ಹಂಸಭಾವಿ (ಹಾವೇರಿ): ರೈತರ ಬಯೊಮೆಟ್ರಿಕ್ ಹ್ಯಾಕ್ ಮಾಡಿ ಅವರಿಗೆ ಅರಿವಿಲ್ಲದಂತೆ ಕಿಡಿಗೇಡಿಗಳು ಬ್ಯಾಂಕ್ ಖಾತೆಯಿಂದ ಹಣ ಕಳವು ಮಾಡಿದ ಘಟನೆ ಸಮೀಪದ ಬತ್ತಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಬತ್ತಿಕೊಪ್ಪ ಗ್ರಾಮದ ರಾಮಪ್ಪ ಮೋಟಣ್ಣನವರ ಅವರ ಎಸ್ಬಿಐ ಖಾತೆಯಿಂದ ಅಕ್ಟೋಬರ್ 29ರಿಂದ ನವೆಂಬರ್ 5ರವರೆಗೆ ದಿನ ಬಿಟ್ಟು ದಿನ ₹9 ಸಾವಿರದಿಂದ ₹10 ಸಾವಿರದವರೆಗೆ ಕಳವು ಮಾಡಿದ್ದಾರೆ.

‘ಅದೇ ಗ್ರಾಮದ ಹನುಮಂತಪ್ಪ ಮೋಟಣ್ಣನವರ ಅವರ ನೆಶ್ವಿ ಗ್ರಾಮದಲ್ಲಿನ ಕೆವಿಜಿ ಬ್ಯಾಂಕ್ ಖಾತೆಯಿಂದ ಅಕ್ಟೋಬರ್ 24ರಿಂದ ನವೆಂಬರ್ 3ವರೆಗೆ ದಿನ ಬಿಟ್ಟು ದಿನ ₹8 ಸಾವಿರದಿಂದ ₹10 ಸಾವಿರದವರೆಗೆ ಹಣ ಕಳವು ಮಾಡಲಾಗಿದೆ. ಇಬ್ಬರೂ ರೈತರ ಖಾತೆಯಿಂದ ₹1.24 ಲಕ್ಷ ಹಣ ಕಳವು ಆಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ’ ಎಂದು ಹಂಸಭಾವಿ ಪೊಲೀಸ್ ಠಾಣೆಯ ಪಿಎಸ್ಐ ಚಂದನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.