ಹಾಸನ: ನಾಡಪ್ರಭು ಕೆಂಪೇಗೌಡರ ಉತ್ಸವ ಹಾಗೂ ಬ್ಯುಸಿನೆಸ್ ಅವಾರ್ಡ್ ಕಾರ್ಯಕ್ರಮವು ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷ ಕಿರಣ್ ಅಧ್ಯಕ್ಷತೆಯಲ್ಲಿ ದುಬೈನ ರಿಟ್ಸ್ ಕಾರ್ಟನ್ ಹೋಟೆಲ್ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

ಉದ್ಘಾಟಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ‘ಕೆಂಪೇಗೌಡರ ಉತ್ಸವದ ಈ ವೇದಿಕೆಯು ಕನ್ನಡಿಗರ ಏಕತೆಯ ಪ್ರತಿಬಿಂಬವಾಗಿದೆ. ಕನ್ನಡ ನಾಡು ಹಾಗೂ ಭಾವೈಕ್ಯವನ್ನು ಎತ್ತಿ ಹಿಡಿಯುವ ಮಹತ್ವದ ಕಾರ್ಯ ಈ ಉತ್ಸವದಿಂದ ಆಗಿದೆ. ಇಂತಹ ಕಾರ್ಯಕ್ರಮ ಕೆಂಪೇಗೌಡರ ಆದರ್ಶಗಳನ್ನು ಸ್ಮರಿಸಲು ಇನ್ನಷ್ಟು ಪ್ರೇರಣೆ ನೀಡುತ್ತವೆ’ ಎಂದರು.

ಪಶು ಸಂಗೋಪನಾ ಸಚಿವ ವೆಂಕಟೇಶ್, ಶಾಸಕ ಡಾ.ಅಶ್ವತ್ಥ ನಾರಾಯಣ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ, ನಟ ಉಪೇಂದ್ರ, ನಟಿ ಪ್ರಿಯಾಂಕಾ ಉಪೇಂದ್ರ, ನಿರ್ದೇಶಕ ಟಿ.ಎಸ್. ನಾಗಾಭರಣ, ಯುವ ನಟ ಅಭಿಷೇಕ್ ಅಂಬರೀಷ್, ಮಂಡ್ಯ ಶಾಸಕ ರವಿಕುಮಾರ್ ಉಪಸ್ಥಿತರಿದ್ದರು.

ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಚಿಕ್ ಸ್ವಾಮಿ, ರಂಗಧಾಮಯ್ಯ, ರೊನಾಲ್ಡ್ ಕೊಲಾಸೋ, ರವಿಯಣ್ಣ, ಮೋಹನ್ ಬಾಬು, ಶಂಕರೇಗೌಡ, ಮೊಹಮ್ಮದ್ ಅಮೀನುದ್ದೀನ್ ಅವರಿಗೆ ದುಬೈ ಕೆಂಪೇಗೌಡ ಬ್ಯುಸಿನೆಸ್ ಅವಾರ್ಡ್ ನೀಡಿ ಗೌರವಿಸಲಾಯಿತು.

ಸಾಂಸ್ಕೃತಿಕ ನೃತ್ಯ, ಸಂಗೀತ ಕಾರ್ಯಕ್ರಮ ಮಾತ್ರವಲ್ಲದೇ ಕನ್ನಡದ ರಾಪರ್ ಆಲ್ ಓಕೆ ರಚಿಸಿ ಹಾಡಿದ ಕೆಂಪೇಗೌಡರ ಕುರಿತಾದ ಪದ್ಯ ಬಿಡುಗಡೆಯೂ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಕಿರಣ್ಗೌಡ, ‘ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಸ್ಮರಣೆ ಹಾಗೂ ಕನ್ನಡ ಸಂಸ್ಕೃತಿ ಹಾಗೂ ಪರಂಪರೆಯನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಸರಿಸುವ ಐತಿಹಾಸಿಕ ಕಾರ್ಯಕ್ರಮವನ್ನು ಒಕ್ಕಲಿಗರ ಸಂಘ ದುಬೈ, ಅರ್ಥಪೂರ್ಣವಾಗಿ ಆಚರಿಸಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.