ಚಿಂಚೋಳಿ (ಕಲಬುರಗಿ ಜಿಲ್ಲೆ): ಜಿಲ್ಲೆಯ ಚಿಂಚೋಳಿಯಲ್ಲಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಒಡೆತನದ ಸಿದ್ಧಸಿರಿ ಎಥೆನಾಲ್ ಹಾಗೂ ಪವರ್ ಘಟಕವು ನಿಯಮಾವಳಿ ಉಲ್ಲಂಘಿಸಿರುವುದರಿಂದ ಕಾರ್ಖಾನೆ ಮುಚ್ಚುವಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಭೇಟಿ ನೀಡಿದ ಸೇಡಂ ಉಪವಿಭಾಗಾಧಿಕಾರಿ ಆಶಪ್ಪ ಪುಜಾರಿ ಕಾರ್ಖಾನೆ ಮುಚ್ಚುವಂತೆ ಸೂಚಿಸಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶಾಂತಗೌಡ ಗುಣಕಿ, ಚಿಂಚೋಳಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಸಹಾಯಕ ಮಾಲಿನ್ಯ ನಿಯಂತ್ರಣಾಧಿಕಾರಿ ಶಾರದಾ ಅವರೊಂದಿಗೆ ಕಾರ್ಖಾನೆಗೆ ಧಾವಿಸಿದ ಆಶಪ್ಪ ಅವರು ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರೊಂದಿಗೆ ಸಭೆ ನಡೆಸಿದರು.

ಕಂಪನಿಗೆ ಹಂಚಿಕೆಯಾದ ಗ್ರಾಮಗಳ ವಿವರ, ಕಬ್ಬು ನುರಿಸಿದ ವಿವರ ಹಾಗೂ ನೀರು ಬಳಕೆಗೆ ಪಡೆದ ಅನುಮತಿ ಮತ್ತು ಸೂಕ್ತ ಪ್ರಾಧಿಕಾರದಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯದ ಬಗ್ಗೆ ಹಾಗೂ ಸ್ಥಳೀಯ ಸಂಸ್ಥೆಗೆ ತೆರಿಗೆ ಭರಿಸದೇ ಇರುವುದು ಮತ್ತು ಕಂಪನಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಏಕೆ ಪಡೆದಿಲ್ಲ, ಕಂಪೆನಿಗೆ ಎಫ್ ಆರ್ ಪಿ ನಿಗದಿಯಾಗಿಲ್ಲ ಏಕೆ ಎಂದು ಪ್ರಶ್ನಿಸಿದರು.

ಬೇರೆ ಕಂಪನಿಗಳಿಗೆ ಹಂಚಿಕೆಯಾದ ಗ್ರಾಮಗಳ ರೈತರ ಕಬ್ಬು ಖರೀದಿಸುತ್ತಿರುವ ಕುರಿತು ಕಂಪನಿ ವಿರುದ್ಧ ದೂರುಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದರು.

ಕಂಪನಿ ನ.28ರಿಂದ ಇಲ್ಲಿಯವರೆಗೆ 2,46,477 ಟನ್ ಕಬ್ಬು ನುರಿಸಲಾಗಿದೆ ಎಂದು ಕಂಪನಿಯ ಹಿರಿಯ ಅಧಿಕಾರಿ ಶಿವಕುಮಾರ ಹೊಸಮನಿ ತಿಳಿಸಿದರು.

ಕಂಪನಿಯ ಯಾರ್ಡ್ ನಲ್ಲಿ 1600 ಟನ್ ಕಬ್ಬಿದೆ. ಇದರ ಜತೆಗೆ ರೈತರ ಹೊಲಗಳಲ್ಲಿ ಕತ್ತರಿಸಿದ ಕಬ್ಬು ಬೇರೆ ಕಾರ್ಖಾನೆಗಳಿಗೆ ಸಾಗಿಸಲು ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸೂಚಿಸಿದರು. ನಾವು ಸರ್ಕಾರದ ಆದೇಶಕ್ಕೆ ಬದ್ಧರಿದ್ದೇವೆ. ಕಾರ್ಖಾನೆ ಬಂದ್ ಮಾಡುತ್ತೇವೆ ಎಂದು ಅಧಿಕಾರಿ ತಿಳಿಸಿದರು.
.ಪರಿಸರ ನಿಯಮಾವಳಿ ಉಲ್ಲಂಘನೆ ಆರೋಪ; ಯತ್ನಾಳ್ ಮಾಲೀತ್ವದ ಕಾರ್ಖಾನೆ ಮುಚ್ಚಲು ನೋಟಿಸ್.'ಕೈ'ಲಾಗದವರ ಕೊನೆಯ ಅಸ್ತ್ರವೇ ಅಪಪ್ರಚಾರ: ಸರ್ಕಾರದ ವಿರುದ್ದ ಶಾಸಕ ಯತ್ನಾಳ ಕಿಡಿ.ಶಾಸಕ ಯತ್ನಾಳ್ ಕಾರ್ಖಾನೆಗೆ ಕೇಂದ್ರವೇ ₹1.5 ಕೋಟಿ ದಂಡ ವಿಧಿಸಿತ್ತು: ಸಚಿವ ಖಂಡ್ರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.