ಹಾವೇರಿ: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಬ್ಬು ಬೆಳೆಯ ಫಸಲು ಶುರುವಾಗಿದೆ. ಕಬ್ಬಿನ ಕಟಾವು ಕೆಲಸ ಚುರುಕುಗೊಂಡಿದ್ದು, ಕಬ್ಬು ತುಂಬಿದ ಲಾರಿಗಳು ಹಾಗೂ ಟ್ರ್ಯಾಕ್ಟರ್ಗಳು ಕಾರ್ಖಾನೆಯತ್ತ ಮುಖ ಮಾಡುತ್ತಿವೆ. ಸರ್ಕಾರದ ಆದೇಶದಂತೆ ಶುಕ್ರವಾರದಿಂದ (ನ.8) ಕಬ್ಬು ನುರಿಸುವ ಕೆಲಸ ಆರಂಭವಾಗಿದ್ದು, ಕಾರ್ಖಾನೆಗಳ ಎದುರು ಲಾರಿಗಳು ಹಾಗೂ ಟ್ರ್ಯಾಕ್ಟರ್ಗಳು ಸಾಲುಗಟ್ಟಿ ನಿಂತಿವೆ.

ಜಿಲ್ಲೆಯ ಸಂಗೂರಿನಲ್ಲಿರುವ ಜಿ.ಎಂ. ಶುಗರ್ ಆ್ಯಂಡ್ ಎನರ್ಜಿ ಕಂಪನಿ, ಶಿಗ್ಗಾವಿ ತಾಲ್ಲೂಕಿನ ಶಿವಪುರ- ಕೋಣನಕೇರಿ ರಸ್ತೆಯಲ್ಲಿರುವ ವಿ.ಐ.ಎನ್.ಪಿ ಡಿಸ್ಟಿಲರೀಸ್ ಮತ್ತು ಶುಗರ್ಸ್ ಕಂಪನಿ ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಭೈರನಪಾದ ಬಳಿಯ ಜಿ.ಎಂ. ಶುಗರ್ಸ್ ಕಾರ್ಖಾನೆಗಳು ಕಬ್ಬು ನುರಿಸುವ ಕೆಲಸ ಆರಂಭಿಸಿವೆ.

ಜಿಲ್ಲೆಯ ಹಾವೇರಿ, ಹಾನಗಲ್, ಬ್ಯಾಡಗಿ, ಶಿಗ್ಗಾವಿ, ಸವಣೂರು, ರಟ್ಟೀಹಳ್ಳಿ, ರಾಣೆಬೆನ್ನೂರು, ಹಿರೇಕೆರೂರು ತಾಲ್ಲೂಕಿನಲ್ಲಿರುವ ರೈತರು ಕಬ್ಬು ಬೆಳೆದಿದ್ದಾರೆ. ಕಬ್ಬು ಬೆಳೆದಿರುವ ಜಮೀನುಗಳಿಗೆ ತೆರಳುತ್ತಿರುವ ಕಾರ್ಖಾನೆ ಸಿಬ್ಬಂದಿ, ರೈತರ ಜೊತೆ ಮಾತುಕತೆ ನಡೆಸಿ ಕಬ್ಬು ಖರೀದಿಸುತ್ತಿದ್ದಾರೆ. ಕಬ್ಬು ಕಟಾವು ಮಾಡಲು ಕಾರ್ಖಾನೆಯವರು ತಮ್ಮದೇ ಕಾರ್ಮಿಕರ ತಂಡವನ್ನೂ ಕಳುಹಿಸುತ್ತಿದ್ದಾರೆ.

ಏಳು ದಿನ ಮುಂಚೆಯೇ ಕಾರ್ಖಾನೆ ಆರಂಭ: ರಾಜ್ಯದ ಎಲ್ಲ ಕಾರ್ಖಾನೆಗಳನ್ನು ನವೆಂಬರ್ 15ರಿಂದ ಆರಂಭಿಸುವಂತೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಆದೇಶ ಹೊರಡಿಸಿದ್ದರು. ಆದೇಶ ಪಾಲನೆ ಮಾಡಿಲ್ಲವೆಂಬ ಕಾರಣಕ್ಕೆ ಭೈರನಪಾದ ಬಳಿಯ ಜಿ.ಎಂ. ಶುಗರ್ಸ್ ಕಾರ್ಖಾನೆಯ ಬಾಗಿಲನ್ನು ಜಿಲ್ಲಾಡಳಿತ ಅಧಿಕಾರಿಗಳು ಬಂದ್ ಮಾಡಿಸಿದ್ದರು.

‘ಕಬ್ಬು ಕಟಾವು ಹಂತಕ್ಕೆ ಬಂದಿದೆ. ಕಾರ್ಖಾನೆಗೆ ಸಾಗಿಸಿ ನುರಿಸಬೇಕು. ಇಲ್ಲದಿದ್ದರೆ, ಕಬ್ಬು ಹಾಳಾಗುತ್ತದೆ’ ಎಂದು ರೈತರು ಹಾಗೂ ಕಾರ್ಖಾನೆಯವರು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸಚಿವ, ನವೆಂಬರ್ 8ರಿಂದ ಕಾರ್ಖಾನೆ ಆರಂಭಿಸುವಂತೆ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ. ಮೊದಲು ನಿಗದಿಯಾಗಿದ್ದ ದಿನಾಂಕಕ್ಕಿಂತ ಏಳು ದಿನಕ್ಕೂ ಮುಂಚೆಯೇ ಶುಕ್ರವಾರದಿಂದ ರಾಜ್ಯದ ಎಲ್ಲ ಕಾರ್ಖಾನೆಗಳು ಕೆಲಸ ಶುರು ಮಾಡಿವೆ.

ಜಿಲ್ಲೆಯಲ್ಲಿರುವ ಮೂರು ಕಾರ್ಖಾನೆಗಳು ಸಹ ಆರಂಭವಾಗಿದ್ದು, ಕಬ್ಬು ಸಂಗ್ರಹಿಸಿಟ್ಟುಕೊಂಡು ನುರಿಸುವ ಕೆಲಸ ಶುರುವಾಗಿದೆ. ಚಿಮಣಿಗಳು ಹೊತ್ತಿದ್ದು, ಕಬ್ಬಿನಿಂದ ಸಕ್ಕರೆ ಹಾಗೂ ಡಿಸ್ಟಿಲರೀಸ್ ತೆಗೆಯುವ ಪ್ರಕ್ರಿಯೆ ನಡೆಯುತ್ತಿದೆ.

‘ಸರ್ಕಾರದ ಸೂಚನೆಯಂತೆ ಶುಕ್ರವಾರದಿಂದ ಕಾರ್ಖಾನೆ ಶುರು ಮಾಡಲಾಗಿದೆ. ಕಬ್ಬು ನುರಿಸುವ ಕೆಲಸ ಚುರುಕಿನಿಂದ ನಡೆಯುತ್ತಿದೆ’ ಎಂದು ಜಿ.ಎಂ. ಶುಗರ್ ಆ್ಯಂಡ್ ಎನರ್ಜಿ ಕಂಪನಿಯ ನಿರ್ದೇಶಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲ ದಿನಗಳ ಹಿಂದೆಯೇ ಕಟಾವು ಶುರುವಾಗಿದೆ. ಕಟಾವು ಮಾಡಿರುವ ಕಬ್ಬು ಕಾರ್ಖಾನೆಗೆ ಬರುತ್ತಿದೆ. ಕಬ್ಬು ಸಂಗ್ರಹವಿಟ್ಟುಕೊಂಡು ಕಾರ್ಖಾನೆ ಆರಂಭಿಸಲಾಗಿದೆ’ ಎಂದು ಹೇಳಿದರು.

ಕಡಿಮೆಯಾದ ಇಳುವರಿ: ಜಿಲ್ಲೆಯ 7,044 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಅಂತರ್ಜಲ ಮಟ್ಟ ಕುಸಿತ ಹಾಗೂ ಮಳೆ ಅಭಾವದಿಂದಾಗಿ ಈ ವರ್ಷ ಕಬ್ಬಿನ ಇಳುವರಿ ಕುಂಠಿತವಾಗಿದೆ.

‘ಜಿಲ್ಲೆಯಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಕಬ್ಬಿನ ಇಳುವರಿ ತೀರಾ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಮೂರು ಕಾರ್ಖಾನೆಗಳಿವೆ. ಅವುಗಳ ಬೇಡಿಕೆಗೆ ತಕ್ಕಷ್ಟು ಕಬ್ಬು ಜಿಲ್ಲೆಯಲ್ಲಿಲ್ಲ. ಕಬ್ಬು ಸಂಗ್ರಹಿಸುವುದೇ ದೊಡ್ಡ ಸವಾಲಾಗಿದೆ’ ಎಂದು ಕಾರ್ಖಾನೆ ನಿರ್ದೇಶಕ ಹೇಳಿದರು.

ದರಕ್ಕೆ ರೈತರ ಅಸಮಾಧಾನ: ಕಬ್ಬು ಖರೀದಿಗೆ ಸರ್ಕಾರವೇ ಎಫ್ಆರ್ಪಿ (ಮುಕ್ತ ಹಾಗೂ ನ್ಯಾಯಸಮ್ಮತ) ಬೆಲೆ ನಿಗದಿಪಡಿಸಿವೆ. ಈ ದರಕ್ಕಿಂತ ಹೆಚ್ಚಿನ ದರವನ್ನು ರೈತರಿಗೆ ನೀಡಿ ಕಾರ್ಖಾನೆಗಳು ಕಬ್ಬು ಖರೀದಿಸುತ್ತಿವೆ. ಆದರೆ, ಹಾವೇರಿ ಜಿಲ್ಲೆಯ ಎರಡು ಕಾರ್ಖಾನೆಗಳು ಸೂಕ್ತ ದರ ನೀಡುತ್ತಿಲ್ಲವೆಂದು ರೈತರು ದೂರುತ್ತಿದ್ದಾರೆ.

‘ಶೇ 10.25ರಷ್ಟು ಸಕ್ಕರೆ ಇಳುವರಿ ಇರುವ ಕಬ್ಬಿಗೆ ಜಿ.ಎಂ. ಶುಗರ್ ಆ್ಯಂಡ್ ಎನರ್ಜಿ ಕಂಪನಿಯವರು ಪ್ರತಿ ಕ್ವಿಂಟಲ್ಗೆ ₹ 3,150 ನೀಡುತ್ತಿದ್ದಾರೆ. ವಿ.ಐ.ಎನ್.ಪಿ ಡಿಸ್ಟಿಲರೀಸ್ ಮತ್ತು ಶುಗರ್ಸ್ ಕಂಪನಿಯವರು, ₹ 3,261 ಕೊಡುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಕಾರ್ಖಾನೆಗಳ ಬೆಲೆಯಲ್ಲಿ ವ್ಯತ್ಯಾಸವಿದೆ’ ಎಂದು ಕಬ್ಬು ಬೆಳೆಗಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ದೂರಿದರು.

‘ಕಬ್ಬಿಗೆ ಎಫ್ಆರ್ಪಿ ದರಕ್ಕಿಂತ ಹೆಚ್ಚಿನ ದರವನ್ನು ನಿಗದಿ ಮಾಡಬೇಕು. ಅಲ್ಲಿಯವರೆಗೂ ಕಬ್ಬು ನುರಿಸುವ ಕೆಲಸ ಆರಂಭಿಸದಂತೆ ಆಗ್ರಹಿಸಲಾಗಿತ್ತು. ಆದರೆ, ಸಚಿವರ ಸೂಚನೆಯಂತೆ ಕಾರ್ಖಾನೆಗಳು ಆರಂಭವಾಗಿವೆ. ಇದರಿಂದ ರೈತರಿಗೆ ಸೂಕ್ತ ಬೆಲೆ ಸಿಗದೇ ಅನ್ಯಾಯವಾಗುತ್ತಿದೆ. ಸಚಿವರೇ ಮದ್ಯ ಪ್ರವೇಶಿಸಿ ಸೂಕ್ತ ದರ ನಿಗದಿ ಮಾಡಬೇಕು’ ಎಂದು ಒತ್ತಾಯಿಸಿದರು.

ಅಕ್ಕ– ಪಕ್ಕದ ಜಿಲ್ಲೆಯ ಕಾರ್ಖಾನೆಗಳ ಕಣ್ಣು

ಹಾವೇರಿ ಜಿಲ್ಲೆಯ ಅಕ್ಕ–ಪಕ್ಕದಲ್ಲಿರುವ ದಾವಣಗೆರೆ ಬೆಳಗಾವಿ ಜಿಲ್ಲೆಯಲ್ಲಿ ಕಾರ್ಖಾನೆಗಳಿವೆ. ಎರಡೂ ಜಿಲ್ಲೆಗಳಲ್ಲಿ ಕಬ್ಬಿನ ಇಳುವರಿ ಕಡಿಮೆ ಇದೆ. ಆ ಕಾರ್ಖಾನೆಗಳ ಕಣ್ಣು ಹಾವೇರಿ ಜಿಲ್ಲೆ ಮೇಲೆ ಬಿದ್ದಿದೆ. ಜಿಲ್ಲೆಯ ಹಾವೇರಿ ಹಾಗೂ ಹಾನಗಲ್ ತಾಲ್ಲೂಕಿನಲ್ಲಿ ತಮ್ಮದೇ ಕಾರ್ಮಿಕರ ತಂಡವನ್ನು ಕಳುಹಿಸಿರುವ ಕಾರ್ಖನೆಗಳು ಅವರ ಮೂಲಕ ಕಬ್ಬು ಕಟಾವು ಮಾಡಿಕೊಂಡು ದಾವಣಗೆರೆ–ಬೆಳಗಾವಿಗೆ ಕೊಂಡೊಯ್ಯುತ್ತಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿರುವ ಕಾರ್ಖಾನೆಗಳಿಗೆ ಕಬ್ಬು ಕೊರತೆ ಉಂಟಾಗುವ ಆತಂಕವಿದೆ. ‘ಬೇಡಿಕೆಗೆ ತಕ್ಕಷ್ಟು ಕಬ್ಬು ಇಲ್ಲ. ಹೊರ ಜಿಲ್ಲೆಯ ಕಾರ್ಖಾನೆಯವರು ಹಾವೇರಿ ಜಿಲ್ಲೆಯಿಂದ ಕಬ್ಬು ತೆಗೆದುಕೊಂಡು ಹೋಗುತ್ತಿದ್ದಾರೆ. ಕಾರ್ಖಾನೆಗಳಿಗೆ ಕಬ್ಬಿನ ಕಷ್ಟ ಎದುರಾಗುವ ದಿನಗಳು ದೂರವಿಲ್ಲ’ ಎಂದು ಕಾರ್ಖಾನೆಯೊಂದರ ನಿರ್ದೇಶಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.