಾರ್ಥಿಗಳು ದೃಶ್ಯ ಮತ್ತು ಶ್ರವಣ ಮಾಧ್ಯಮದ ಮೂಲಕ ಹೇಳಿಕೊಟ್ಟರೆ ಅವರ ಕಲಿಕೆಯ ಪ್ರಮಾಣ ಶೇ 60ರಷ್ಟಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳು ಬೆಳೆದ ವಾತಾವರಣ, ಕಲಿಕೆಯ ಬುನಾದಿ ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ವಿಡಿಯೊ ಮಾಡಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡುವೆ’ ಎಂದು ಶಿಕ್ಷಕ ವಿವೇಕಾನಂದ ಗೌಡ ಪಾಟೀಲ ಹೇಳುತ್ತಾರೆ.

ವಿದ್ಯಾರ್ಥಿಗಳು ಸ್ವಂತವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಆಶಯದಿಂದ 2,000 ಲರ್ನಿಂಗ್‌ ಕಾರ್ಡ್‌ಗಳನ್ನು ತಯಾರಿಸುವ ಯೋಜನೆ ಹೊಂದಿದ್ದಾರೆ. ಇಂಗ್ಲಿಷ್‌ ಲ್ಯಾಬ್‌ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ತಮ್ಮ ಇಂಗ್ಲಿಷ್‌ ಪಾಠದ ವಿಡಿಯೊ ಲಿಂಕ್‌ ಅನ್ನು ರಾಜ್ಯಮಟ್ಟದ ಇಂಗ್ಲಿಷ್‌ ಭಾಷಾ ಶಿಕ್ಷಕರ ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ಹಂಚಿಕೊಳ್ಳು ತ್ತಾರೆ.

ವಿಡಿಯೊ ವೀಕ್ಷಣೆಗೆ https://shorturl.at/lZ0uG

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT