ಕುಮಾರಪಟ್ಟಣ: ಎಲ್ಲರಿಗೂ ಹಿತವಾಗಿರುವ ಕನ್ನಡ ಭಾಷೆ ನಮ್ಮ ಭಾವನೆಗಳ ಜೊತೆಗೆ ಬೆರೆತುಕೊಂಡಿದೆ. ಬರಹದ ಜೊತೆಗೆ ಸಾಂಸ್ಕೃತಿಕ ಬದುಕನ್ನು ಕಲಿಸುವ ಕನ್ನಡ ಸುಲಲಿತ ಭಾಷೆಯೂ ಆಗಿದೆ ಎಂದು ಚಿತ್ರನಟ ರಮೇಶ ಅರವಿಂದ್ ಅಭಿಪ್ರಯಪಟ್ಟರು.

ಇಲ್ಲಿನ ಆದಿತ್ಯ ಬಿರ್ಲಾ ಗ್ರಾಸಿಂ ಕಾಲೊನಿಯಲ್ಲಿ ಸೋಮವಾರ ಕನ್ನಡ ಅಭಿಮಾನಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಸಿಂ ಯುನಿಟ್ ಹೆಡ್ ಅಜಯಕುಮಾರ್ ಗುಪ್ತ ಮಾತನಾಡಿ, ತಾಯಿ ಭುವನೇಶ್ವರಿ ದೇವಿಯ ತೇರು ನಿರ್ಮಿಸಲಾಗಿದ್ದು, ಮೊದಲನೇ ಸಾಲಿನಲ್ಲಿ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳು, ಎರಡನೇ ಸಾಲಿನಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಶಿವಕುಮಾರ ಸ್ವಾಮೀಜಿ, ಸಂತ ಶಿಶುನಾಳ ಶರೀಫ, ಸಿದ್ಧಾರೂಢರ ಭಾವಚಿತ್ರ, ಮೂರನೇ ಸಾಲಿನಲ್ಲಿ ವರನಟ ರಾಜಕುಮಾರ, ಸರ್.ಎಂ.ವಿಶ್ವೇಶ್ವರಯ್ಯ, ಅನಿಲ್ ಕುಂಬ್ಳೆ, ಫರ್ಡಿನೆಂಡ್ ಕಿಟೆಲ್, ಮೈಸೂರಿನ ಒಡೆಯರು, ಡಿ.ವಿ. ಗುಂಡಪ್ಪ ಹಾಗೂ ಪ್ರಕಾಶ್ ಪಡುಕೋಣೆಯವರ ಭಾವಚಿತ್ರಗಳು ರಾಜ್ಯೋತ್ಸವದ ಮೆರುಗನ್ನು ಹೆಚ್ಚಿಸಿದವು ಎಂದು ವಿವರಿಸಿದರು

ಚಿತ್ರನಟ ರಮೇಶ್ ಅರವಿಂದ್ ಸೇರಿದಂತೆ ಕಲಾವಿದರು, ವಿವಿಧ ರಾಜ್ಯಗಳ ಕಂಪನಿಯ ಉದ್ಯೋಗಿಗಳು, ಮಹಿಳೆಯರು, ಮಕ್ಕಳು ಕೈಯಲ್ಲಿ ಕನ್ನಡದ ಭಾವುಟ ಹಿಡಿದು ಕನ್ನಡದ ಹಾಡುಗಳಿಗೆ ಹೆಜ್ಜೆ ಹಾಕಿ ಗಮನ ಸೆಳೆದರು. ಕನ್ನಡದ ತೇರು ಕಾಲೊನಿಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.

ನಿಧಿ ಅಜಯಕುಮಾರ್ ಗುಪ್ತ, ಗ್ರಾಸಿಂ ಕಂಪನಿಯ ಉಪಾಧ್ಯಕ್ಷ ಸಂದೀಪ ಭಟ್, ರಾಘವೇಂದ್ರ ಅಡಿಗ, ರಾಜ್ಯೋತ್ಸವ ಸಂಘಟಕರಾದ ವೀರಾರಾಧ್ಯ ಮತ್ತು ತಂಡದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.